ಪ್ರಶ್ನೆ 84. ಜ್ಞಾನದ ಎರಡು ವಿಧಗಳು ಯಾವುವು?

 


ಗುರುದೇವ್ ಶ್ರೀ ಶ್ರೀ ರವಿಶಂಕರ್:

ಜ್ಞಾನದಲ್ಲಿ ಎರಡು ವಿಧಗಳಿವೆ. ಮೊದಲನೆಯದು ಶುದ್ಧ ಜ್ಞಾನ ಮತ್ತು ಎರಡನೆಯದು ಅನ್ವಯ ಜ್ಞಾನ. ಅನ್ವಯ ಜ್ಞಾನದ ಪ್ರಯೋಜನವು ನೇರವಾಗಿ ಮತ್ತು ತಕ್ಷಣವೇ ನಿಮ್ಮ ಅನುಭವಕ್ಕೆ ಬರಬಹುದು, ಹಾಗೆಯೇ ಶುದ್ಧ ಜ್ಞಾನವು ದೀರ್ಘಾವಧಿಯಲ್ಲಿ ಪರೋಕ್ಷವಾಗಿ ನಿಮಗೆ ಪ್ರಯೋಜನವನ್ನು ನೀಡುವುದು.

ನೀವು ಅಧ್ಯಯನ ಮಾಡಿ ಕಲಿತ ಅಥವಾ ಅರ್ಥಮಾಡಿಕೊಂಡ ಜ್ಞಾನವನ್ನು, ನಿಮಗೆ ಅಭ್ಯಾಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದಿದ್ದರೆ, ನಿರಾಶರಾಗಬೇಡಿ. ಮುಂದೊಂದು ದಿನ ಭವಿಷ್ಯದಲ್ಲಿ, ಆ ಜ್ಞಾನವನ್ನು ನೀವು ಅಪ್ರಯೋಜಕ ಎಂದು ತಿರಸ್ಕರಿಸಿಲ್ಲವಾದರೆ, ಅದು ನಿಮಗೆ ಉಪಯುಕ್ತವಾಗುತ್ತದೆ.

ಸಹಜವಾಗಿ ಜನರು, ತಕ್ಷಣದ ಪ್ರಯೋಜನವನ್ನು ಕಾಣದೆ ಶುದ್ಧ ಜ್ಞಾನವನ್ನು ತಿರಸ್ಕರಿಸುತ್ತಾರೆ. ವಾಸ್ತವವಾಗಿ ಈ ಎರಡೂ ರೀತಿಯ ಜ್ಞಾನವು ಪರಸ್ಪರ ಪೂರಕವಾಗಿದೆ. ಶುದ್ಧ ಜ್ಞಾನದ ತಳಪಾಯವಿಲ್ಲದಿದ್ದರೆ ಅನ್ವಯ ಜ್ಞಾನವು ದುರ್ಬಲವಾಗಿ ಉಳಿಯುತ್ತದೆ ಮತ್ತು ಅನ್ವಯವೇ ಇಲ್ಲದಿದ್ದರೆ ಶುದ್ಧ ಜ್ಞಾನವು ಅಪೂರ್ಣವಾಗುತ್ತದೆ.

ಜ್ಞಾನವನ್ನು ಅಪ್ರಾಯೋಗಿಕ ಎಂದು ತಿರಸ್ಕರಿಸಬೇಡಿ. ಹಾಗೆಯೇ ನಿಮ್ಮ ದಿನನಿತ್ಯದ ಜೀವನದಲ್ಲಿ ಜ್ಞಾನವನ್ನು ಅನ್ವಯಿಸಲು ನಿಮಗೆ ಸಾಧ್ಯವಾಗದ ಕಾರಣ ನಿಮ್ಮನ್ನು ನೀವು ದುರ್ಬಲ ಅಥವಾ ಜ್ಞಾನಕ್ಕೆ ಅನರ್ಹ ಎಂದುಕೊಳ್ಳಬೇಡಿ.

ಯಾವಾಗಲಾದರೊಮ್ಮೆ ನೀವು ಏಕಾಂತದಲ್ಲಿದ್ದಾಗ, ಪ್ರಕೃತಿಯೊಂದಿಗಿದ್ದಾಗ, ಮೌನವಾಗಿದ್ದಾಗ, ನಡೆದಾಡುವಾಗ, ಕಡಲತೀರದ ಮರಳನ್ನು ಅಥವಾ ಆಕಾಶದಲ್ಲಿನ ಪಕ್ಷಿಯನ್ನು ನೋಡುತ್ತಿರುವಾಗ ಅಥವಾ ಧ್ಯಾನ ಮಾಡುವಾಗ - ಇದ್ದಕ್ಕಿದ್ದಂತೆ ಜ್ಞಾನವು ನಿಮ್ಮಲ್ಲಿ ಸ್ಪುರಣೆಯಾಗುತ್ತದೆ ಹಾಗೂ ಅದುನ್ನಿಮ್ಮ ಜೀವನದಲ್ಲಿ ಉದಯವಾಗುವುದನ್ನು ನೀವು ನೋಡುತ್ತೀರಿ.

ಗುರುದೇವರ ಅಧಿಕೃತ ಬ್ಲಾಗ್ನಲ್ಲಿ ಈ ಲೇಖನಗಳನ್ನು ಓದಿ:

Keep your mind open to all possibilities! | Article by Gurudev : CLICK HERE TO READ


ಸೋಷಿಯಲ್ ಮೀಡಿಯಾದಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರನ್ನು ಅನುಸರಿಸಿ:

ಕಾಮೆಂಟ್‌ಗಳು