ಪ್ರಶ್ನೆ 100. ನಾನು ಒಮ್ಮೆ ಮೆಟ್ರೋ ನಿಲ್ದಾಣದಲ್ಲಿದ್ದಾಗ ಇಬ್ಬರು ಜಗಳವಾಡುವುದನ್ನು ನೋಡಿದೆ. ನನಗೆ ಹೆದರಿಕೆಯಾಗಲಿಲ್ಲ. ನಾನು ಸುಮ್ಮನೆ ಹೋಗಿ ಅವರ ಮಧ್ಯದಲ್ಲಿ ನಿಂತೆ, ಆಗ ಅವರು ಜಗಳವಾಡುವುದನ್ನು ನಿಲ್ಲಿಸಿದರು.

 


ಗುರುದೇವ್ ಶ್ರೀ ಶ್ರೀ ರವಿಶಂಕರ್:

ಅದ್ಭುತ! ಇದನ್ನು ನಾವೆಲ್ಲರೂ ಮಾಡಬಹುದು ಎಂದು ನಾನು ಭಾವಿಸುತ್ತೇನೆ. “ನೀವು ಅಹಿಂಸೆಯಲ್ಲಿ ಸ್ಥಾಪಿತರಾಗಿದ್ದರೆ, ನಿಮ್ಮ ಉಪಸ್ಥಿತಿಯಲ್ಲಿ ಜನರು ತಮ್ಮ ಹಿಂಸಾತ್ಮಕ ಪ್ರವೃತ್ತಿಯನ್ನು ಸಹ ಬಿಟ್ಟು ಬಿಡುತ್ತಾರೆ” ಎಂದು ಪತಂಜಲಿ ಯೋಗ ಸೂತ್ರದಲ್ಲಿ ಹೇಳಲಾಗಿದೆ. ಆದರೆ ಇದು ದೀರ್ಘಾವಧಿಯ ಪ್ರಕ್ರಿಯೆಯಾಗಿದೆ. ನೀವು ದೀರ್ಘಕಾಲದವರೆಗೆ ಅಭ್ಯಾಸ ಮಾಡಿದ ನಂತರ ನಿಮ್ಮಿಂದ ಆ ಕಂಪನಗಳು ಹೊರಬರುತ್ತವೆ.

ನಾವು ಇಲ್ಲಿ ಕುಳಿತುಕೊಂಡು ಧ್ಯಾನ ಮಾಡುವ ಮೂಲಕ, ಜ್ಞಾನದ ಚರ್ಚೆಯಲ್ಲಿ ಭಾಗವಹಿಸುವ ಮೂಲಕ, ಸಕಾರಾತ್ಮಕವಾದ ಕಂಪನಗಳನ್ನು ಈ ನಗರ, ದೇಶಾದ್ಯಂತ ಹರಡುತ್ತಿದ್ದೇವೆ. ಈ ಸಭಾಂಗಣಕ್ಕೆ ಪ್ರವೇಶಿಸಿದಾಗ, ಇಲ್ಲಿ ಎಷ್ಟು ಜನಕ್ಕೆ ಸಕಾರಾತ್ಮಕತೆಯ ಅನುಭವಾಯಿತು? ಎಷ್ಟು ಮಂದಿಗೆ ಹಾಗೆ ಅನ್ನಿಸಿತು? (ಪ್ರೇಕ್ಷಕರಲ್ಲಿ ಅನೇಕರು ಕೈ ಎತ್ತುತ್ತಾರೆ). ಎಲ್ಲರಿಗೂ! ಅದು ಬಹಳ ಒಳ್ಳೆಯದು.

ನೀವು ನಿಮ್ಮ ನೆರೆಹೊರೆಯವರನ್ನು ಸಹ ಇದರ ಬಗ್ಗೆ ಕೇಳಬೇಕು, ಅವರಿಗೆ ಸಹ ಬಹಳ ಶಾಂತಿಯ ಅನುಭವವಾಗುತ್ತಿರಬಹುದು. ಆದ್ದರಿಂದಲೇ ಪ್ರತಿಯೊಂದು ಪ್ರದೇಶದಲ್ಲೂ ನಾವು ಶಾಂತಿಯ ದೀಪಸ್ತಂಭದಂತೆ ಮಿನುಗುವ ನಮ್ಮ ಧ್ಯಾನ ಕೇಂದ್ರವನ್ನು ಸ್ಥಾಪಿಸಬೇಕು.

ಗುರುದೇವರ ಅಧಿಕೃತ ಬ್ಲಾಗ್ನಲ್ಲಿ ಈ ಲೇಖನಗಳನ್ನು ಓದಿ:

1. Code of Conduct for a life : CLICK HERE TO READ



ಸೋಷಿಯಲ್ ಮೀಡಿಯಾದಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರನ್ನು ಅನುಸರಿಸಿ:


ಕಾಮೆಂಟ್‌ಗಳು