ನೀವು ಸದಾ ಎಲ್ಲರ ಗಮನದ ಕೇಂದ್ರವಾಗಿದ್ದು, ಇದ್ದಕ್ಕಿದ್ದಂತೆ ಪಕ್ಕಕ್ಕೆ ಸರಿದರೆ, ನಿಮಗೆ ಹೊರಗಿನವರಂತೆ ಅನ್ನಿಸಬಹುದು. ಅದೇ ರೀತಿ ನೀವು ಯಾವಾಗಲೂ ಎಲೆ ಮರೆಯ ಕಾಯಿಯಂತಿದ್ದು ಇದ್ದಕ್ಕಿದ್ದಂತೆ ಎಲ್ಲರ ಗಮನಕ್ಕೆ ತಳ್ಳಲ್ಪಟ್ಟರೆ, ಅದರಿಂದಲೂ ಸಹ ಚಡಪಡಿಕೆ ಅನುಭವಿಸಬಹುದು. ಹಾಗೆ ನೀವು ಸದಾ ಆದೇಶಗಳನ್ನು ನೀಡುವವರಾಗಿದ್ದರೆ ಮತ್ತು ಇದ್ದಕ್ಕಿದ್ದಂತೆ ಆದೇಶಗಳನ್ನು ತೆಗೆದುಕೊಳ್ಳಬೇಕಾಗಿದರೆ ಅಥವಾ, ನೀವು ಆದೇಶಗಳನ್ನು ಅನುಸರಿಸುವವರಾಗಿದ್ದು, ನಿಮ್ಮನ್ನು ಆದೇಶಗಳನ್ನು ನೀಡುವ ಪರಿಸ್ಥಿತಿಯಲ್ಲಿ ಹಾಕಿದರೆ ಆಗಲು ಸಹ ನೀವು ಪೇಚಿನ ಪರಿಸ್ಥಿತಿಯಲ್ಲಿ ಸಿಲುಕಿದಂತೆ ಭಾಸವಾಗಬಹುದು. ಹಾಗೆಯೇ, ಸದಾ ಕಾರ್ಯನಿರತ ವ್ಯಕ್ತಿಗೆ ಏನೂ ಮಾಡಬೇಕಿರದ ಪರಿಸ್ಥಿತಿ ಅಥವಾ ಆರಾಮದಾಯಕ ವ್ಯಕ್ತಿಗೆ ಸಾಕಷ್ಟು ಜವಾಬ್ದಾರಿಗಳನ್ನು ಎದುರಿಸುವಂತಹ ಪರಿಸ್ಥಿತಿಯು ಸಹ ಚಡಪಡಿಕೆಯನ್ನು ಉಂಟುಮಾಡಬಹುದು. ಈ ರೀತಿಯ ಪೇಚಿನ ಪರಿಸ್ಥಿತಿಯು ನಮ್ಮಲ್ಲಿನ ತರ್ಕಬದ್ದ ಆಲೋಚನೆಯನ್ನು ವಿರೂಪಗೊಳಿಸುತ್ತದೆ.
ಈಗ ನೀವಿರುವ ಪರಿಸ್ಥಿತಿ ಅನಿವಾರ್ಯವಾಗಿದ್ದರೆ, ಅದನ್ನು ಸಹಿಸಿಕೊಳ್ಳಿ, ತಪ್ಪಿಸಬಹುದಾದರೆ ಅದರಿಂದ ಹೊರನಡೆಯಿರಿ, ಅದು ನಿಮ್ಮ ಸಾಮರ್ಥ್ಯಗಳನ್ನು ವಿಸ್ತರಿಸಬಲ್ಲದು ಎಂದಾದರೆ ಕಿರುನಗೆಯೊಂದಿಗೆ ಅದನ್ನು ಸ್ವೀಕರಿಸಿ.
ಪ್ರತಿಯೊಂದು ಕಷ್ಟಕರ / ವಿಚಿತ್ರ / ಪೇಚಿನ ಸನ್ನಿವೇಶವು ನಿಮ್ಮ ಆರಾಮ ವಲಯ (comfort zone) ಅನ್ನು ಹೆಚ್ಚಿಸುತ್ತದೆ. ಈ ರೀತಿಯ ಪ್ರತಿ ಸನ್ನಿವೇಶವು ನೀವು ಜ್ಞಾನದಲ್ಲಿ ಎಷ್ಟು ಆಳವಾಗಿರುತ್ತೀರಿ ಎಂಬುದಕ್ಕೆ ಒಂದು ಪರೀಕ್ಷೆಯಾಗಿದೆ. ಇಂತಹ ಪರಿಸ್ಥಿತಿಯನ್ನು ಪ್ರೀತಿಯಿಂದ ಸ್ವೀಕರಿಸಿ. ಇದು ನಿಮ್ಮ ಆರಾಮ ವಲಯವನ್ನು ಹೆಚ್ಚಿಸುತ್ತದೆ. ನಿಮ್ಮ ಆರಾಮ ವಲಯವು ಹೆಚ್ಚಾದಾಗ, ನಿಮ್ಮನ್ನು ದೃತಿಗೆಡಿಸಲು ಯಾರಿಂದಲೂ ಅಥವಾ ಯಾವುದರಿಂದಲೂ ಸಾಧ್ಯವಾಗುವುದಿಲ್ಲ. ಆಗ ನೀವು ನಿಮ್ಮ ಕೇಂದ್ರದಲ್ಲಿರಬಲ್ಲಿರಿ ಮತ್ತು ಸ್ಥಿರವಾಗುತ್ತೀರಿ.
ಗುರುದೇವರ ಅಧಿಕೃತ ಬ್ಲಾಗನಲ್ಲಿ ಈ ಲೇಖನಗಳನ್ನು ಓದಿ
Why do you feel out of place? How to overcome it? | Article by Gurudev : CLICK HERE TO READ

ಕಾಮೆಂಟ್‌ಗಳು