ಪ್ರಶ್ನೆ 94. ತಪ್ಪುಗಳನ್ನು ನಾವು ಹೇಗೆ ಸರಿಪಡಿಸಬಹುದು?

 


ಗುರುದೇವ್ ಶ್ರೀ ಶ್ರೀ ರವಿಶಂಕರ್:

ತಪ್ಪನ್ನು ಸರಿಪಡಿಸಬೇಕೆಂಬ ಬಯಕೆ ಕರ್ತೃತ್ವವನ್ನು ತರುತ್ತದೆ ಮತ್ತು ಕರ್ತೃತ್ವವು ತಪ್ಪುಗಳಿಗೆ ಅಡಿಪಾಯವಿದ್ದಂತೆ. ತಪ್ಪುಗಳನ್ನು ಸರಿಪಡಿಸಲು ಪ್ರಯತ್ನಿಸುವವರೇ ಆಗಾಗ್ಗೆ ಹೆಚ್ಚಿನ ತಪ್ಪುಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ತಮ್ಮ ತಪ್ಪುಗಳನ್ನು ಯಾರು ಗುರುತಿಸುತ್ತಾರೋ ಅವರು ಅದರಿಂದ ಮುಕ್ತರಾಗುತ್ತಾರೆ.

ಸಾಮಾನ್ಯವಾಗಿ ಒಬ್ಬರು ತಮ್ಮ ತಪ್ಪನ್ನು ತಾವು ಒಪ್ಪಿಕೊಂಡಾಗ, ಅದರ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಬದಲು ಅದನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಮತ್ತೂ ಕೆಲವೊಮ್ಮೆ ಅದನ್ನು ಸಮರ್ಥಿಸುವುದರ ಜೊತೆಗೆ ಅದರ ಬಗ್ಗೆ ತಪ್ಪಿತಸ್ಥ ಭಾವನೆಯನ್ನು ಬೆಳೆಸಿಕೊಳ್ಳುತ್ತಾರೆ. ಆತ್ಮಸಾಕ್ಷಿಯಿಂದ (ವಿವೇಕ) ಅಥವಾ ದುಃಖದಿಂದ ತೊಂದರೆಗೀಡಾದಾಗ ತಪ್ಪುಗಳು ಬಿಟ್ಟುಹೋಗುತ್ತದೆ.

ಯಾವುದೇ ಕ್ರಿಯೆಯಲ್ಲಿ, ಪರಿಸ್ಥಿತಿಯಲ್ಲಿ ಅಥವಾ ಯಾವುದೇ ವ್ಯಕ್ತಿಯಲ್ಲಿ ತಪ್ಪುಗಳು, ದೋಷಗಳು ಇರಬಹುದು. ಒಂದು ಹೂವನ್ನು ಪರಿಗಣಿಸಿದಂತೆ ದೋಷವನ್ನು ಸಹ ಪರಿಗಣಿಸಿ. ಹೇಗೆ ಸ್ವಲ್ಪ ಸಮಯದ ನಂತರ ಹೂವು ಒಣಗಿ ನಾಶವಾಗುವುದೋ ಹಾಗೆಯೇ ತಪ್ಪುಗಳು ಸಹ.

ಗುರುದೇವರ ಅಧಿಕೃತ ಬ್ಲಾಗ್ನಲ್ಲಿ ಈ ಲೇಖನಗಳನ್ನು ಓದಿ:

Different faces of life : CLICK HERE TO READ




ಸೋಷಿಯಲ್ ಮೀಡಿಯಾದಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರನ್ನು ಅನುಸರಿಸಿ:




ಕಾಮೆಂಟ್‌ಗಳು