ಪ್ರಶ್ನೆ 93. ಜೀವನದ ಉದ್ದೇಶವೇನು?

 



ಈ ಜಗತ್ತಿನಲ್ಲಿ ಸೇವೆ ಮಾಡುವುದೇ ನಮ್ಮ ಮೊದಲ ಮತ್ತು ಪ್ರಮುಖ ಬದ್ಧತೆಯಾಗಿದೆ. ನಿಮ್ಮಲ್ಲಿ ಭಯವಿದೆ ಎಂದಾದರೆ, ಅದು ಕೇವಲ ಬದ್ಧತೆಯ ಕೊರತೆಯಿಂದಾಗಿ. ನಿಮ್ಮ ಮನಸ್ಸಿನಲ್ಲಿ ಗೊಂದಲವಿದೆಯಾದರೆ, ಅದು ಸಹ ಬದ್ಧತೆಯ ಕೊರತೆಯಿಂದಾಗಿಯೇ. ನಾನು ಈ ಜಗತ್ತಿನಲ್ಲಿ ಇರುವುದೇ ಸೇವೆ ಮಾಡಲು ಎಂಬ ಭಾವನೆ ನಮ್ಮಲ್ಲಿ ಬಂದರೆ, ನಮ್ಮಲ್ಲಿನ ‘ಅಹಂಕಾರ’ ಕರಗಿಹೋಗುತ್ತದೆ. ಯಾವಾಗ ನಮ್ಮಲ್ಲಿನ ಅಹಂಕಾರ ಕರಗುವುದೋ ಆಗ ನಮ್ಮ ಚಿಂತೆಗಳೂ, ಗೊಂದಲಗಳೂ ಸಹ ಕರಗಿಹೋಗುತ್ತವೆ. ಸೇವೆ ಎಂಬುದು, ನೀವು ನಿಮ್ಮ ಅನುಕೂಲಕ್ಕಾಗಿಯೋ ಅಥವಾ ಸಂತೋಷಕ್ಕಾಗಿಯೋ ಮಾಡುವಂತಹುದಲ್ಲ. ಜೀವನದ ಉನ್ನತ ಉದ್ದೇಶವೇ ಸೇವೆ. 

ಬದ್ಧತೆಯಿಲ್ಲದ ಮನಸ್ಸು ಶೋಚನೀಯವಾಗಿರುತ್ತದೆ. ಬದ್ಧತೆಯನ್ನು ತೆಗೆದುಕೊಂಡ ಮನಸ್ಸು ತಾತ್ಕಾಲಿಕವಾಗಿ ಅನಾನುಕೂಲವನ್ನು ಅನುಭವಿಸಬಹುದು, ಆದರೆ ಶ್ರಮದ ಫಲವು ಸಿಕ್ಕೇ ಸಿಗುತ್ತದೆ. ನೀವು ಸೇವೆಯನ್ನು ನಿಮ್ಮ ಜೀವನದ ಏಕೈಕ ಉದ್ದೇಶವನ್ನಾಗಿ ಮಾಡಿಕೊಂಡಾಗ, ಅದು ನಿಮ್ಮಲಿನ ಭಯವನ್ನು ನಿವಾರಿಸುತ್ತದೆ, ಮನಸ್ಸಿಗೆ ಏಕಾಗ್ರತೆ ಮತ್ತು ಗುರಿಯನ್ನು ತರುತ್ತದೆ ಹಾಗು ಕ್ರಿಯೆಯಲ್ಲಿ ತೊಡಗಿಸುತ್ತದೆ. ಅಲ್ಪಾವಧಿಯ ಸಮಸ್ಯೆಗಳು ಎದುರಾದರೂ ಸಹ ದೀರ್ಘಕಾಲೀನ ಸಂತೋಷವನ್ನು ಅದು ಕೊಡುತ್ತದೆ. 

ಗುರುದೇವರ ಅಧಿಕೃತ ಬ್ಲಾಗ್ನಲ್ಲಿ ಈ ಲೇಖನಗಳನ್ನು ಓದಿ:


The Wow Factor in Life : CLICK HERE TO READ




ಸೋಷಿಯಲ್ ಮೀಡಿಯಾದಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರನ್ನು ಅನುಸರಿಸಿ:


ಕಾಮೆಂಟ್‌ಗಳು