ಪ್ರಶ್ನೆ 91. ಕ್ರಿಯೆಯಲ್ಲಿ ಪ್ರಾಮಾಣಿಕವಾದ ಉದ್ದೇಶ ಮತ್ತು ಕೌಶಲ್ಯವನ್ನು ನಾವು ಹೇಗೆ ಒಡಗೂಡಿಸುವುದು?

 


ಗುರುದೇವ್ ಶ್ರೀ ಶ್ರೀ ರವಿಶಂಕರ್:

ಪ್ರಾಮಾಣಿಕತೆ ಮತ್ತು ಕೌಶಲ್ಯವು ವಿರೋಧಾಭಾಸವೆಂದು ತೋರುತ್ತದೆ, ಆದರೆ ವಾಸ್ತವವಾಗಿ ಅವು ಒಂದಕ್ಕೊಂದು ಪೂರಕವಾಗಿವೆ. ನಿಮ್ಮ ಉದ್ದೇಶವು ಪ್ರಾಮಾಣಿಕವಾಗಿರಬೇಕು ಮತ್ತು ಕ್ರಿಯೆಯು ಕೌಶಲ್ಯಪೂರ್ಣವಾಗಿರಬೇಕು. ಉದ್ದೇಶವು ಹೆಚ್ಚು ಪ್ರಾಮಾಣಿಕವಾದಷ್ಟು, ಕ್ರಿಯೆಯಲ್ಲಿ ಕುಶಲತೆ ಹೆಚ್ಚುತ್ತದೆ. ಪ್ರಾಮಾಣಿಕವಾದ ಉದ್ದೇಶ ಮತ್ತು ಕೌಶಲ್ಯಪೂರ್ಣ ಕ್ರಿಯೆಯು ನಿಮ್ಮನ್ನು ಹೆಚ್ಚು ಸ್ಥಿರಗೊಳಿಸುತ್ತದೆ.

ಪ್ರಾಮಾಣಿಕತೆಯು ಇಲ್ಲದಿದ್ದಾಗ ಮಾತ್ರ ಕುಶಲತೆಯ ಅಗತ್ಯವಿರುತ್ತದೆ. ಆದರೆ, ಪ್ರಾಮಾಣಿಕತೆಯಿಲ್ಲದ ಕುಶಲತೆಯು ನಿಮ್ಮನ್ನು ಅಗ್ಗಗೊಳಿಸುತ್ತದೆ. ಪ್ರಾಮಾಣಿಕವಾದ ಕ್ರಿಯೆ ಮತ್ತು ಕುಶಲತೆಯಿಂದ ಕೂಡಿದ ಉದ್ದೇಶವನ್ನು ನೀವು ಹೊಂದಲು ಸಾಧ್ಯವಿಲ್ಲ. ಕ್ರಿಯೆಯಲ್ಲಿ ಪ್ರಾಮಾಣಿಕತೆಯನ್ನು ಪ್ರದರ್ಶಿಸಲು ಪ್ರಯತ್ನಿಸಿ, ಮನಸ್ಸಿನಲ್ಲಿ ಕುಟಿಲತೆಯಿದ್ದರೆ, ಆಗ ತಪ್ಪುಗಳು ಸಂಭವಿಸುತ್ತದೆ.

ಜಾನ್: ದುರಾಶೆಯಂತಹ ಶಕ್ತಿಯುತವಾದ ಉದ್ದೇಶವನ್ನು, ಪ್ರಾಮಾಣಿಕವಾಗಿ, ಹೊಂದಲು ಸಾಧ್ಯವಿದೆಯೇ?

