ಪ್ರೀತಿ ಒಂದು ಕ್ರಿಯೆಯಲ್ಲ, ಅದು ನೀವೇ ಆಗಿದ್ದೀರಿ ಹಾಗು ಅದು ನಿಮ್ಮ ಸಹಜ ‘ಸ್ಥಿತಿ’ಯಾಗಿದೆ. ನಿಮ್ಮಲ್ಲಿನ ಸೂಕ್ಷ್ಮ ನಿರ್ಮಲತೆ ಮತ್ತು ಶಾಂತತೆಯೇ ಪ್ರೀತಿಯಾಗಿದೆ. ಸಾಮಾನ್ಯವಾಗಿ ಪಶ್ಚಿಮದಲ್ಲಿ, ಒಬ್ಬ ವ್ಯಕ್ತಿ ತನ್ನ ಮೇಲೆ ತಾನೇ ಕೋಪಗೊಂಡರೆ ಅದನ್ನು ‘ತನ್ನನ್ನು ತಾನು ಪ್ರೀತಿಸುವುದಿಲ್ಲ’ ಎಂದು ಅರ್ಥ ಮಾಡಿಕೊಳ್ಳುತ್ತೀರಿ. ನೀವು ಇತರರ ಮೇಲೆ ಕೋಪಗೊಂಡರೆ ಇದರರ್ಥ ನೀವು ಇತರರನ್ನು ಪ್ರೀತಿಸುವುದಿಲ್ಲ ಎಂದಲ್ಲ. ಪ್ರೀತಿಯು ಸದಾ ಇರುತ್ತದೆ, ನೀವು ಅದನ್ನು ಎಂದಿಗೂ ಪ್ರಶ್ನಿಸಬಾರದು.
ಜ್ಞಾನವಿಲ್ಲದಿದ್ದಾಗ ಪ್ರೀತಿ ವಿರೂಪಗೊಳ್ಳುತ್ತದೆ. ಜ್ಞಾನದ ಆಸರೆಯಿಂದ ಅದು ಶುದ್ಧವಾಗಿ ಉಳಿಯುತ್ತದೆ. ವಿರೂಪಗೊಂಡ ಪ್ರೀತಿಯೇ ಕೋಪವಾಗುತ್ತದೆ. ನೀವು ಪರಿಪೂರ್ಣತೆಯನ್ನು ಪ್ರೀತಿಸುತ್ತೀರಾದ್ದರಿಂದ ಕೋಪಗೊಳ್ಳುತ್ತೀರಿ. ನೀವು ಎಲ್ಲವೂ ನಿಮಗೆ ಬೇಕಾದ ರೀತಿಯಲ್ಲಿ ಇರಬೇಕೆಂದು ಬಯಸುತ್ತೀರಿ ಮತ್ತು ಅದರಿಂದ ಕೋಪಗೊಳ್ಳುತ್ತೀರಿ. ವಸ್ತುಗಳನ್ನು ಹೆಚ್ಚಾಗಿ ಪ್ರೀತಿಸಿದಾಗ ಅದೇ ದುರಾಸೆಯಾಗುತ್ತದೆ. ನೀವು ನಿಮ್ಮನ್ನೇ ಅತಿಯಾಗಿ ಪ್ರೀತಿಸಿದಾಗ ಅದು ಸ್ವಾಧೀನಪರತೆಯಾಗುತ್ತದೆ! ಇದರಲ್ಲೆಲ್ಲವೂ ಪ್ರೀತಿಯು ಒಂದು ಭಾವನೆಯಾಗಿ ಹೊರಬರುತ್ತಿದೆ ಅಷ್ಟೇ. ಆದ್ದರಿಂದ, ನೀವು ನಿಮ್ಮನ್ನು ಪ್ರೀತಿಸುತ್ತಿದ್ದರೆ, ಶಾಂತವಾಗಿರಿ, ವಿಶ್ರಾಂತಿ ಪಡೆಯಿರಿ. ನಿಮ್ಮ ಮೇಲೆ ನೀವೇ ಕಠಿಣರಾಗಬೇಡಿ.
ಜನರು ತಮ್ಮ ಮೇಲೆ ತಾವೇ ಎರಡು ಸಂದರ್ಭಗಳಲ್ಲಿ ಕಠಿಣರಾಗಬಹುದು:
- ತಮ್ಮ ಮೇಲೆ ತಾವೇ ಅನುಕಂಪವನ್ನು ತೋರಿದಾಗ
- ‘ನಾನು ತುಂಬಾ ನೀತಿವಂತ, ನಾನು ತುಂಬಾ ಒಳ್ಳೆಯವನು, ನಾನು ತುಂಬಾ ಕೆಲಸ ಮಾಡಿದ್ದೇನೆ ಮತ್ತು ಯಾರೂ ನನ್ನನ್ನು ಗುರುತಿಸುವುದಿಲ್ಲ, ಯಾರೂ ನನ್ನನ್ನು ಪ್ರೀತಿಸುವುದಿಲ್ಲ’ ಹೀಗೆಲ್ಲ ಭಾವಿಸಿದಾಗ.
