ನಿಮಗೆ ಸಂತೋಷವನ್ನು ನೀಡುವ ಅಥವಾ ನೀವು ಹಿಡಿದಿಟ್ಟುಕೊಂಡಿರುವ ಅಥವಾ ನಿಮಗೆ ಅಂಟಿಕೊಂಡಿರುವ ಯಾವುದನ್ನಾದರೂ, ಒಂದು ಮಹತ್ವವಾದ ಉದ್ದೇಶಕ್ಕಾಗಿ / ಕಾರ್ಯಕ್ಕಾಗಿ ಬಿಟ್ಟುಕೊಡುವುದೇ ತ್ಯಾಗವೆನಿಸುತ್ತದೆ. ತ್ಯಾಗವು ಜೀವನದಲ್ಲಿ ಶಕ್ತಿಯನ್ನು ತರುತ್ತದೆ. ತ್ಯಾಗವಿಲ್ಲದ ಜೀವನವು ನಿಂತ ನೀರಿನಂತಾಗುತ್ತದೆ. ತ್ಯಾಗವು ನಿಮ್ಮನ್ನು ಉನ್ನತ ಸ್ಥಾನಕ್ಕೆ ಕರೆದೊಯ್ಯುತ್ತದೆ.
ಸಾಮಾನ್ಯವಾಗಿ ಜನರು, ತ್ಯಾಗವು ಜೀವನವನ್ನು ಮಂದ ಮತ್ತು ಸಂತೋಷರಹಿತವಾಗಿಸುತ್ತದೆ ಎಂದು ಭಾವಿಸುತ್ತಾರೆ. ಆದರೆ ವಾಸ್ತವದಲ್ಲಿ, ತ್ಯಾಗವೇ ಜೀವನವನ್ನು ಮೌಲ್ಯಯುತವಾಗಿಸುತ್ತದೆ. ನಿಮ್ಮ ಜೀವನದಲ್ಲಿರುವ ತ್ಯಾಗದ ಪ್ರಮಾಣವು ನಿಮ್ಮ ವೈಭವವನ್ನು ಹೊರತರುತ್ತದೆ ಮತ್ತು ನಿಮಗೆ ದುಃಖದಿಂದ ಹೊರಬರಲು ಸಹಾಯ ಮಾಡುತ್ತದೆ. ತ್ಯಾಗವಿಲ್ಲದ ಜೀವನವು ಯೋಗ್ಯವಾಗಿಲ್ಲ. ಉತ್ಸಾಹ, ಶಕ್ತಿ ಮತ್ತು ಸಂತೋಷ ಎಲ್ಲವೂ ತ್ಯಾಗದೊಂದಿಗೆ ಮಿಳಿತವಾಗಿದೆ.
ಪ್ರಶ್ನೆ: ಕೆಲವರು "ನಾನು ತುಂಬಾ ತ್ಯಾಗ ಮಾಡಿದ್ದೇನೆ" ಎಂದು ಸದಾ ದೂರುತ್ತಿರುತ್ತಾರೆ?
ಉತ್ತರ: ಅದು ಒಳ್ಳೆಯದು. ತ್ಯಾಗ ಮಾಡಿರುವ ಭಾವವು ಅವರಿಗೆ ದೂರುವ ಶಕ್ತಿಯನ್ನು ನೀಡಿದೆ. ಅದು ಅವರನ್ನು ತಮ್ಮನ್ನು ತಾವೇ ದೂಷಿಸಿಕೊಳ್ಳುವುದರಿಂದ ಉಳಿಸುತ್ತದೆ. ತ್ಯಾಗವೇ ಇಲ್ಲದಿದ್ದರೆ ಅವರು ಹೆಚ್ಚು ದೂಷಿಸಿಕೊಂಡು ಖಿನ್ನತೆಗೆ ಒಳಗಾಗುತ್ತಿದ್ದರು.
ತ್ಯಾಗ ಎಂದಿಗೂ ವ್ಯಯವಾಗುವುದಿಲ್ಲ. ತ್ಯಾಗವಿಲ್ಲದೆ ಪ್ರೀತಿ, ಬುದ್ಧಿವಂತಿಕೆ ಮತ್ತು ನಿಜವಾದ ಸಂತೋಷವಿಲ್ಲ. ತ್ಯಾಗವು ನಿಮ್ಮನ್ನು ಪವಿತ್ರಗೊಳಿಸುತ್ತದೆ. ತ್ಯಾಗ ಮಾಡಿ ಪವಿತ್ರರಾಗಿ!
ಗುರುದೇವರ ಅಧಿಕೃತ ಬ್ಲಾಗನಲ್ಲಿ ಈ ಲೇಖನಗಳನ್ನು ಓದಿ
1. Life is a combination of happiness and pain : CLICK HERE TO READ
2. The 11 Most Common Relationship Questions - Complete Guide : CLICK HERE TO READ

ಕಾಮೆಂಟ್‌ಗಳು