ಬಹುತೇಕವಾಗಿ ಹಿಂಸಾಚಾರವು ನಡೆಯುವಾಗ ಸದ್ದುಗದ್ದಲವಿರುತ್ತದೆ. ಆದರೆ ಅಹಿಂಸೆಯು ಮೌನದಲ್ಲಿ ನಡೆಯುತ್ತದೆ. ಹಿಂಸಾತ್ಮಕ ಜನರು ದೊಡ್ಡದಾಗಿ ಸದ್ದು ಮಾಡುತ್ತಾರೆ ಮತ್ತು ಅದರಿಂದ ತಮ್ಮ ಹಿಂಸೆಯನ್ನು ತೋರಿಸಿಕೊಡುತ್ತಾರೆ. ಅಹಿಂಸಾತ್ಮಕ ಜನರು ಶಾಂತವಾಗಿರುತ್ತಾರೆ. ಶಾಂತ ಹಾಗು ಅಹಿಂಸಾತ್ಮಕ ಜನರು ಸದ್ದು ಮಾಡುವ ಸಮಯ ಈಗ ಬಂದಿದೆ. ಆ ಸದ್ದಿನಲ್ಲಿ ಹಿಂಸಾಚಾರವು ಶಾಂತವಾಗಬೇಕಿದೆ. ಬಹಳ ಚಿಕ್ಕ ವಯಸ್ಸಿನಿಂದಲೇ ಅಹಿಂಸೆಯ ಸಂದೇಶವು ಸ್ಪಷ್ಟವಾಗಿ ಮತ್ತು ಜೋರಾಗಿ ಕೇಳಬೇಕಿದೆ.
ಪ್ರಜ್ಞೆಯನ್ನು ಕೋಪ ಮತ್ತು ಹಿಂಸೆಯ ಪ್ರವರ್ತನೆಯನ್ನು ಅವಮಾನಕರವಾಗಿ ಪರಿಗಣಿಬೇಕಾಗಿದೆ. ಕೋಪ ಮತ್ತು ಹಿಂಸಾಚಾರದಲ್ಲಿ, ಅವಮಾನದ ಬದಲಿಗೆ ಹೆಮ್ಮೆಯ ಭಾವನೆಯಿರುವುದೇ ಯುವಜನರಲ್ಲಿ ಹಿಂಸಾಚಾರಕ್ಕೆ ಕಾರಣವಾಗಿದೆ. ಜನರು ತಮ್ಮ ಹಿಂಸಾತ್ಮಕ ನಡವಳಿಕೆಯಿಂದ ಹೆಮ್ಮೆಪಡುತ್ತಿದ್ದಾರೆ. ಆಕ್ರಮಣಕಾರಿಯಾಗಿ ವರ್ತಿಸುವುದು ಪ್ರತಿಷ್ಠೆಯ ಸಂಕೇತ ಎಂದು ಅವರು ಭಾವಿಸುತ್ತಾರೆ. ಅದು ನಾಚಿಕೆಪಡುವ ಗುಣವೆಂದು ಅವರು ತಿಳಿದುಕೊಂಡಿಲ್ಲ.
ಇದು ಇಡೀ ಸಮಾಜದಲ್ಲಿ ಆಕ್ರಮಣಶೀಲತೆ ಮತ್ತು ಹಿಂಸೆಯನ್ನು ಉತ್ತೇಜಿಸುತ್ತದೆ ಮತ್ತು ಅದರಿಂದ ಮಾನವೀಯ ಮೌಲ್ಯಗಳು ಕಡಿಮೆಯಾಗುತ್ತವೆ. ಕೆಲವು ಚಲನಚಿತ್ರಗಳು ಮತ್ತು ಆಧುನಿಕ ಸಂಗೀತವು ಸಹ ಹತಾಶೆ, ಕೋಪ ಮತ್ತು ಪ್ರತೀಕಾರವನ್ನು ವೈಭವೀಕರಿಸುತ್ತಿದೆ ಮತ್ತು ಇವೇ ಇಂದಿನ ಮಕ್ಕಳಿಗೆ ಆದರ್ಶಪ್ರಾಯವಾಗುತ್ತಿದೆ.
ನಾವು ಇಂದು ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಉತ್ತೇಜಿಸಬೇಕಾಗಿದೆ, ವಿಶೇಷವಾಗಿ ಪ್ರೀತಿ, ಸಹಾನುಭೂತಿ ಮತ್ತು ಸ್ವಾಮ್ಯತೆಯನ್ನು. ನಿಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ, ಪತ್ರಿಕೆ ಮತ್ತು ಟಿವಿಯಂತಹ ಸ್ಥಳೀಯ ಮಾಧ್ಯಮಗಳ ಮೂಲಕ ಮಾತನಾಡಿ ಸಾಧ್ಯವಾದಷ್ಟು ‘ಆರ್ಟ್ ಎಕ್ಸೆಲ್’ ಮತ್ತು ‘ಆರ್ಟ್ ಆಫ್ ಲಿವಿಂಗ್’ ಕೋರ್ಸ್‌ಗಳನ್ನು ನಡೆಸಬೇಕಿದೆ.
ಡೇವಿಡ್ ನ ಪ್ರಶ್ನೆ: "ಜನರು ಕೋಪಗೊಳ್ಳಲು ನಾಚಿಕೆಪಟ್ಟರೆ, ಅದು ಅವರನ್ನು ಅಸ್ವಾಭಾವಿಕಗೊಳಿಸುವುದಿಲ್ಲವೇ? ಮತ್ತು ಅದರಿಂದ ಅವರಲ್ಲಿ ಪ್ರತಿರೋಧವು ಉಂಟಾಗುವುದಿಲ್ಲವೇ?
ಗುರುದೇವ್: "ಅವರು ನಾಚಿಕೆಪಡದಿದ್ದರೆ, ಅವರು ಕೋಪ ಮತ್ತು ಹಿಂಸಾಚಾರವನ್ನು ತಮ್ಮ ಹಕ್ಕು ಎಂದು ತಿಳಿಯುತ್ತಾರೆ. ಕೆಲವೊಮ್ಮೆ ಪ್ರತಿರೋಧವು ಒಳ್ಳೆಯದೇ ಆಗಿರುತ್ತದೆ (ರೋಗವನ್ನು ಅಥವಾ ಕೆಟ್ಟ ಅಭ್ಯಾಸಗಳನ್ನು ಪ್ರತಿರೋಧಿಸುವಂತೆ)"

ಕಾಮೆಂಟ್‌ಗಳು