ಶ್ರೀ ಶ್ರೀ: ದುರಾಶೆ, ಅತಿಯಾದ ಮಹತ್ವಾಕಾಂಕ್ಷೆ ಇವುಗಳಿಂದ ಕೂಡಿದ ಉದ್ದೇಶವು ಪ್ರಾಮಾಣಿಕವಾಗಿರಲು ಸಾಧ್ಯವಿಲ್ಲ. ನಿಮ್ಮ ಉದ್ದೇಶಗಳು ಅಶುದ್ಧವಾದಾಗಲೆಲ್ಲಾ, ಅದು ನಿಮ್ಮ ಪ್ರಜ್ಞೆಯನ್ನು ಚುಚ್ಚುತ್ತದೆ, ಆದ್ದರಿಂದ ಅದು ಪ್ರಾಮಾಣಿಕವಾಗಲು ಸಾಧ್ಯವಿಲ್ಲ. ಪ್ರಾಮಾಣಿಕ ಉದ್ದೇಶಗಳು ನಕಾರಾತ್ಮಕ ಭಾವನೆಗಳಿಂದ ಮುಕ್ತವಾಗಿರುತ್ತವೆ. ಕುಶಲವಲ್ಲದ ಕ್ರಿಯೆಯು ನಕಾರಾತ್ಮಕ ಭಾವನೆಗಳಿಗೆ ಕಾರಣವಾಗುತ್ತದೆ ಮತ್ತು ಪ್ರಾಮಾಣಿಕವಲ್ಲದ ಉದ್ದೇಶವು ನಕಾರಾತ್ಮಕ ಭಾವನೆಗಳನ್ನು ಆಶ್ರಯಿಸುತ್ತದೆ.

ಗಾಯತ್ರಿ: ನಮ್ಮ ಉದ್ದೇಶವು ಪ್ರಾಮಾಣಿಕವಾಗಿದ್ದು, ನಮಗೆ ಕೆಲಸದಲ್ಲಿ ಕುಶಲತೆಯಿಲ್ಲದಿದ್ದರೆ ಏನು ಮಾಡುವುದು?

ಶ್ರೀ ಶ್ರೀ: ನಿಮ್ಮೊಂದಿಗೆ ಒಂದು ಕರವಸ್ತ್ರವನ್ನು ಒಯ್ಯಿರಿ (ನಗು).

ಪ್ರಶ್ನೆ: ಸಂಕಲ್ಪವನ್ನು ಸಿದ್ಧಿಸಿಕೊಳ್ಳಲು ಉತ್ತಮ ಕೌಶಲ್ಯ ಯಾವುದು?

ಶ್ರೀ ಶ್ರೀ: ಯಾವುದೇ ಸಂಕಲ್ಪವನ್ನು (ಉದ್ದೇಶಗಳನ್ನು) ನೀವೇ ಇಟ್ಟುಕೊಳ್ಳಬೇಡಿ. ಅವುಗಳನ್ನು ದೈವಕ್ಕೆ ಸಮರ್ಪಣೆ ಮಾಡಿ. ಕ್ರಿಯೆಯು ಎಂದೂ ಪರಿಪೂರ್ಣವಾಗಿರಲು ಸಾಧ್ಯವಿಲ್ಲ. ಆದರೆ ನಮ್ಮ ಉದ್ದೇಶಗಳು ಪರಿಪೂರ್ಣವಾಗಿರಬಹುದು. ಕ್ರಿಯೆಗಳಲ್ಲಿ ಎಂದಿಗೂ ಸುಧಾರಣೆಗೆ ಅವಕಾಶವಿರುತ್ತದೆ. ಕ್ರಿಯೆ ಎಂದರೆ ಬೆಳವಣಿಗೆ ಮತ್ತು ಚಲನೆ, ಅದಕ್ಕೆ ಸ್ಥಳಾವಕಾಶ ಬೇಕು. ನಿಮ್ಮಲ್ಲಿನ ಆಳ ಮತ್ತು ನಿಮ್ಮಲ್ಲಿನ ಸ್ವಾತಂತ್ರ್ಯವು ನಿಮ್ಮಲ್ಲಿರುವ ಎಲ್ಲಾ ಕೌಶಲ್ಯವನ್ನು ಹೊರತರುತ್ತದೆ. ಶ್ರೀಕೃಷ್ಣ ಪರಮಾತ್ಮನು ಕೌಶಲ್ಯಪೂರ್ಣನಾಗಿದ್ದಕ್ಕೆ ಕಾರಣ ಅವನಲ್ಲಿದ್ದ ಅತ್ಯಂತ ಆಳವಾದ ಮೌನವೇ ಆಗಿದೆ. 

ಗುರುದೇವರ ಅಧಿಕೃತ ಬ್ಲಾಗ್ನಲ್ಲಿ ಈ ಲೇಖನಗಳನ್ನು ಓದಿ:

When life is a challenge, that's when all the skills are needed from within you | Article by Gurudev : CLICK HERE TO READ


ಸೋಷಿಯಲ್ ಮೀಡಿಯಾದಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರನ್ನು ಅನುಸರಿಸಿ:


ಕಾಮೆಂಟ್‌ಗಳು