ಪ್ರಶ್ನೆ 97: ಯಾವುದರಿಂದ ನಮ್ಮ ಸೌಂದರ್ಯವು ಹೆಚ್ಚುತ್ತದೆ?

 



ನಿಮ್ಮ ಮನಸ್ಸು ದೂರುಗಳಿಂದ ಮುಕ್ತವಾಗಿ, ಜವಾಬ್ದಾರಿಯುತವಾಗಿ, ಧೈರ್ಯ ಮತ್ತು ಆತ್ಮವಿಶ್ವಾಸದಿಂದ ತುಂಬಿದ್ದಾಗ  ಮತ್ತು ಟೊಳ್ಳು ಹಾಗೂ ಖಾಲಿ (hollow and empty) ಯಾಗಿರುವಾಗ, ನೀವು ಅವರ್ಣನೀಯ ಸೌಂದರ್ಯದಿಂದ ಕಂಗೊಳಿಸುತ್ತಿರುತ್ತೀರಿ. ಜವಾಬ್ದಾರಿ ತೆಗೆದುಕೊಂಡು ಕೆಲಸಮಾಡಲು ತಯಾರಿಲ್ಲದ ವ್ಯಕ್ತಿಗೆ ದೂರುವ ಹಕ್ಕಿಲ್ಲ, ಹಾಗೆಯೇ  ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುವ ವ್ಯಕ್ತಿಗೆ ದೂರುಗಳೇ ಇರುವುದಿಲ್ಲ. ದೂರುವುದು ದೌರ್ಬಲ್ಯದ ಸಂಕೇತ. ಅಜ್ಞಾನದ ಹಾಗೂ ತನ್ನ ಬಗ್ಗೆ ಅರಿವಿಲ್ಲದಿರುವಿಕೆಯ ಲಕ್ಷಣ. ನಿಮ್ಮಲ್ಲಿ ಸಹಜವಾಗಿ ಹುಟ್ಟಿನಿಂದ ಬಂದಿರುವ ಸೌಂದರ್ಯವನ್ನು ದೂರುವ ಗುಣ ದೂರ ಮಾಡುತ್ತದೆ. ಅಧ್ಯಾತ್ಮದ ಹಾದಿಯಲ್ಲಿರುವವರಲ್ಲಿ ಸೌಂದರ್ಯ ಸಾಧಾರಣವಾಗಿಯೇ ಹೆಚ್ಚು ತೋರುತ್ತದೆ. ಲೌಕಿಕದಲ್ಲಿ ಮುಳುಗಿರುವ ಮನಸ್ಸು ದೂರುವ ಮನಸ್ಸು; ದೈವಿಕ ಮನಸ್ಸು ಸದಾ ನರ್ತನ ಮಾಡುವ ಮನಸ್ಸು. 

ಪರಿಹಾರವನ್ನು ಸೂಚಿಸದೆ ಕೇವಲ ದೂರುವುದು ಬೇಜವಾಬ್ದಾರಿತನ. ಪರಿಹಾರಗಳು ಕಾರ್ಯಸಾಧ್ಯವಾಗದಿದ್ದಾಗ, ಪರ್ಯಾಯ ಪರಿಹಾರಗಳನ್ನು ಕಂಡುಹಿಡಿಯುವುದು ಧೈರ್ಯದ ಲಕ್ಷಣ. ಬಾಹ್ಯ ಸೌಂದರ್ಯಕ್ಕಾಗಿ, ನೀವು ವಸ್ತುಗಳನ್ನು ಹೇರಿಕೊಳ್ಳುತ್ತೀರಿ; ನಿಜವಾದ ಅಂತರಾಳದ ಸೌಂದರ್ಯಕ್ಕಾಗಿ, ನೀವು ಎಲ್ಲವನ್ನು ತ್ಯಜಿಸಿ ವಿಶ್ರಾಮ ಮಾಡಬೇಕು. ಬಾಹ್ಯ ಸೌಂದರ್ಯಕ್ಕಾಗಿ ನೀವು ಮೇಕಪ್ ಬಳಸಬೇಕು; ನಿಮ್ಮ ನೈಜ ಸೌಂದರ್ಯಕ್ಕಾಗಿ ನೀವು ಈಗಾಗಲೇ ಸುಂದರವಾಗಿದ್ದಿರಿ ಮತ್ತು ಪರಿಪೂರ್ಣವಾಗಿದ್ದೀರಿ ಎಂಬುದನ್ನು ನೀವು ಅರಿತುಕೊಳ್ಳಬೇಕು!

ಸೋಷಿಯಲ್ ಮೀಡಿಯಾದಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರನ್ನು ಅನುಸರಿಸಿ:


ಕಾಮೆಂಟ್‌ಗಳು