ಪ್ರಶ್ನೆ 89. ಜೀವನದಲ್ಲಿ ಅನಿಶ್ಚಿತತೆಯನ್ನು ಹೇಗೆ ಎದುರಿಸುವುದು?

 


ಗುರುದೇವ್ ಶ್ರೀ ಶ್ರೀ ರವಿಶಂಕರ್:

ಪ್ರಜ್ಞೆಯ ನಿಶ್ಚಿತತೆಯನ್ನು ಅರಿತುಕೊಂಡಾಗ, ಪ್ರಾಪಂಚಿಕ ವಿಷಯಗಳ ಅನಿಶ್ಚಿತತೆಯಿಂದ ನೀವು ನಿರಾಳರಾಗಬಹುದು. ಸಹಜವಾಗಿ ಜನರು ಇದಕ್ಕೆ ವಿರುದ್ಧವಾಗಿ ಯೋಚಿಸುತ್ತಾರೆ. ಪ್ರಾಪಂಚಿಕ ವಿಷಯಗಳ ಬಗ್ಗೆ ನಿಶ್ಚಿತರಾಗಿರುತ್ತಾರೆ ಮತ್ತು ದೇವರ ಬಗ್ಗೆ ಅನಿಶ್ಚಿತರಾಗಿರುತ್ತಾರೆ. ಯಾವುದರ ಬಗ್ಗೆ ವಿಶ್ವಾಸವಿರಿಸಬಾರದೋ ಅದರ ಮೇಲೆ ಅವಲಂಬಿತರಾಗಿ ಅಸಮಾಧಾನಗೊಳ್ಳುತ್ತಾರೆ. ಅನಿಶ್ಚಿತತೆಯು ಸ್ಥಿರತೆಯ ಹಂಬಲವನ್ನು ಉಂಟುಮಾಡುತ್ತದೆ. ಇಡೀ ಸೃಷ್ಟಿಯಲ್ಲಿ ಸ್ಥಿರತೆಯನ್ನು ಕೊಡಬಲ್ಲದು ಕೇವಲ ನಮ್ಮ ಆತ್ಮಬಲ ಒಂದೇ.

ಬದಲಾವಣೆ ಜಗತ್ತಿನ ನಿಯಮವಾಗಿದೆ. ಬದಲಾವಣೆಯಿಲ್ಲದ್ದು ಕೇವಲ ನಮ್ಮ ಆತ್ಮವೊಂದೇ. ನೀವು, ಯಾವುದು ಬದಲಾಗುವುದಿಲ್ಲವೋ ಅದನ್ನು ಅವಲಂಬಿಸಬೇಕು ಮತ್ತು ಬದಲಾವಣೆಯನ್ನು ಒಪ್ಪಿಕೊಳ್ಳಬೇಕು. ಎಲ್ಲವೂ ಅನಿಶ್ಚಿತವಾಗಿದೆ ಎಂದು ನಿಮಗೆ ಖಚಿತವಾದಾಗ, ನೀವು ಸ್ವತಂತ್ರರಾಗುತ್ತೀರಿ. ಅದೇ ನೀವು ಅಜ್ಞಾನದಿಂದ ಅನಿಶ್ಚಿತತೆಯನ್ನು ಅನುಭವಿಸಿದಾಗ ಚಿಂತೆಗೊಂಡು ಉದ್ವಿಗ್ನರಾಗುತ್ತೀರಿ. ಅರಿವಿನೊಂದಿಗಿನ ಅನಿಶ್ಚಿತತೆಯು ನಿಮ್ಮನ್ನು ಪ್ರಜ್ಞೆಯ ಉನ್ನತ ಸ್ಥಿತಿಗೆ ಪರಿಚಯಿಸುತ್ತದೆ ಮತ್ತು ನಗುವನ್ನು ತರುತ್ತದೆ.

ಭರತ್: ಒಂದು ನಿಶ್ಚಿತವಾದ ನಗು!!!

