ಪ್ರಶ್ನೆ 80. ಪ್ರೀತಿಯ ಗುರುದೇವ್, ನಾನು ನಿಮಗೆ ಗುರುವೆಂದು ಶರಣಾಗಿ ಮತ್ತು ಅದೇ ಸಮಯದಲ್ಲಿ ಕೃಷ್ಣ, ಯೇಸು ಅಥವಾ ಅಲ್ಲಾಹುವನ್ನು ಪ್ರಾರ್ಥಿಸಿದರೆ, ಅದು ಸರಿಯೇ? ಒಂದೇ ಸಮಯದಲ್ಲಿ ಎರಡು ಕುರ್ಚಿಗಳ ಮೇಲೆ ಕುಳಿತುಕೊಳ್ಳುವಂತಾಗುವುದಿಲ್ಲವೇ?
ಇಲ್ಲ, ಚಿಂತಿಸಬೇಡಿ. ವಾಸ್ತವವಾಗಿ, ಶರಣಾಗತಿ ಎಂಬ ಈ ಪದವನ್ನು ನಿಘಂಟಿನಿಂದ ತೆಗೆದುಹಾಕಬೇಕು, ಅದನ್ನು ತುಂಬಾ ದುರುಪಯೋಗಪಡಿಸಲಾಗಿದೆ ಮತ್ತು ತಪ್ಪಾಗಿ ಅರ್ಥೈಸಲಾಗಿದೆ. ನೀವು ವಿಶ್ರಾಂತಿಯಿಂದಿರಿ, ಅಷ್ಟು ಸಾಕು. ನಿಮ್ಮನ್ನು ಸದಾ ಸಲಹಲಾಗುತ್ತಿದೆ ಎಂಬ ದೃಢವಾದ ನಂಬಿಕೆಯೊಂದಿಗೆ ವಿಶ್ರಾಂತಿಯನ್ನು ಪಡೆಯಿರಿ! ಮನಸ್ಸಿನ ಅತ್ಯಂತ ಶಾಂತ ಮತ್ತು ಸಂತೋಷದ ಈ ಸ್ಥಿತಿಯನ್ನೇ ಶರಣಾಗತಿ ಎಂದು ಕರೆಯಲಾಗುತ್ತದೆ. ಇಲ್ಲದಿದ್ದರೆ ನಾವು ಶರಣಾಗಲು ತುಂಬಾ ಪ್ರಯತ್ನಿಸುತ್ತೇವೆ; ಯಾರಿಗೆ ಶರಣಾಗಬೇಕು? ಎಲ್ಲಿ ಶರಣಾಗಬೇಕು? ಮತ್ತು ಯಾವುದನ್ನು ಶರಣು ಮಾಡಬೇಕು? ನಿಮ್ಮ ಒಳ್ಳೆಯ ಗುಣಗಳನ್ನು ಖಂಡಿತ ಶರಣಾಗಿಸಲು ನೀವು ಬಯಸುವುದಿಲ್ಲ, ಅಲ್ಲವೇ? ಅವು ನೀವೇ ಆದ್ದರಿಂದ ನೀವು ಅದನ್ನು ಶರಣಾಗಿಸ ಬೇಕಾಗಿಲ್ಲ. ನಿಮಗೆ ಬೇಕಿಲ್ಲದ್ದನ್ನು ನೀವು ಬಿಟ್ಟುಕೊಡಬೇಕು ಅಥವಾ ಶರಣಾಗಿಸಬೇಕು. ಅವು ಯಾವುವು? ನಕಾರಾತ್ಮಕ ಗುಣಗಳು, ನಕಾರಾತ್ಮಕ ಪ್ರವೃತ್ತಿಗಳು ಮತ್ತು ನಕಾರಾತ್ಮಕ ಆಲೋಚನೆಗಳು - ಇವುಗಳನ್ನು ನೀವು ಹೊಂದಲು ಬಯಸುವುದಿಲ್ಲ! ಅದನ್ನು ನೀವು ಶರಣಾಗಿಸಲುವುದಾದರೆ, ಒಳ್ಳೆಯದು! ಪ್ರತಿದಿನ ಅದನ್ನು ಮಾಡಿ, ನಿಮಗೆ ಸಾಧ್ಯವಾದಷ್ಟು! ಆದರೆ ನಂತರ, ಎಚ್ಚರಗೊಂಡು ನೋಡಿ; ಸಕಾರಾತ್ಮಕ ಅಥವಾ ನಕಾರಾತ್ಮಕ ಗುಣಗಳು ಎರಡೂ ನಿಮ್ಮವಲ್ಲ! ಅವು ನಿಮ್ಮಲ್ಲಿ ಬಂದು ಹೋಗುತ್ತಿವೆ ಅಷ್ಟೇ!
