ಪ್ರಶ್ನೆ 83. ಜನರಲ್ಲಿ ಏಕೆ ಅಧಿಕಾರದಾಹವಿದೆ?



ಜನರು ಅಧಿಕಾರಕ್ಕಾಗಿ ಹಸಿದಿದ್ದಾರೆ ಏಕೆಂದರೆ ಅವರು ಇತರರಿಂದ ಗಮನ ಮತ್ತು ಮಾನ್ಯತೆಯನ್ನು ಬಯಸುತ್ತಾರೆ. ಅಧಿಕಾರವು ಸಹ ಹಣದಂತೆಯೇ ಒಂದು ಸಾಧನವಷ್ಟೇ. ಅಧಿಕಾರ ಅಥವಾ ಹಣವನ್ನು ಒಂದು ಸಾಧನವಾಗಿ ನೋಡದೆ, ಅದೇ ಅಂತಿಮವೆಂದು ಕಾಣುವ ಜನರು, ಕೇವಲ ಅಸ್ತಿತ್ವವನ್ನು ಹೊಂದಿರುತ್ತಾರೆ, ಜೀವನವನ್ನಲ್ಲ. ನೀವೇ ಸ್ವತಃ ‘ಶಕ್ತಿ’ ಎಂಬ ಅರಿವು ನಿಮಗಿಲ್ಲದಿದ್ದಾಗ, ಅಂದರೆ ನೀವು ಪ್ರಬುದ್ಧರು ಎಂಬ ತಿಳುವಳಿಕೆ ಇಲ್ಲದಾಗ, ನೀವು ಹೊರಗಿನ ಅಧಿಕಾರಕ್ಕಾಗಿ ಹಂಬಲಿಸುತ್ತೀರಿ.

ಗಮನ ಮತ್ತು ಮಾನ್ಯತೆಯ ಹಂಬಲ ನಿಮ್ಮಲ್ಲಿ ಉಂಟಾಗುತ್ತಿದ್ದರೆ, ಅದಕ್ಕೆ ಕಾರಣ:

1. ನಿಮ್ಮಲ್ಲಿ ಯಾವುದೇ ಪ್ರತಿಭೆಗಳಿಲ್ಲದೇ ಇರಬಹುದು.
2. ನಿಮ್ಮಲ್ಲಿ ಪ್ರೀತಿ ಅಥವಾ ಉತ್ಸಾಹದ ಕೊರತೆಯಿರಬಹುದು.
3. ನೀವು ಮಗುವಿನಂತೆ ಮುಗ್ಧರಲ್ಲದೆ ಇರಬಹುದು.
4. ನಿಮಗೆ ಯಾವುದೇ ಪ್ರತಿಭೆ ಇಲ್ಲದೆ, ಒಬ್ಬ ಕಲಾವಿದ ಅಥವಾ ವಿಜ್ಞಾನಿ ಅಥವಾ ಆರ್ಟ್ ಆಫ್ ಲಿವಿಂಗ್ ನ ಶಿಕ್ಷಕ ಅಥವಾ ಸ್ವಯಂಸೇವಕರಂತೆ ನೀವು ಸಮಾಜಕ್ಕೆ ಗಣನೀಯವಾದ ಯಾವ ಕೊಡುಗೆಯನ್ನು ನೀಡಲಾಗದಿದ್ದರೆ, ನಿಮ್ಮಲ್ಲಿ ಅಧಿಕಾರದಾಹ ಮನೆಮಾಡಬಹುದು.
5. ಸಮಾಜದಲ್ಲಿ ಪರಿವರ್ತನೆ ತರಲು ನಿಮ್ಮಲ್ಲಿ ಒಲವು ಅಥವಾ ಉತ್ಸಾಹವಿಲ್ಲದಿದ್ದರೆ, ನೀವು ಅಧಿಕಾರಕ್ಕಾಗಿ ಹಂಬಲಿಸುತ್ತೀರಿ.
6. ನೀವು ಮಕ್ಕಳಂತೆ ಮುಗ್ಧರಲ್ಲದಿದ್ದರೆ ಮತ್ತು ಪ್ರಪಂಚದೊಂದಿಗೆ ಆತ್ಮೀಯತೆಯನ್ನು ಅನುಭವಿಸದಿದ್ದರೆ, ನೀವು ಅಧಿಕಾರಕ್ಕಾಗಿ ಆಸೆಪಡುತ್ತೀರಿ.

ಪ್ರತಿಭೆ, ಪ್ರೀತಿ, ಉತ್ಸಾಹ ಮತ್ತು ಮುಗ್ದತೆ ಈ ನಾಲ್ಕರಲ್ಲಿ ಯಾವುದೂ ಇಲ್ಲದವರು, ಕೆಲವು ರಾಜಕಾರಣಿಗಳಂತೆ, ಸದಾ ಅಧಿಕಾರಕ್ಕಾಗಿ ಹಂಬಲಿಸುತ್ತಿರುತ್ತಾರೆ. ನಿಜವಾದ ಶಕ್ತಿ ಎಂದರೆ ಅದು ನಮ್ಮ ಆತ್ಮದ ಶಕ್ತಿ; ನಿಜವಾದ ಆತ್ಮವಿಶ್ವಾಸ, ಶಕ್ತಿ ಮತ್ತು ಸಂತೋಷ ಎಲ್ಲವೂ ಆತ್ಮದಿಂದ ಹುಟ್ಟುತ್ತದೆ ಮತ್ತು ಇದನ್ನು ತಿಳಿದಿರುವವರು ಮತ್ತು ಇದನ್ನು ಹೊಂದಿರುವವರು ಎಂದೂ ಅಧಿಕಾರಕ್ಕಾಗಿ ಆಸೆ ಪಡುವುದಿಲ್ಲ.
 

ಗುರುದೇವರ ಅಧಿಕೃತ ಬ್ಲಾಗ್ನಲ್ಲಿ ಈ ಲೇಖನಗಳನ್ನು ಓದಿ:


Desire makes you weak and powerless | Article by Gurudev : CLICK HERE TO READ




ಸೋಷಿಯಲ್ ಮೀಡಿಯಾದಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರನ್ನು ಅನುಸರಿಸಿ:

ಕಾಮೆಂಟ್‌ಗಳು