ಪ್ರಶ್ನೆ 22: ಈಗ ನನಗೆ ಸಂತೋಷ ಮತ್ತು ಶಾಂತಿ ದೊರೆತಿದೆ. ನಾನು ಇದೇ ಮನಃಸ್ಥಿತಿಯನ್ನು ಜೀವನಪರ್ಯಂತ ಹೇಗೆ ಕಾಪಾಡಿಕೊಳ್ಳುವುದು? | ಗುರುದೇವ್ ಶ್ರೀ ಶ್ರೀ ರವಿಶಂಕರ್


ಗುರುದೇವ್ ಶ್ರೀ ಶ್ರೀ ರವಿಶಂಕರ್:

ಸಂತೋಷವನ್ನು ಹೆಚ್ಚು ಜನರಿಗೆ ಹಂಚುವುದರಿಂದ ಅದನ್ನು ದೀರ್ಘಕಾಲ ಕಾಪಾಡಿಕೊಳ್ಳಬಹುದು. ಇತರರೊಂದಿಗೆ ಹಂಚಿಕೊಳ್ಳದಿದ್ದರೆ ಸಂತೋಷ ಅಥವಾ ಜ್ಞಾನವು ಕ್ಷೀಣಿಸಲು ಪ್ರಾರಂಭಿಸುತ್ತದೆ. ಹೀಗಂದ ಮಾತ್ರಕ್ಕೆ ನೀವು ಈಗಲೇ ಹೋಗಿ ಎಲ್ಲರಿಗೂ ಭಸ್ತ್ರಿಕ ಮತ್ತು ಸುದರ್ಶನ ಕ್ರಿಯೆ ಹೇಳಿಕೊಡಿ ಅಂತಲ್ಲ. ಸರಿಯಾದ ತರಬೇತಿ ಇಲ್ಲದೆ ನೀವು ಇತರರಿಗೆ ಪ್ರಾಣಾಯಾಮ ಮತ್ತು ಧ್ಯಾನವನ್ನು ಹೇಳಿಕೊಡುವಂತಿಲ್ಲ.

ಇದಕ್ಕಾಗಿಯೇ ನಾವು ಇಂದು ದೇಶದಲ್ಲಿ ಯೋಗ ಗುಣಮಟ್ಟ ನಿಯಂತ್ರಣವನ್ನು ಇಡಬೇಕಾಗಿದೆ. ಹೇಗೆ ಕ್ಯೂಸಿಐ (ಕ್ವಾಲಿಟಿ ಕಂಟ್ರೋಲ್ ಫಾರ್ ಇಂಡಿಯಾ) ಸಂಸ್ಥೆ ಇದೆಯೋ, ಹಾಗೆಯೇ ಯೋಗ ಗುಣಮಟ್ಟಕ್ಕೂ ಒಂದು ಮಂಡಳಿ ರಚಿಸಲು ಸರ್ಕಾರ ತಿಳಿಸಿದೆ. ಏಕೆಂದರೆ, ಕೆಲವು ಜನರು ಎಲ್ಲಿಂದಲೋ ಕಲಿತು ಯಾವುದೇ ಸೂಕ್ತ ತರಬೇತಿ ಪಡೆಯದೇ ಜನರಿಗೆ ಹೇಳಿಕೊಡಲು ಪ್ರಾರಂಭಿಸುತ್ತಾರೆ.

ಅದರಿಂದ ಏನಾದರು ಅನಿರೀಕ್ಷಿತ ಅಥವಾ ಅನಗತ್ಯ ಸಂಗತಿಗಳು ಸಂಭವಿಸಿದಾಗ ಅದು ಸಮಸ್ಯೆಗೆ ಎಡೆಮಾಡಿಕೊಡುತ್ತದೆ. ಸಂಸ್ಕೃತದಲ್ಲಿ ಒಂದು ಸುಭಾಷಿತ ಇದೆ - “ಯಸ್ಯ ಕಸ್ಯ ತರೋರ್ಮೂಲಮ್ ಯೇನ ಕೇನಾಪಿ ಚೂರ್ಣಿತಂ; ಯಸ್ಮೈ ಕಸ್ಮೈ ಪ್ರದತವ್ಯಮ್ ಯದ್ವಾ ತದ್ವಾ ಭವಿಷ್ಯತಿ ”.

