ಬೌದ್ಧಿಕ ತಿಳುವಳಿಕೆ ಹೌದು ಎಂದು ಹೇಳುತ್ತದೆ, ಒಪ್ಪುವಿಕೆ, ಬುದ್ದಿಯ ಮಟ್ಟದಲ್ಲಿ. ಪ್ರಾಯೋಗಿಕ ತಿಳುವಳಿಕೆ ನಮ್ಮ ಅನುಭವಕ್ಕೆ ಸಿಗುವಂತಹುದು. ಭಾವನೆಯ ಮಟ್ಟದಲ್ಲಿ ಅದು ಸ್ಪಷ್ಟವಾಗಿರುತ್ತದೆ. ಅಸ್ತಿತ್ವವಾದದ ಸಾಕ್ಷಾತ್ಕಾರವು ನಿರಾಕರಿಸಲಾಗದಂತಹುದು. ಅದು ನಿಮ್ಮ ಸ್ವಭಾವವೇ ಆಗುತ್ತದೆ.
ಭಾವನೆಯ ಮಟ್ಟದಲ್ಲಿ, ಪ್ರಾಯೋಗಿಕ ತಿಳುವಳಿಕೆ ಇಲ್ಲದಿದ್ದರೆ ನೀವು ಕೇಳುವ ಎಲ್ಲಾ ಪದಗಳು ಕೇವಲ ಒಂದು ಅಕ್ಷರಗಳ ಪುಂಜವಾಗಿ ಉಳಿಯುತ್ತದೆ. ನೀವು ಖಾಲಿಯಾಗಿದ್ದೀರಿ ಮತ್ತು ಟೊಳ್ಳಾಗಿದ್ದೀರಿ ಎಂದು ಬೌದ್ಧಿಕವಾಗಿ ತಿಳಿದಿರಬಹುದು ಆದರೆ ಧ್ಯಾನದಲ್ಲಿ ಕುಳಿತು ಅದನ್ನು ಅನುಭವಿಸುವುದು ಮತ್ತು ಭಾವನೆಯ ಮಟ್ಟದಲ್ಲಿ ತಿಳಿಯುವುದು ಬೇರೆಯದೇ ಆಗಿದೆ.
ಒಬ್ಬರಿಗೆ ಜ್ಞಾನದ ಅನುಭವವಾದಾಗ ಅವರು ಅದರ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಬಯಸುತ್ತಾರೆ ಮತ್ತು ಆಗ ಅನ್ವೇಷಕರಾಗುತ್ತಾರೆ. ನೀವು ಕೇವಲ ಬೌದ್ಧಿಕ ತಿಳುವಳಿಕೆಯನ್ನು ಮಾತ್ರ ಹೊಂದಿದ್ದರೆ, ನಿಮಗೆ ಎಲ್ಲವೂ ತಿಳಿದಿದೆ ಎಂದು ಭಾವಿಸುತ್ತೀರಿ. ಹೆಚ್ಚಿನ ಧರ್ಮಶಾಸ್ತ್ರಜ್ಞರು ಈ ಗುಂಪಿಗೆ ಸೇರಿದವರಾಗಿರುತ್ತಾರೆ.
ಅಸ್ತಿತ್ವವಾದದ ಸಾಕ್ಷಾತ್ಕಾರವು ಅದರೊಳಗೆ ಪ್ರಾಯೋಗಿಕ ಮತ್ತು ಬೌದ್ಧಿಕ, ಎರಡೂ ತಿಳುವಳಿಕೆಯನ್ನು ಹೊಂದಿರುತ್ತದೆ. ಆದಾಗಿಯೂ ಸಹ ಇದು ಈ ಎರಡನ್ನೂ ಮೀರಿದ್ದಾಗಿದೆ.
ಪ್ರಶ್ನೆ: ನಾವು ಆ ಸ್ಥಿತಿಯನ್ನು ಹೇಗೆ ತಲುಪುವುದು?
ಗುರುದೇವ್: ಅದಕ್ಕೆ ದಾರಿ ಇಲ್ಲ. ಹಣ್ಣು ಮಾಗಿದಾಗ ಅದು ಬೀಳುತ್ತದೆ.
ಪ್ರಶ್ನೆ: ಅನುಮಾನ ಎಂದರೇನು?
ಗುರುದೇವ್: ಮನಸ್ಸಿನ ಒಂದು ಭಾಗವು ಇನ್ನೊಂದು ಭಾಗವನ್ನು ಸವಾಲು ಮಾಡುವುದು.

ಕಾಮೆಂಟ್‌ಗಳು