ಪ್ರಶ್ನೆ 26: ವರ್ಣಬೇಧ ನಿಂದನೆ ಹಾಗೂ ಬೆದರಿಕೆಗಳನ್ನು ಹೇಗೆ ನಿಭಾಯಿಸುವುದು? ನಾನು ಈ ನಿಂದನೆಗಳಿಗೆ ಬಲಿಪಶುವಾಗಿದ್ದೇನೆ. ನಾನೇನು ಮಾಡಲಿ? | ಗುರುದೇವ್ ಶ್ರೀ ಶ್ರೀ ರವಿಶಂಕರ್
ಮೊದಲಿಗೆ ಈ ಬಲಿಪಶು ಪ್ರಜ್ಞೆಯಿಂದ ಹೊರಬನ್ನಿ. ನೀವು ಬಲಿಪಶು ಎಂದು ಭಾವಿಸಿದಾಗ ನೀವು ಅಪರಾಧಿಯನ್ನು ಹುಡುಕುತ್ತಲೇ ಇರುತ್ತೀರಿ ಮತ್ತು ನೀವು ಅದರಿಂದ ತುಂಬಾ ಅಸಮಾಧಾನಗೊಳ್ಳುತ್ತೀರಿ. ನಿಮಗೆ ನೀವೇ ಅನುಕಂಪವನ್ನು ತೋರಿಸಿಕೊಳ್ಳಲು ಪ್ರಯತ್ನಿಸುತ್ತೀರಿ. ಮೊದಲು ಈ ಪ್ರವೃತ್ತಿಯಿಂದ ಹೊರಬರಬೇಕು.
ಈ ಜಗತ್ತಿನಲ್ಲಿ ಒಳ್ಳೆಯ ಮತ್ತು ಕೆಟ್ಟ, ಎಲ್ಲಾ ರೀತಿಯ ಜನರಿದ್ದಾರೆ. ನನ್ನ ಪ್ರಕಾರ ಕೆಟ್ಟವರು ಎಂದು ಕರೆಸಿಕೊಳ್ಳುವ ಜನರೂ ಕೂಡ ಒಳ್ಳೆಯವರೇ. ಕೆಟ್ಟ ಜನರಲ್ಲಿಯೂ ಒಳ್ಳೆಯತನ ಅಡಗಿ ಕುಳಿತಿರುತ್ತದೆ. ಅದು ಮರೆಮಾಚಲ್ಪಟ್ಟಿದೆ ಮತ್ತು ಅಜ್ಞಾನದಿಂದ ಮುಚ್ಚಲ್ಪಟ್ಟಿದೆ ಅಷ್ಟೇ.
ಅನ್ಯಾಯದ ವಿರುದ್ಧ ನೀವು ಹೋರಾಡಬೇಡಿ ಎಂದು ನಾನು ಹೇಳುತ್ತಿಲ್ಲ. ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಮೊದಲ ಹೆಜ್ಜೆ ಇರಿಸಿ. ಒಬ್ಬರೇ ಅನ್ಯಾಯದ ವಿರುದ್ಧ ಹೋರಾಡುವುದು ಕಷ್ಟ ಸಾಧ್ಯ. ಅದಕ್ಕಾಗಿ ನೀವು ಜನರನ್ನು ಸೇರಿಸಬೇಕು ಮತ್ತು ಅವರನ್ನು ಒಟ್ಟುಗೂಡಿಸಿಕೊಳ್ಳಬೇಕು. ಅನ್ಯಾಯದ ವಿರುದ್ಧ ನೀವು ಹೋರಾಟ ಮಾಡಲೇಬೇಕು. ನೀವು ಹೋರಾಟ ಮಾಡುವಾಗ ನಿಮ್ಮೊಳಗಿನ ಶಾಂತಿ ಮತ್ತು ಆತ್ಮವಿಶ್ವಾಸವನ್ನು ಕಾಪಾಡಿಕೊಳ್ಳಬೇಕು. ಜ್ಞಾನವು ನಿಮಗೆ ಅಗತ್ಯವಿರುವ ಶಾಂತಿ ಮತ್ತು ಆತ್ಮವಿಶ್ವಾಸವನ್ನು ಕೊಡುತ್ತದೆ. ಜೊತೆಗೆ ಯಾವುದೇ ಅನ್ಯಾಯವನ್ನು ನೀವು ನಗುವಿನಿಂದ ಎದುರಿಸಬಹುದು.