ಜೀವನದಲ್ಲಿ ನಿಶ್ಚಿತತೆ ಸ್ವಾತಂತ್ರ್ಯ ತರುತ್ತದೆ ಎಂದು ಜನರು ಭಾವಿಸುತ್ತಾರೆ. ಆದರೆ ಅನಿಶ್ಚಿತ ಸಂದರ್ಭದಲ್ಲಿ ನೀವು ಆ ಸ್ವಾತಂತ್ರ್ಯವನ್ನು ಅನುಭವಿಸುವವರಾದರೆ ಅದು 'ನಿಜವಾದ' ಸ್ವಾತಂತ್ರ್ಯ. ನಿಮ್ಮ ನಿಶ್ಚಿತತೆ ಅಥವಾ ಅನಿಶ್ಚಿತತೆಯು ಸಹಜವಾಗಿ ಸಾಪೇಕ್ಷ ಪ್ರಪಂಚವನ್ನು ಆಧರಿಸಿರುತ್ತದೆ. ಸಾಪೇಕ್ಷ ಅನಿಶ್ಚಿತತೆಯ ಬಗ್ಗೆ ಇರುವ ನಿಶ್ಚಿತತೆಯು, ಪೂರ್ಣತೆಯ ಅಸ್ತಿತ್ವದ ಬಗ್ಗೆ ನಿಮ್ಮಲ್ಲಿ ಖಚಿತತೆಯನ್ನು ಮತ್ತು ನಿರಪೇಕ್ಷದಲ್ಲಿ ನಿಶ್ಚಿತವಾದ ನಂಬಿಕೆಯನ್ನು ತರುತ್ತದೆ. 

ನಿತಿನ್: ಹೌದು, ಇದನ್ನು ಅರ್ಥಮಾಡಿಕೊಳ್ಳಲು ನಿಶ್ಚಿತವಾಗಿ ಅರಿವನ್ನು ಹೊಂದಿರಬೇಕು !!!

ಪ್ರಶ್ನೆ: ನಾವು ಅನಿಶ್ಚಿತರಾಗಿರುವಾಗಲೂ ಸಹ ಉತ್ಸಾಹದಿಂದಿರಬಹುದೇ?

ಗುರುದೇವ್: ಹೌದು, ಜ್ಞಾನದ ಆಸರೆಯಲ್ಲಿರುವಾಗ, ನೀವು ಅನಿಶ್ಚಿತತೆಯಲ್ಲಿಯೂ ಸಹ ಉತ್ಸಾಹಭರಿತವಾಗಿರಬಹುದು. ಸಹಜವಾಗಿ ಅನಿಶ್ಚಿತವಾಗಿರುವ ಜನರು ಕಾರ್ಯಪ್ರವೃತ್ತವಾಗಿರುವುದಿಲ್ಲ, ಬದಲಾಗಿ ಸುಮ್ಮನೆ ಕಾಯುತ್ತ ಕುಳಿತಿರುತ್ತಾರೆ. ಅನಿಶ್ಚಿತತೆಯಲ್ಲಿಯೂ ಸಹ ಕಾರ್ಯಪ್ರವೃತ್ತರಾಗುವುದರಿಂದ ಜೀವನವನ್ನು ಒಂದು ಆಟ ಅಥವಾ ಸವಾಲಾಗಿ ಸ್ವೀಕರಿಸಿದಂತಾಗುವುದು. ಅನಿಶ್ಚಿತತೆಯಲ್ಲಿರುವುದು ಎಂದರೆ ಬಿಟ್ಟು ಕೊಡುವುದನ್ನು (letting go) ಪಾಲಿಸುವುದು. ಸಾಪೇಕ್ಷ ಪ್ರಪಂಚದ ಬಗ್ಗೆ ಇರುವ ನಿಶ್ಚಿತತೆಯು ನಮ್ಮನ್ನು ಮಂದಗೊಳಿಸುತ್ತದೆ. ನಮ್ಮಬಗ್ಗೆ (ಆತ್ಮದ ಬಗ್ಗೆ) ಇರುವ ಅನಿಶ್ಚಿತತೆಯು ಭಯವನ್ನು ಸೃಷ್ಟಿಸುತ್ತದೆ. ವಸ್ತುನಿಷ್ಠ ಪ್ರಪಂಚದ ಬಗ್ಗೆ ಇರುವ ಅನಿಶ್ಚಿತತೆಯು ಪ್ರಜ್ಞೆಯ ಬಗ್ಗೆ ನಿಶ್ಚಿತತೆಯನ್ನು ಮೂಡಿಸುತ್ತದೆ.

ಗುರುದೇವರ ಅಧಿಕೃತ ಬ್ಲಾಗ್ನಲ್ಲಿ ಈ ಲೇಖನಗಳನ್ನು ಓದಿ:

6 ways to deal with uncertainty in life | Article by Gurudev : CLICK HERE TO READ


ಸೋಷಿಯಲ್ ಮೀಡಿಯಾದಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರನ್ನು ಅನುಸರಿಸಿ:

ಕಾಮೆಂಟ್‌ಗಳು