ಪ್ರಶ್ನೆ 95: ಜೀವನದಲ್ಲಿ ನಡೆಯುವ ಘಟನೆಗಳನ್ನು ಮೀರಿ ಹೊರಬರುವುದು ಹೇಗೆ?

 


ಗುರುದೇವ್ ಶ್ರೀ ಶ್ರೀ ರವಿಶಂಕರ್:

ಜೀವನದಲ್ಲಿ ನಡೆಯುವ ಘಟನೆಗಳಿಗೆ ಅತಿ ಹೆಚ್ಚಿನ ಪ್ರಾಮುಖ್ಯತೆ ನೀಡುವುದೇ ನೀವು ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳಿಗೆ ಕಾರಣ. ಇದರಿಂದ ಘಟನೆಗಳು ದೊಡ್ಡದಾಗುತ್ತಾ ಹೋಗುತ್ತದೆ ಹಾಗೂ ನೀವು ಸಣ್ಣವರಾಗುತ್ತಾ ಹೋಗುತ್ತೀರಿ. ಉದಾಹರಣೆಗೆ, ನೀವು ಹೈವೇಯಲ್ಲಿ ಮೋಟಾರುಬೈಕನ್ನು ಓಡಿಸುತ್ತಿದ್ದೀರಿ ಮತ್ತು ನಿಮ್ಮ ಮುಂದೆ ದಟ್ಟ ಹೊಗೆಯನ್ನು ಉಗುಳುತ್ತಿರುವ ದೊಡ್ಡ ವಾಹನ ಹೋಗುತ್ತಿದೆ ಎಂದುಕೊಳ್ಳಿ. ಈಗ ನಿಮಗೆ ಮೂರು ಆಯ್ಕೆಗಳಿವೆ -

  • ನೀವು ಪರಿಸ್ಥಿತಿಯ ಬಗ್ಗೆ ದೂರಬಹುದು, ಹೇಗಾದರೂ ಅದನ್ನು ಸಹಿಸಿಕೊಂಡು ಅದೇ ವಾಹನವನ್ನು ಅನುಸರಿಸುತ್ತಾ ಹೋಗಬಹುದು. 
  • ನಿಮ್ಮ ಗತಿಯನ್ನು ನಿಧಾನಗೊಳಿಸಿ ಅಥವಾ ಸ್ವಲ್ಪ ಸಮಯ ಕಾದು, ಆ ವಾಹನವು ನಿಮ್ಮಿಂದ ದೂರ ಹೋಗಲು ಅನುವು ಮಾಡಿಕೊಡಬಹುದು. 
  • ನಿಮ್ಮ ಕೌಶಲ್ಯವನ್ನು ಬಳಸಿ ವಾಹನವನ್ನು ಹಿಂದಿಕ್ಕಿ ಮುಂದೆ ಹೋಗಿ ನಂತರ ಅದರ ಬಗ್ಗೆ ಮರೆತುಬಿಡಬಹುದು.

ಮೊದಲ ಪ್ರಕರಣದಂತೆ, ಸಾಧಾರಣವಾಗಿ ನೀವು ಘಟನೆಗಳಿಗೆ ಅಂಟಿಕೊಳ್ಳುತ್ತೀರಿ ಮತ್ತು ಪ್ರಯಾಣದುದ್ದಕ್ಕೂ ಹೊಗೆಯನ್ನು ಉಸಿರಾಡುತ್ತಾ ಶೋಚನೀಯರಾಗುತ್ತೀರಿ.

ಎರಡನೆಯ ಸಂದರ್ಭದಲ್ಲಿ, ನಿಮಗೆ ಶಾಶ್ವತ ಪರಿಹಾರ ದೊರೆಯುವುದಿಲ್ಲ, ಏಕೆಂದರೆ ಇದರ ನಂತರ ಮತ್ತೊಂದು ದೊಡ್ಡ ವಾಹನವು ನಿಮ್ಮ ಮುಂದೆ ಬರಬಹುದು. ಹಾಗಾಗಿ ಘಟನೆಗಳಿಂದ ಓಡಿಹೋಗುವುದು ಶಾಶ್ವತ ಪರಿಹಾರವಲ್ಲ.

ಬುದ್ಧಿವಂತರು ತಮ್ಮ ಕೌಶಲ್ಯವನ್ನು ಬಳಸಿಕೊಂಡು, ಘಟನೆಗಳನ್ನು ಮೀರಿ ಬೆಳೆಯುತ್ತಾರೆ. ವಾಹನವು ಸುಸ್ಥಿತಿಯಲ್ಲಿದ್ದರೆ, ಕುಶಲತೆ ಪರಿಣಾಮಕಾರಿಯಾಗುತ್ತದೆ. ವಾಹನವನ್ನು ಸುಸ್ಥಿತಿಯಲ್ಲಿಡುವುದು ನಮ್ಮ ಸಾಧನೆ ಮತ್ತು ಕೌಶಲ್ಯವು ಗುರುವಿನ ಅನುಗ್ರಹ.

ನೀವು ಈ ಹಿಂದೆ ಮಾಡಿರುವ ತಪ್ಪುಗಳು ನಿಮ್ಮನ್ನು ವಿನಮ್ರರನ್ನಾಗಿ ಮಾಡಿವೆ; ವಿನಮ್ರರಾಗಲು ನೀವು ಭವಿಷ್ಯದಲ್ಲಿ ಹೊಸ ತಪ್ಪುಗಳನ್ನು ಮಾಡಬೇಕಾಗಿಲ್ಲ.

ಗುರುದೇವರ ಅಧಿಕೃತ ಬ್ಲಾಗ್ನಲ್ಲಿ ಈ ಲೇಖನಗಳನ್ನು ಓದಿ:

Laughter is true prayer CLICK HERE TO READ

Celebrate Thanksgiving with gratitude and beauty : CLICK HERE TO READ




ಸೋಷಿಯಲ್ ಮೀಡಿಯಾದಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರನ್ನು ಅನುಸರಿಸಿ:


ಕಾಮೆಂಟ್‌ಗಳು