ನಿಮ್ಮ ಒಳ್ಳೆಯತನದ ಬಗ್ಗೆ ಅಥವಾ ನಿಮ್ಮ ಅವಗುಣಗಳ ಬಗ್ಗೆ ಯೋಚಿಸುವುದರಿಂದ, ನಿಮ್ಮ ಮೇಲೆ ನೀವು ಕಠಿಣರಾಗಬಹುದು. ಎರಡೂ ಸಂದರ್ಭಗಳಲ್ಲಿ, ನೀವು ಸಮತೋಲನವನ್ನು ಕಳೆದುಕೊಳ್ಳುತ್ತೀರಿ. ನೀವು ತುಂಬಾ ಒಳ್ಳೆಯವರು ಎಂದು ಯೋಚಿಸಿದಾಗ, ಖಂಡಿತವಾಗಿಯೂ ಇತರರಲ್ಲಿ ಕೆಟ್ಟ ಗುಣಗಳನ್ನೇ ಹುಡುಕುವಿರಿ ಮತ್ತು ಅದನ್ನೇ ಕಾಣುವಿರಿ. ಇಲ್ಲದಿದ್ದರೆ ನಿಮ್ಮ ಬಗ್ಗೆ ನಿಮಗೆ ಎಂದೂ ಒಳ್ಳೆಯದು ಎನಿಸುವುದಿಲ್ಲ. ಅಲ್ಲದೆ, ಇತರರು ತುಂಬಾ ಒಳ್ಳೆಯವರು ಮತ್ತು ನಾನು ಅಷ್ಟು ಒಳ್ಳೆಯವನಲ್ಲ ಎಂದು ನೀವು ಭಾವಿಸಿದಾಗ ಅಥವಾ ನಿಮ್ಮಲ್ಲಿ ನಕಾರಾತ್ಮಕ ಗುಣಗಳಿವೆ ಎಂದು ನಿಮಗೆ ತೋರಿದಾಗ, ನಿಮ್ಮ ಮೇಲೆ ನೀವು ಕಠಿಣರಾಗುತ್ತೀರಿ. ಎರಡೂ ಸಂದರ್ಭಗಳಲ್ಲೂ ನೀವು ಸಮತೋಲನವನ್ನು ಕಳೆದುಕೊಂಡ ಹಾಗೆಯೇ.
ಸಾಮಾನ್ಯವಾಗಿ ನಾವು, ಯಾರು ತಮ್ಮನ್ನು ತಾವೇ ಟೀಕಿಸುಕೊಳ್ಳುವರೋ ಅವರು ಮಾತ್ರ ತಮ್ಮ ಮೇಲೆ ತಾವು ಕಠಿಣವಾಗಿದ್ದಾರೆ ಎಂದು ಭಾವಿಸುತ್ತೇವೆ. ಆದರೆ ನಿಮ್ಮನ್ನು ನೀವು ಹೊಗಳಿಕೊಂಡಾಗ ಕೂಡ ನೀವು ನಿಮ್ಮ ಮೇಲೆ ಕಠಿಣವಾಗಿರುತ್ತೀರಿ! ನಾವು ಹೇಳುತ್ತಿರುವುದು ನಿಮಗೆ ತಿಳಿಯುತ್ತಿದೆಯಲ್ಲವೇ? ನಿಮ್ಮ ಉತ್ತಮ ಗುಣಗಳಿಗೆ ನೀವು ಅಂಟಿಕೊಂಡಾಗ ಇಲ್ಲವೇ ನಿಮ್ಮ ನಕಾರಾತ್ಮಕ ಗುಣಗಳಿಗೆ ನೀವು ಅಂಟಿಕೊಂಡಾಗಲೂ, ನೀವು ನಿಮ್ಮ ಮೇಲೆ ಕಠಿಣವಾದಂತೆಯೇ!
ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರ ಅಧಿಕೃತ ಬ್ಲಾಗ್ನಲ್ಲಿ ಅವರ ಈ ಲೇಖನಗಳನ್ನು ಸಹ ಓದಬಹುದು:
Why do people make mistakes if they are full of love? | Article by Gurudev : CLICK HERE TO READ

ಕಾಮೆಂಟ್‌ಗಳು