ನಿಮ್ಮ ಮನೆಯ ಮುಂದೆ ಹಾದುಹೋಗುವ ಕಾರನ್ನು ನೀವು ಹಿಡಿದಿಟ್ಟುಕೊಳ್ಳುವ ಪ್ರಯತ್ನಮಾಡಿ, "ಇದು ನನ್ನದು, ನಾನು ಈ ಕಾರನ್ನು ತಳ್ಳಿ ಹಾಕುತ್ತೇನೆ!" ಎಂದು ಹೇಳುವುದಿಲ್ಲ ಅಲ್ಲವೇ? ಅದೇ ರೀತಿ, ಆಲೋಚನೆಗಳು ಸಹ, ಬೀದಿಯಲ್ಲಿರುವ ಕಾರುಗಳಂತೆ, ಅವು ನಿಮಗೆ ಸೇರಿದ್ದಲ್ಲ, ಅವುಗಳು ತಾವಾಗಿಯೇ ಚಲಿಸುತ್ತಿವೆ ಮತ್ತು ದೂರ ಹೋಗುತ್ತವೆ. ಆದರೆ ನೀವು, “ಸರಿ, ನಾನು ಈ ಕಾರನ್ನು ಶರಣಾಗಿಸುತ್ತಿದ್ದೇನೆ, ನಂತರ ಇನ್ನೊಂದು ಟ್ರಕ್” (ನಗು); ಹೀಗೆ ಮಾಡುವುದು ನಿಮ್ಮ ಮೋಜಿನ ವಿಧಾನವಾಗಿದ್ದರೆ, ನೀವು ಮುಂದುವರಿಸಬಹುದು.
ಈ ಆಲೋಚನೆಗಳು ನಿಮ್ಮದಲ್ಲ ಎಂದು ಪ್ರಕೃತಿಗೆ ತಿಳಿದಿದೆ. ನಾನು ಈ ಕಾರನ್ನು ಶರಣಾಗಿಸುತ್ತಿದ್ದೇನೆ ಎಂದು ನೀವು ಹೇಳುತ್ತಿರುವಾಗ, ಪ್ರಕೃತಿ ಅದರಲ್ಲಿ ವಿನೋದವನ್ನು ಪಡೆಯುತ್ತದೆ. ಶರಣಾಗಲು ಪ್ರಯತ್ನಿಸುತ್ತಿರುವ ಜನರೊಂದಿಗೆ ಸೃಷ್ಟಿಯು ಬಹಳಷ್ಟು ವಿನೋದವನ್ನು ಪಡೆಯುತ್ತದೆ. ನೀವು ಆಪ್ರಯತ್ನವನ್ನು ಬಿಟ್ಟು ಕೇವಲ ವಿಶ್ರಾಮ ಮಾಡಿ!
ಇಲ್ಲಿ ನಿಮಗೆ ಅತ್ಯಂತ ಪರಿಪೂರ್ಣವಾದ ಜ್ಞಾನವು ಸಿಕ್ಕಿದೆ, ಇಲ್ಲಿ ಯಾವುದೇ ಸಂಘರ್ಷ ಇಲ್ಲ. ಇಲ್ಲಿ ಎಲ್ಲರೂ ಒಂದೇ; ಜೀಸಸ್, ಬುದ್ಧ, ಕೃಷ್ಣ, ಅವರೆಲ್ಲರೂ ಪರಸ್ಪರ ಉತ್ತಮ ಒಪ್ಪಂದವನ್ನು ಹೊಂದಿದ್ದಾರೆ. ಹೇಗೆ ‘ಯುರೋ’ ಕರೆನ್ಸಿ, ಫ್ರಾನ್ಸ್, ಇಟಲಿ, ಜರ್ಮನಿ ಮತ್ತು ಗ್ರೀಸ್‌ನಲ್ಲಿ ಕೆಲಸ ಮಾಡುತ್ತದೆಯೋ ಹಾಗೆಯೇ ಈ ಗುರುಗಳ ನಡುವೆ ಉತ್ತಮ ಒಪ್ಪಂದವಿದೆ; ನೀವು ಯಾವುದೇ ರೂಪ ಅಥವಾ ಹೆಸರಿನಲ್ಲಿ ನೋಡಿದರು, ಎಲ್ಲವೂ ಒಂದೇ ಮೂಲಕ್ಕೆ ಹೋಗುತ್ತದೆ.
ಗುರುದೇವರ ಅಧಿಕೃತ ಬ್ಲಾಗನಲ್ಲಿ ಈ ಲೇಖನಗಳನ್ನು ಓದಿ
Read Official Blogs of Gurudev Sri Sri Ravi Shankar:
What happens when an atheist comes to the Guru? | Article by Gurudev : CLICK HERE TO READ

ಕಾಮೆಂಟ್‌ಗಳು