ಪ್ರಶ್ನೆ 96: ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುವುದು ಹೇಗೆ?


ಗುರುದೇವ್ ಶ್ರೀ ಶ್ರೀ ರವಿಶಂಕರ್:

ಸಮಸ್ಯೆಗೆ ಮೊದಲ ಪರಿಹಾರವೆಂದರೆ ಸಮಸ್ಯೆಯನ್ನೇ ತಂದುಕೊಳ್ಳದೆ ಇರುವುದು (ನಗು). ಎರಡನೆಯ ಮಾರ್ಗವೆಂದರೆ ಸಮಸ್ಯೆಯನ್ನು ಸ್ವ ಇಚ್ಛೆಯಿಂದ ಸ್ವೀಕಾರ ಮಾಡಿ, ಅದನ್ನು ಸಮಸ್ಯೆಯನ್ನಾಗಿ ಅಲ್ಲದೆ ಒಂದು ಸವಾಲಾಗಿ ನೋಡುವುದು. ಮೂರನೆಯದೆಂದರೆ ಸಮಸ್ಯೆಯು ಕೇವಲ ಒಂದು ಬೆದರು ಬೊಂಬೆಯಂತೆ, ಅದು ನಿಜವಾದದ್ದಲ್ಲ ಎಂದು ಅರಿತುಕೊಳ್ಳುವುದು. 

ನಾಲ್ಕನೆಯದಾಗಿ, ನಿಮಗೆ ಸಮಸ್ಯೆಯನ್ನು ಒಡ್ಡುವ ಮೊದಲೇ ಪ್ರಕೃತಿ ನಿಮಗೆ ಪರಿಹಾರವನ್ನು ಒದಗಿಸಿದೆ ಎಂಬುದನ್ನು ತಿಳಿಯುವುದು. ಈಗ ನೋಡಿ, ನೀವು ಮೊದಲು ನನ್ನನ್ನು ಭೇಟಿಯಾದಿರಿ, ನಂತರವೇ ನಿಮಗೆ ಸಮಸ್ಯೆ ಬಂದಿದೆ (ನಗು). ಮಂಜು ಸುರಿಯುವ ಕಾಲದಲ್ಲಿ ಯಾವುದೇ ಬ್ಯಾಕ್ಟೀರಿಯಾಗಳಿರುವುದಿಲ್ಲ, ಏಕೆಂದರೆ ಆ ಋತುವಿನಲ್ಲಿ ಗುಣಪಡಿಸುವ ಯಾವುದೇ ಗಿಡಮೂಲಿಕೆಗಳು ಬೆಳೆಯುವುದಿಲ್ಲ. ವಸಂತ ಋತುವಿನಲ್ಲಿ ಗಿಡಮೂಲಿಕೆಗಳು ಮೊದಲು ಬರುತ್ತವೆ ಮತ್ತು ನಂತರ ರೋಗಾಣುಗಳು. ಬೇಸಿಗೆಯಲ್ಲಿ, ಸೂರ್ಯನು ಬಲಗೊಳ್ಳುವ ಮೊದಲು ನೆರಳು ಬರುತ್ತದೆ. ಹೀಗೆ, ಪ್ರಕೃತಿಯು ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಿದೆ.

ಸಬ್ಯಾ: ತವಕ ಹಾಗು ಹಂಬಲವೇ ಸಮಸ್ಯೆಯಾದರೆ?

ಶ್ರೀ ಶ್ರೀ: ಕಾಯುವಿಕೆಯು ನಿಮ್ಮನ್ನು ಹಣ್ಣಾಗಿಸುತ್ತದೆ. ನಿಮ್ಮ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಡಿ. ಕನಿಷ್ಠ ಅವುಗಳಲ್ಲಿ ಒಂದನ್ನಾದರೂ ಉಳಿಸಿಕೊಳ್ಳಿ. ಜೀವನ ನಡೆದಂತೆಲ್ಲ ಮೇಲುಕು ಹಾಕಲು ಏನಾದರೂ ಬೇಕಾಗುತ್ತದೆ.

ಗುರುದೇವರ ಅಧಿಕೃತ ಬ್ಲಾಗ್ನಲ್ಲಿ ಈ ಲೇಖನಗಳನ್ನು ಓದಿ:

Anger management tipsCLICK HERE TO READ 



ಸೋಷಿಯಲ್ ಮೀಡಿಯಾದಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರನ್ನು ಅನುಸರಿಸಿ:


ಕಾಮೆಂಟ್‌ಗಳು