ಪ್ರಶ್ನೆ 86. ನಮ್ಮ ಪ್ರಾರ್ಥನೆಗಳಿಗೆ ಉತ್ತರ ಪಡೆಯುವುದು ಹೇಗೆ?

 

ಗುರುದೇವ್ ಶ್ರೀ ಶ್ರೀ ರವಿಶಂಕರ್:

ನಿಮ್ಮ ಪ್ರಾರ್ಥನೆಯು ಫಲಿಸಬೇಕಾದರೆ ಅದರ ಕುರಿತಾಗಿ ತೀವ್ರವಾದ ಆಸೆಯಿರಬೇಕು. ಬಯಕೆಯು ತೀವ್ರವಾಗಿದ್ದು ದೀರ್ಘವಾದ ಕಾಯುವಿಕೆಯ ನಂತರ ಅದು ಈಡೇರಿದರೆ ನಮ್ಮಲ್ಲಿ ಕೃತಜ್ಞತೆಯು ಹೆಚ್ಚಾಗುತ್ತದೆ. ತೀವ್ರವಾದ ಬಯಕೆಯು ನಿಮ್ಮನ್ನು ಭಕ್ತಿಯೆಡೆಗೆ ಕರೆದೊಯ್ಯುತ್ತದೆ. ಬಯಕೆಯು ತೀವ್ರವಾಗಬೇಕಾದರೆ ಸಮಯ ಮತ್ತು ಅವಶ್ಯಕತೆಯ ಅಗತ್ಯವಿರುತ್ತದೆ. ಅಂತಹ ಬಯಕೆಯು ಈಡೇರಿದ ನಂತರ ಉಂಟಾಗುವ ಕೃತಜ್ಞತೆಯು ಎಷ್ಟು ಅಗಾಧವಾಗಿರುತ್ತದೆ ಎಂದರೆ, ನಮ್ಮ ಬಯಕೆಯು ಸಹ ತನ್ನ ಮೋಡಿ ಮತ್ತು ಮಹತ್ವವನ್ನು ಕಳೆದುಕೊಳ್ಳುತ್ತದೆ.

ಭಾರತದಲ್ಲಿ ಒಬ್ಬ ರೈತನ ಮಗನಿಗೆ ಇಂಗ್ಲೆಂಡ್‌ಗೆ ಹೋಗಬೇಕೆಂಬ ಮಹದಾಸೆ ಇತ್ತು. ಅದಕ್ಕಾಗಿ ಅವರು ಆಳವಾಗಿ ಪ್ರಾರ್ಥಿಸುತ್ತಲಿದ್ದರು. ಅವರಿಗೆ ತಮ್ಮ ಇಂಗ್ಲೆಂಡ್ ಪ್ರವಾಸ ಕೈಗೂಡಿದ ಸುದ್ದಿಯು ಬಂದಾಗ, ಅವರಲ್ಲಿ ಅಪಾರ ಕೃತಜ್ಞತೆಯು ಉಂಟಾಯಿತು. ಅದರ ನಂತರ ಅವರಿಗೆ ತಾವು ಹೋದೆವೋ ಇಲ್ಲವೋ ಎಂಬ ಬಗ್ಗೆ ಕಾಳಜಿಯೇ ಹೊರಟುಹೋಗಿತ್ತು. 

ಸಾಧಾರಣವಾಗಿ ಜನರು ತಮ್ಮ ಆಸೆಗಳು ತಕ್ಷಣವಾಗಿ ಪೂರೈಸದಿದ್ದರೆ ಅದನ್ನು ದುರಾದೃಷ್ಟ ಎಂದು ಭಾವಿಸುತ್ತಾರೆ. ತೀವ್ರವಾದ ಬಯಕೆ ನಿಮ್ಮನ್ನು ನಿರಾಶೆಗೊಳಿಸಬಹುದು ಇಲ್ಲವೇ ನಿಮ್ಮನ್ನು ಪ್ರಾರ್ಥನಾಶೀಲರಾಗಿ ಮಾಡಬಹುದು. ಪ್ರಾರ್ಥನಾಶೀಲತೆಯಲ್ಲಿ ಕೃತಜ್ಞತೆ ಮತ್ತು ಭಕ್ತಿ ಇರುತ್ತದೆ. ಯಾವುದೇ ತೀವ್ರವಾದ ಅನುಭವವು ನಿಮ್ಮನ್ನು ಸಂಪೂರ್ಣಗೊಳಿಸುತ್ತದೆ.

ನಿಮ್ಮ ಪ್ರಜ್ಞೆ ಜೋಳದಂತೆ. ಜ್ಞಾನದ ಶಾಖದಿಂದ, ಅದು ಬಿಳಿಯಾಗಿ ಉಬ್ಬಿ ಬರುತ್ತದೆ ಮತ್ತು ಪಾಪ್ ಕಾರ್ನ್ ಆಗಿ ಬದಲಾಗುತ್ತದೆ.

ಗುರುದೇವರ ಅಧಿಕೃತ ಬ್ಲಾಗ್ನಲ್ಲಿ ಈ ಲೇಖನಗಳನ್ನು ಓದಿ:


How To Keep Faith During Difficult Times In Life?| Article by Gurudev : CLICK HERE TO READ


ಸೋಷಿಯಲ್ ಮೀಡಿಯಾದಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರನ್ನು ಅನುಸರಿಸಿ:

ಕಾಮೆಂಟ್‌ಗಳು