ಪ್ರಶ್ನೆ 102: ಗುರುದೇವ, ಗುರು ಪೂರ್ಣಿಮೆಯ ಕುರಿತು ನಿಮ್ಮ ಸಂದೇಶವೇನು?

 


ಗುರುದೇವ್ ಶ್ರೀ ಶ್ರೀ ರವಿಶಂಕರ್:

ಮನ್ನಾಥ ಶ್ರೀ ಜಗನ್ನಾಥ

ನನ್ನ ಒಡೆಯ ಈ ಇಡೀ ಜಗತ್ತಿಗೆ ಒಡೆಯ

ಮದ್ಗುರು ಶ್ರೀ ಜಗದ್ಗುರು

ನನ್ನ ಗುರು ಈ ಇಡೀ ಬ್ರಹ್ಮಾಂಡಕ್ಕೆ ಗುರುವು 

ಮದಾತ್ಮ ಸರ್ವ ಭೂತಾತ್ಮ

ನನ್ನ ಆತ್ಮವು ಪ್ರತಿ ಜೀವಿಯ ಆತ್ಮವೂ ಆಗಿದೆ

ತಸ್ಮೈ ಶ್ರೀ ಗುರವೇ ನಮಃ 

ಅಂತಹ ಗುರುದೇವರ ಮಹಿಮೆಗೆ ನಾನು ಶಿರಬಾಗುತ್ತೇನೆ

ಸಾಮಾನ್ಯವಾಗಿ ಯಾವುದು ವಿಶ್ವವ್ಯಾಪಿಯಾಗಿದೆಯೋ, ಸಾರ್ವತ್ರಿಕವಾಗಿದೆಯೋ ಅದು ನಮ್ಮ ಸ್ವಂತದ್ದಲ್ಲ ಮತ್ತು ಯಾವುದು ನಮಗೆ ವೈಯಕ್ತಿಕವಾಗಿದೆಯೋ ಅದು ಸರ್ವರಿಗೂ ಸೇರಿದ್ದಲ್ಲ ಎಂದು ನಾವು ಭಾವಿಸುತ್ತೇವೆ. "ಸ್ವಂತದ್ದು" ಮತ್ತು "ಎಲ್ಲರದ್ದೂ" ವಿರೋಧಾಭಾಸದಂತೆ ನಮಗೆ ಕಾಣುತ್ತದೆ. ದುರಾಶೆ, ಭಯ, ಅಸೂಯೆ ಮತ್ತು ನೆಮ್ಮದಿಯ ಕೊರತೆಗೆ ಇದೇ ಕಾರಣವಾಗಿದೆ.

ಗುರು ಪೂರ್ಣಿಮೆಯ ಈ ಸುದಿನದಂದು ಎಚ್ಚರಗೊಂಡು ನೋಡಿ, ಇಡೀ ಜಗತ್ತಿನ ಒಡೆಯನಾದ ಭಗವಂತ ನಿಮಗೆ ಬಹಳ ವೈಯಕ್ತಿಕ ಮತ್ತು ಹತ್ತಿರ ಎಂದು ಅರಿತುಕೊಳ್ಳಿ. ನಿಮ್ಮ ವೈಯಕ್ತಿಕ ಗುರುವೇ ಇಡೀ ಪ್ರಪಂಚದ ಗುರುವೆಂದು ತಿಳಿಯಿರಿ.

ಗುರುವೇ ನಿಮ್ಮ ಆತ್ಮ ಮತ್ತು ನಿಮ್ಮ ಆತ್ಮವೇ ಪ್ರತಿಯೊಂದು ಜೀವಿಯೊಳಗಿನ ಜೀವವಾಗಿದೆ ಎಂದು ಅರಿತುಕೊಳ್ಳಿ. ಸಾರ್ವತ್ರಿಕವಾದದ್ದನ್ನು ಸ್ವಂತಗೊಳಿಸಿಕೊಳ್ಳಿ; ಅದು ನಿಮ್ಮನ್ನು ಶ್ರೀಮಂತರನ್ನಾಗಿ, ಬುದ್ಧಿವಂತರಾಗಿ ಮತ್ತು  ಬಲಶಾಲಿಯನ್ನಾಗಿ ಮಾಡುತ್ತದೆ. ವೈಯಕ್ತಿಕವಾದದ್ದನ್ನು ವಿಶ್ವವ್ಯಾಪಿಗೊಳಿಸಿ; ಆಗ ನೀವು ಸ್ವಾತಂತ್ರ್ಯ, ಸಹಾನುಭೂತಿ ಮತ್ತು ಪ್ರೀತಿಯನ್ನು ಕಾಣುವಿರಿ.

ಗುರುದೇವರ ಅಧಿಕೃತ ಬ್ಲಾಗ್ನಲ್ಲಿ ಈ ಲೇಖನಗಳನ್ನು ಓದಿ:

1. Celebrating Guru Tattva on Guru Purnima : CLICK HERE TO READ










ಸೋಷಿಯಲ್ ಮೀಡಿಯಾದಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರನ್ನು ಅನುಸರಿಸಿ:

ಕಾಮೆಂಟ್‌ಗಳು