ಸುಭಾಷಿತದ ಅರ್ಥ ಹೀಗಿದೆ. ಯಾರು ಬೇಕಾದರೂ ಯಾವುದೋ ಮರದ ಬೇರನ್ನು ತಂದು ಅದನ್ನು ಚೆನ್ನಾಗಿ ಪುಡಿಮಾಡಿ ಇತರರಿಗೆ ಔಷಧಿಯಾಗಿ ನೀಡಬಹುದು. ದರಿಂದ ಇನ್ನೇನಾದರೂ ಸಂಭವಿಸಬಹುದು. ಈ ದಿನಗಳಲ್ಲಿ ಯೋಗದಲ್ಲೂ ಅದೇ ಆಗುತ್ತಿದೆ. ಜನರು ಕೇವಲ ಒಂದು ವಾರದವರೆಗೆ ಯೋಗಾಭ್ಯಾಸ ಮಾಡಿ ತಮ್ಮನ್ನು ತಾವು ಬೋಧಕರು ಅಥವಾ ಯೋಗ ಶಿಕ್ಷಕರು ಎಂದು ಘೋಷಿಸಿಕೊಳ್ಳುತ್ತಾರೆ. ಯೋಗಕ್ಕೂ ಸರಿಯಾದ ಗುಣಮಟ್ಟದ ವ್ಯವಸ್ಥೆ ಇರಬೇಕು; ತರಬೇತಿ ಮತ್ತು ಪ್ರಮಾಣೀಕರಣದ ವಿವಿಧ ಹಂತಗಳು ಬೇಕು.

ತಾವು ಸ್ವತಃ ಶಿಕ್ಷಕ ತರಬೇತಿ ಪಡೆಯುವ ತನಕ ಬೇರೆಯವರಿಗೆ ಯೋಗವನ್ನು ಹೇಳಿಕೊಡಬಾರದು. ಆದರೆ ನೀವು ಯೋಗದ ಪ್ರಯೋಜನಗಳ ಬಗ್ಗೆ ಇತರ ಜನರೊಂದಿಗೆ ಯಾವಾಗಲಾದರೂ ಮಾತನಾಡಬಹುದು ಮತ್ತು ಅದರ ಬಗ್ಗೆ ಹೆಚ್ಚಿನ ಅರಿವನ್ನು ತರಬಹುದು. ಇದಕ್ಕಾಗಿ ನೀವು ಖಂಡಿತವಾಗಿಯೂ ಇತರರನ್ನು ಪ್ರೇರೇಪಿಸಬೇಕು ಮತ್ತು ಪ್ರೋತ್ಸಾಹಿಸಬೇಕು.

ವೀಡಿಯೊ:



ಸಾಮಾಜಿಕ ಜಾಲತಾಣಗಳಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರನ್ನು ಅನುಸರಿಸಿ:

ಇಂಸ್ಟಾಗ್ರಾಮ್: https://www.instagram.com/srisriravishankar

ಯೂಟೂಬ್: https://www.youtube.com/SriSri

ಟ್ವಿಟ್ಟೆರ್: http://twitter.com/SriSri

ಫೇಸ್ಬುಕ್: http://facebook.com/SriSriRaviShankar

ಬ್ಲಾಗ್: http://wisdom.srisriravishankar.org/

ಲಿಂಕ್ಡ್ ಇನ್: https://in.linkedin.com/in/srisriravishankar


ಕಾಮೆಂಟ್‌ಗಳು