ಪ್ರಶ್ನೆ 99: ನಮಗೆ ಯಾವಾಗ ಸಂತೋಷದ ಅನುಭವವಾಗುತ್ತದೆ?



ನಿಮ್ಮಲ್ಲಿ ಬಯಕೆಗಳು ಇಲ್ಲದಾಗ ಮತ್ತು ನಿಮಗೆ ಇತರರೊಂದಿಗೆ ಹಂಚಿಕೊಳ್ಳುವ ಮನಸ್ಸಾದಾಗ, ಸಂತೋಷದ ಅನುಭವವಾಗುತ್ತದೆ. ಎಲ್ಲಿ ಆಸೆಗಳು ಹಾಗು ಬಯಕೆಗಳು ಕೊನೆಗೊಂಡು ಹಂಚಿಕೊಳ್ಳುವ ಪ್ರವೃತ್ತಿ ಪ್ರಾರಂಭವಾಗುತ್ತದೋ, ಅಲ್ಲಿ ಸಂತೋಷವು ಇರುತ್ತದೆ. ಗತಕಾಲದ ನೆನಪು ಮಾಡಿಕೊಳ್ಳುವುದು ಸಂತೋಷವಲ್ಲ. ನೀವು ಸಂತೋಷವಾಗಿರುವಾಗ, ಬೇರೆ ಎಲ್ಲವನ್ನೂ ಮರೆತುಬಿಡುತ್ತೀರಿ.

ಸಂತೋಷವು ಕಳೆದುಹೋದ ಮೇಲೇ ನೀವು ಅದರ ನೆನಪಿನ ಮೊರೆಹೋಗುತ್ತೀರಿ. ಪ್ರಪಂಚದಲ್ಲಿ, ಜನರು ಇಲ್ಲವೇ  ಸಂತೋಷದ ಕನಸು ಕಾಣುತ್ತಿರುತ್ತಾರೆ ಅಥವಾ ಸಂತೋಷವಾಗಿದ್ದ ಸಮಯವನ್ನು ನೆನಪಿಸಿಕೊಳ್ಳುತ್ತಿರುತ್ತಾರೆ. ಅಂದರೆ ಭೂತಕಾಲದಲ್ಲಿ ಇರುತ್ತಾರೆ ಇಲ್ಲವೇ ಭವಿಷ್ಯದಲ್ಲಿ ಇರುತ್ತಾರೆ.  

ಆದರೆ ಸಂತೋಷವೆನ್ನುವುದು ವರ್ತಮಾನ ಕ್ಷಣದಲ್ಲಿದೆ, ಮತ್ತು ಅದೇ ನಿಮ್ಮ ನಿಜವಾದ ಸ್ವಭಾವವೂ ಕೂಡಾ ಆಗಿದೆ.

ಗುರುದೇವರ ಅಧಿಕೃತ ಬ್ಲಾಗ್ನಲ್ಲಿ ಈ ಲೇಖನಗಳನ್ನು ಓದಿ:

1. Formula For Happiness - Article by Gurudev - CLICK HERE TO READ

2. 20 Ancient Chants For Happiness & Well Being - Article by Gurudev - CLICK HERE TO READ





ಸೋಷಿಯಲ್ ಮೀಡಿಯಾದಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರನ್ನು ಅನುಸರಿಸಿ:

ಕಾಮೆಂಟ್‌ಗಳು