ಪ್ರಶ್ನೆ 98: ‘ನಾನು ಯಾರು’ ಎಂಬ ಪ್ರಶ್ನೆ ಬಾಲ್ಯದಿಂದಲೂ ನನ್ನನ್ನು ಕಾಡುತ್ತಿದೆ. ಅದು ನನ್ನನ್ನು ಸಂಪೂರ್ಣವಾಗಿ ಹುಚ್ಚನನ್ನಾಗಿ ಮಾಡುತ್ತಿದೆ. ಯಾವುದಕ್ಕೂ ಅರ್ಥವಿಲ್ಲ ಎನಿಸುತ್ತದೆ. ಏನು ಮಾಡೋದು?

 


ಗುರುದೇವ್ ಶ್ರೀ ಶ್ರೀ ರವಿಶಂಕರ್:

ನೀವು ಬಹಳ ಅದೃಷ್ಟಶಾಲಿಗಳು. ಬೇರೆಯ ಪ್ರಶ್ನೆಗಳು ನಿಮ್ಮನ್ನು ಹುಚ್ಚರನ್ನಾಗಿ ಮಾಡುತ್ತಿದ್ದರೆ, ನಾನು ಹೀಗೆ ಹೇಳುತ್ತಿರಲಿಲ್ಲ, ಆದರೆ ‘ನಾನು ಯಾರು’ ಎಂಬ ಪ್ರಶ್ನೆ ನಿಮ್ಮನ್ನು ಹುಚ್ಚರನ್ನಾಗಿ ಮಾಡುತ್ತಿದ್ದರೆ, ನೀವು ಬಹಳ ಅದೃಷ್ಟವಂತರು ಹಾಗೂ ಉತ್ತಮ ಸಾಧಕರು ಕೂಡ. ಈ ವ್ಯಾಮೋಹ ಬಹಳ ಒಳ್ಳೆಯದು!. ಅದನ್ನು ಹಿಡಿದುಕೊಳ್ಳಿ, ದೂರವಾಗಲು ಬಿಡಬೇಡಿ. ನಿಮ್ಮಲ್ಲಿರುವ ಈ ಅನ್ವೇಷಣೆ ಜೀವನಕ್ಕೆ ಮೆರುಗನ್ನು ತರುತ್ತದೆ. ಯಾವುದರ ಕುರಿತಾಗಿಯಾದರು ಇರುವ ಹುಚ್ಚು ಜೀವನಕ್ಕೆ ಒಂದು ಸೊಗಸನ್ನು ನೀಡುತ್ತದೆ ಮತ್ತು ತನ್ನ ಬಗ್ಗೆ ತಿಳಿದುಕೊಳ್ಳಬೇಕೆಂಬ ವ್ಯಾಮೋಹ ಎಲ್ಲದ್ದಕ್ಕಿಂತ ಮಿಗಿಲಾದ ಹುಚ್ಚು. ಅದರಿಂದ ಬಹಳ ಒಳ್ಳೆಯದೇ ಆಗುತ್ತದೆ.

ಹೆಚ್ಚು ಪುಸ್ತಕಗಳನ್ನು ಓದಬೇಡಿ. ಪುಸ್ತಕಗಳನ್ನು ಓದುವುದು ಇದಕ್ಕೆ ಹಾನಿಕಾರಕ. ‘ನಾನು ಯಾರು?’ ಎಂಬ ಪ್ರಶ್ನೆ ನಿಮ್ಮನ್ನು ಧ್ಯಾನಕ್ಕೆ ಕರೆದೊಯ್ಯಬೇಕು. ಆಗ ಅದು ಉತ್ತಮವಾಗುತ್ತದೆ. ಅಷ್ಟು ಸಾಕು. ಅದನ್ನು ಹಿಡಿದುಕೊಳ್ಳಿ. ‘ನಾನು ಯಾರು?’ ಎಂಬ ಪ್ರಶ್ನೆಯನ್ನು ಬೇರೆಯವರಿಗೆ ಕೇಳಬೇಡಿ.

ಗುರುದೇವರ ಅಧಿಕೃತ ಬ್ಲಾಗ್ನಲ್ಲಿ ಈ ಲೇಖನಗಳನ್ನು ಓದಿ:


Yoga: Stilling the mind : CLICK HERE TO READ









ಸೋಷಿಯಲ್ ಮೀಡಿಯಾದಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರನ್ನು ಅನುಸರಿಸಿ:



ಕಾಮೆಂಟ್‌ಗಳು