ಪ್ರಶ್ನೆ 92. ನಿಜವಾದ ಸಂಭ್ರಮ ಎಂದರೇನು?

 



ಗುರುದೇವ್ ಶ್ರೀ ಶ್ರೀ ರವಿಶಂಕರ್:

ಮಾನವ ಜೀವನವು ವಸ್ತು / ದೇಹ ಮತ್ತು ಕಂಪನ / ಚೇತನದ ಸಂಯೋಜನೆಯಾಗಿದೆ. ಅಲ್ಲವೇ? ಸಂತೋಷ ಅಥವಾ ಆನಂದವೆಂದರೆ ಈ ತೀವ್ರವಾದ ಕಂಪನ ಅಥವಾ ಚೇತನದ ಅರಿವು ಮೂಡುವುದು. ಆನಂದ ಎಂದರೆ ನೀವು ವಸ್ತುನಿಷ್ಠ ಎಂಬುದನ್ನು ಮರೆತು ಈ ತೀವ್ರವಾದ ಕಂಪನವೇ ಆಗುವುದು. ಎಲ್ಲಾ ವಿಷಯಲೋಲುಪತೆಯ ಪ್ರವೃತ್ತಿಗಳು ನಿಮಗೆ ಈ ತೀವ್ರವಾದ ಕಂಪನಗಳ ಅನುಭವವನ್ನು ಒಂದು ಕ್ಷಣಾರ್ಧಕ್ಕೆ ನೀಡಿ ಅದರಲ್ಲಿ ಆನಂದದ ಪರಿಚಯವನ್ನು ಮಾಡಿಸುತ್ತದೆ. ಆದರೆ ವಿಷಯವೆಂದರೆ, ಇದು ಅಲ್ಪಾವಧಿಯದ್ದಾಗಿದೆ ಮತ್ತು ನಂತರದಲ್ಲಿ ಅದು ನಿಮ್ಮನ್ನು ಮೊದ್ದಾಗಿಸುತ್ತದೆ. ಸತ್ಸಂಗದಿಂದ ಬರುವ ಆನಂದವು ಉನ್ನತವಾದದ್ದಾಗಿದೆ. ಮಂತ್ರ ಮತ್ತು ಭಜನೆ ನಮ್ಮ ಚೇತನದಲ್ಲಿ ಕಂಪನಗಳನ್ನು ಸೃಷ್ಟಿಸುತ್ತದೆ. ಅದಕ್ಕಾಗಿಯೇ ನೀವು ಹಾಡುವಾಗ ಭಾವಪರವಶತೆಯು ದೀರ್ಘಕಾಲ ಉಳಿಯುತ್ತದೆ. ಸೂಕ್ಷ್ಮದಲ್ಲಿನ ಸಂತೋಷವು ದೀರ್ಘಕಾಲೀನ, ಶಕ್ತಿಯುತ, ಉಲ್ಲಾಸ ಮತ್ತು ಮುಕ್ತವಾಗಿರುತ್ತದೆ. ಸ್ಥೂಲದಲ್ಲಿನ ಸಂತೋಷವು ಅಲ್ಪಕಾಲೀನವಾಗಿದ್ದು ದಣಿವು ಮತ್ತು ಬಂಧನವನ್ನು ತರುತ್ತದೆ.

ನೀವು ಕಂಪನ / ಶಕ್ತಿ ಎಂದು ತಿಳಿದಾಗ, ಬಯಕೆ, ದುರಾಶೆ, ಕಾಮ ಮತ್ತು ಕೋಪವು ಕಣ್ಮರೆಯಾಗುತ್ತದೆ. ಮತ್ತು ಆಗ ನೀವು ನಿಜವಾದ ಸಂಭ್ರಮವೇ ಆಗುತ್ತೀರಿ.

ಗುರುದೇವರ ಅಧಿಕೃತ ಬ್ಲಾಗ್ನಲ್ಲಿ ಈ ಲೇಖನಗಳನ್ನು ಓದಿ:

Oh Dear, this creation is a celebration of thy presence - A Poem by Sri Sri Ravi Shankar : CLICK HERE TO READ




ಸೋಷಿಯಲ್ ಮೀಡಿಯಾದಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರನ್ನು ಅನುಸರಿಸಿ:

ಕಾಮೆಂಟ್‌ಗಳು