ನಿಮ್ಮ ತಾಳ್ಮೆಯನ್ನು ಕಳೆದುಕೊಂಡು ನೀವು ಕೋಪಕ್ಕೊಳಗಾದರೆ ನೀವು ದುರ್ಬಲರಾಗುತ್ತೀರಿ. ಇದು ನಿಮ್ಮ ಶಕ್ತಿಯನ್ನು ಕುಂದಿಸುತ್ತದೆ. ಕೋಪವು ನಿಮ್ಮ ಶಕ್ತಿಯನ್ನು ಹತ್ತು ಪಟ್ಟು ಕಡಿಮೆ ಮಾಡುತ್ತದೆ. ದ್ವೇಷವು ಕೋಪಕ್ಕಿಂತ ಹೆಚ್ಚು ನಕಾರಾತ್ಮಕವಾದದ್ದು ಮತ್ತು ನಿಮ್ಮ ಶಕ್ತಿಯನ್ನು ಇನ್ನೂ ಹೆಚ್ಚು ಕುಂದಿಸುತ್ತದೆ. ಕೋಪ ಮತ್ತು ದ್ವೇಷಗಳು ನಿಮ್ಮನ್ನು ದುರ್ಬಲಗೊಳಿಸುತ್ತವೆ, ಅನಂತರ ನೀವು ಹೋರಾಡುವ ಶಕ್ತಿಯನ್ನು ಕಳೆದುಕೊಳ್ಳುತ್ತೀರಿ.
ಹೋರಾಡಲು ನಿಮಗೆ ಶಕ್ತಿ ಬೇಕು, ನಿಮ್ಮೊಳಗೆ ನೀವು ಕೇಂದ್ರಿತವಾಗಿದ್ದು ಶಾಂತಿಯಿಂದ ಇದ್ದರೆ ಮಾತ್ರ ನಿಮಗೆ ಆ ಶಕ್ತಿ ಮತ್ತು ಸಾಮರ್ಥ್ಯಗಳು ಸಿಗುತ್ತವೆ. ಇದೇ ಭಗವದ್ಗೀತೆಯ ಸಂಪೂರ್ಣ ಸಂದೇಶ.
ಶ್ರೀಕೃಷ್ಣನು ಹೇಳುತ್ತಾನೆ, “ನೀನು ಹೋರಾಡು, ಆದರೆ ನಿನ್ನ ಆಂತರಿಕ ಶಾಂತಿಯನ್ನು ಕಂಡುಕೊಂಡ ನಂತರ, ನಿನ್ನ ಇಷ್ಟ ಮತ್ತು ಅನಿಷ್ಟಗಳಿಂದ ಹೊರಬಂದು ನ್ಯಾಯಕ್ಕಾಗಿ ಹೋರಾಡು”ಎಂದು.
ನೀವು ಅನ್ಯಾಯಕ್ಕೆ ತಲೆಬಾಗಿ ಮತ್ತು ಸುಳ್ಳಿನ ಪ್ರಪಂಚದಲ್ಲಿ ಜೀವಿಸಿ ಎಂದು ನಾನು ಹೇಳುತ್ತಿಲ್ಲ. ಯಾವುದೇ ಕಾರಣಕ್ಕೂ ಇಲ್ಲ. ಅನ್ಯಾಯ, ಸುಳ್ಳು ಮತ್ತು ಮೋಸಕ್ಕೆ ನಾವು ಎಂದಿಗೂ ತಲೆಬಾಗಬಾರದು, ನಾವು ಖಂಡಿತವಾಗಿಯೂ ಅದರ ವಿರುದ್ಧ ಎದ್ದು ನಿಲ್ಲಲೇಬೇಕು. ಆದರೆ ಕೋಪ, ದುರಹಂಕಾರ ಅಥವಾ ಗೊಂದಲದ ಮನಸ್ಸಿನಿಂದ ಅಲ್ಲ. ಧೃಡ ಮನಸ್ಸು ಮತ್ತು ಸ್ಥಿರವಾದ ನಿರ್ಣಯದಿಂದ ನಾವು ಎದ್ದು ನಿಲ್ಲಬೇಕು.
ವೀಡಿಯೊ:
ಇಂಸ್ಟಾಗ್ರಾಮ್: https://www.instagram.com/srisriravishankar
ಯೂಟೂಬ್: https://www.youtube.com/SriSri
ಟ್ವಿಟ್ಟೆರ್: http://twitter.com/SriSri
ಫೇಸ್ಬುಕ್: http://facebook.com/SriSriRaviShankar
ಬ್ಲಾಗ್: http://wisdom.srisriravishankar.org/
ಲಿಂಕ್ಡ್ ಇನ್: https://in.linkedin.com/in/srisriravishankar

ಕಾಮೆಂಟ್‌ಗಳು