ಪದಗಳಿಗೆ ಅರ್ಥವನ್ನು ಅಂಟಿಸುವುದು ನಾವೇ ಮತ್ತು ಅವುಗಳನ್ನು ವಿರೂಪಗೊಳಿಸುವುದು ಸಹ ನಾವೇ. ಉದಾಹರಣೆಗೆ, ‘ಬ್ರೈನ್ ವಾಷಿಂಗ್’ ಎಂಬ ಪದ. ನಿಮ್ಮ ದೇಹದಂತೆಯೇ ಮೆದುಳನ್ನು ಸಹ ಕೆಲವೊಮ್ಮೆ ತೊಳೆಯುವ ಅಗತ್ಯವಿರುತ್ತದೆ. ಕೊಳಕಾದ ಮೆದುಳು ಅಥವಾ ಕೊಳಕು ಮನಸ್ಸಿನೊಂದಿಗೆ ಇರಲು ನೀವು ಬಯಸುವುದಿಲ್ಲ. ಬ್ರೈನ್ ವಾಷಿಂಗ್ ಪದದಲ್ಲಿನ ತಪ್ಪೇನು? ಇದು ತಿಳಿಯಾದ ಮೆದುಳು, ಶುದ್ಧ ಮನಸ್ಸನ್ನು ಸೂಚಿಸುತ್ತದೆ. ಆದರೆ ಇದನ್ನು ಅವಹೇಳನಕಾರಿ ರೀತಿಯಲ್ಲಿ ಬಳಸಲಾಗುತ್ತದೆ.
ಅದೇ ರೀತಿ, ‘ಡಿಸ್ಇಲ್ಯೂಷನ್’ (ಭ್ರಮನಿರಸನ) ಎಂಬ ಪದ. ನೀವು ಭ್ರಮನಿರಸನಗೊಂಡಿದ್ದಿರೆಂದರೆ ಒಳ್ಳೆಯದು. ನೀವು ಭ್ರಮೆಯಿಂದ ಹೊರಗುಳಿದಿದ್ದೀರಿ ಮತ್ತು ವಾಸ್ತವಕ್ಕೆ ಬಂದಿದ್ದೀರಿ ಎಂದು ಅರ್ಥ.
ಹಾಗೆಯೇ ಪುರಾಣ ಎಂಬ ಪದ, ಇದರ ಅರ್ಥ ಪಟ್ಟಣದಲ್ಲಿ ಹೊಸದಾದದ್ದು, ಅತ್ಯಂತ ಆಧುನಿಕ ಎಂದು. ಆದರೆ ಇಂದು ಅದನ್ನು ತುಂಬಾ ಹಳೆಯದು ಎಂಬ ಅರ್ಥವನ್ನು ಕೊಡುವಂತೆ ಉಪಯೋಗಿಸುತ್ತೇವೆ.
ಪದಗಳ ಅರ್ಥವು ಕಾಲಕ್ರಮೇಣ ಸಹ ಬದಲಾಗುತ್ತವೆ. ‘ಎಂತೂಸ್’ ಎಂಬುದು ಗ್ರೀಕ್ ಭಾಷೆಯ ಪದ. ಅಂದರೆ ದೇವರು ನಮ್ಮೊಂದಿಗಿದ್ದಾನೆ ಎಂದು. ನಂತರ, ‘ಎಂತೂಸ್’ ಪದವನ್ನು ಹುಚ್ಚು ಎಂಬರ್ಥದಲ್ಲಿ ಬಳಸುವಂತಾಯಿತು ಮತ್ತು ಇಂದು ಈ ಪದದ ಅರ್ಥವು ಮತ್ತೆ ಸಂಪೂರ್ಣವಾಗಿ ಬದಲಾಗಿದೆ.
ಹಾಗಾಗಿ ಪದಗಳಲ್ಲಿ ಸಿಲುಕಿಕೊಳ್ಳಬೇಡಿ. ನಿಮ್ಮ ಚಿಂತೆ ಈ ಪದಗಳಿಂದಲೇ. ನಿಮ್ಮ ಆಲೋಚನೆಗಳು ಸಹ ಪದಗಳಿಂದಲೇ ಆಗಿವೆ.
ಜ್ಞಾನವು ಪದಗಳನ್ನು ಮೀರಿದ್ದಾಗಿದೆ. ಅದು ನಿಮ್ಮ ಅಸ್ತಿತ್ವ, ಎಲ್ಲಾ ಪದಗಳ ಸಾರ. ಪದಗಳನ್ನು ಮೀರಿ ನೋಡಿ ಮತ್ತು ಅದರಿಂದಾಚೆಗೆ ಬೆಸೆಯಲು ಪ್ರಾರಂಬಿಸಿ. ಆಗ ನಿಮ್ಮ ಜೀವನದಲ್ಲಿ ಯಾವುದೇ ಅಸತ್ಯಗಳು ಇರುವುದಿಲ್ಲ.
ನೀವು ಪದಗಳನ್ನು ಕುಶಲತೆಯಿಂದ ಬಳಸಿದರೆ, ಅದು ಸುಳ್ಳು;
ನೀವು ಪದಗಳ ಜೊತೆ ಆಟವಾಡಿದರೆ, ಅದು ತಮಾಷೆ;
ನೀವು ಪದಗಳನ್ನು ಅವಲಂಬಿಸಿದರೆ, ಅದು ಅಜ್ಞಾನ;
ನೀವು ಪದಗಳನ್ನು ಮೀರಿದರೆ, ಅದು ಜ್ಞಾನ.
ಗುರುದೇವರ ಅಧಿಕೃತ ಬ್ಲಾಗನಲ್ಲಿ ಈ ಲೇಖನಗಳನ್ನು ಓದಿ
Wisdom is beyond words | Article by Gurudev : CLICK HERE TO READ

ಕಾಮೆಂಟ್‌ಗಳು