ಪ್ರಶ್ನೆ 101: ನಾನು ಒಳಗೆ ದುಃಖದಿಂದ ಬಳಲುತ್ತಿದ್ದರೂ ಸಹ, ಮುಖದಲ್ಲಿ ನಗು ಇಟ್ಟುಕೊಂಡು ಸಂತೋಷದಿಂದ ಇರಲು ಸಾಧ್ಯವೇ?

 


ಗುರುದೇವ್ ಶ್ರೀ ಶ್ರೀ ರವಿಶಂಕರ್:

ನಿಮ್ಮ ಜೀವನವು ಎಲೆಯ ಮೇಲೆ ಬಡಿಸಿದ ಮಿಶ್ರ ಭೋಜನದಂತೆ. ಇದರಲ್ಲಿ ಸಿಹಿ, ಹುಳಿ, ಉಪ್ಪು, ಖಾರ - ಹೀಗೆ ಎಲ್ಲಾ ರೀತಿಯ ವಿಭಿನ್ನ ರುಚಿಗಳೂ ಇರುತ್ತವೆ. ಅದರಿಂದ ನಿಮ್ಮ ಜೀವನದಲ್ಲೂ ಸಹ ಸ್ವಲ್ಪ ದುಃಖವಿರಬಹುದು (ಬಹುಶಃ ನೀವು ಯಾರನ್ನಾದರೂ ಕಳೆದುಕೊಂಡಿರಬಹುದು ಅಥವಾ ಹಣವನ್ನು ಕಳೆದುಕೊಂಡಿರಬಹುದು). ನಿಜ, ಅದು ನಿಮಗೆ ನೋವನ್ನುಂಟುಮಾಡುತ್ತದೆ. ಆದರೆ ನೀವು ಆ ನೋವನ್ನೇ ಹಿಡಿದಿಟ್ಟುಕೊಂಡು ಇದ್ದರೆ ಜೀವನವು ಮುಂದುವರಿಯಲು ಸಾಧ್ಯವಿಲ್ಲ. 

ಈ ಪರಿಸ್ಥಿತಿಯಲ್ಲಿ ನೀವು ಬುದ್ಧಿವಂತಿಕೆಯಿಂದ ಆಧ್ಯಾತ್ಮಿಕತೆ ಮತ್ತು ಜ್ಞಾನ ಮಾರ್ಗದಲ್ಲಿ ಸಾಗದಿದ್ದರೆ ಮತ್ತು  ಅಲ್ಲಿ ಇಲ್ಲಿ ಇರುವ ಕೆಲವು ಸಣ್ಣ ಕುಂದುಕೊರತೆಗಳನ್ನೇ ಚಿಂತಿಸುತ್ತಾ ನಗುವುದನ್ನೇ ನಿಲ್ಲಿಸಿದರೆ, ಜಗತ್ತು ನಿಮಗೆ ಒಂದು ಖಿನ್ನತೆಯ ಸ್ಥಳವಾಗಿ ಕಾಣುತ್ತದೆ. 

ನೀವು ನಗುತ್ತಲಿರಬೇಕು. ನಿಮ್ಮೊಳಗಿನ ಯಾವುದೇ ನೋವು ಅಥವಾ ಸಂಕಟಗಳು ಕೊನೆಯಾಗುತ್ತವೆ ಎಂಬ ಬಲವಾದ ವಿಶ್ವಾಸವನ್ನು ಹೊಂದಿರಬೇಕು. ಕೊನೆಗೆ ಯಾವುದೂ ಪ್ರಸ್ತುತವಲ್ಲ. ನೋವನ್ನು ಸಹಿಸಿಕೊಳ್ಳುವ ಬುದ್ಧಿಯನ್ನು ಇಟ್ಟುಕೊಂಡು ಜ್ಞಾನ ಮಾರ್ಗದಲ್ಲಿ ನಗುವಿನೊಂದಿಗೆ ಮುಂದುವರಿಯಿರಿ.

ಗುರುದೇವರ ಅಧಿಕೃತ ಬ್ಲಾಗ್ನಲ್ಲಿ ಈ ಲೇಖನಗಳನ್ನು ಓದಿ:

1. Life is a combination of Happiness & Pain : CLICK HERE TO READ



ಸೋಷಿಯಲ್ ಮೀಡಿಯಾದಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರನ್ನು ಅನುಸರಿಸಿ:

ಕಾಮೆಂಟ್‌ಗಳು