ಪ್ರಶ್ನೆ 79. ಗೌರವ ಮತ್ತು ಅಹಂ ನಡುವಿನ ಸಂಬಂಧವೇನು?

 


ಗೌರವದಲ್ಲಿ ಎರಡು ವಿಧಗಳಿವೆ:

  1. ನಿಮ್ಮ ಸ್ಥಾನ, ಪ್ರಖ್ಯಾತಿ ಅಥವಾ ಸಂಪತ್ತಿನ ಕಾರಣದಿಂದಾಗಿ ನಿಮಗೆ ಸಿಗುವ ಗೌರವ. ಈ ರೀತಿಯ ಗೌರವವು ಶಾಶ್ವತವಾದದ್ದಲ್ಲ. ನಿಮ್ಮ ಸಂಪತ್ತು ಅಥವಾ ಸ್ಥಾನಮಾನವನ್ನು ಕಳೆದುಕೊಂಡ ನಂತರ ಅದನ್ನು ಕಳೆದುಕೊಳ್ಳಬಹುದು.
  2. ನಿಮ್ಮ ಪ್ರಾಮಾಣಿಕತೆ, ದಯೆ, ಬದ್ಧತೆ, ತಾಳ್ಮೆ ಮತ್ತು ನಿಮ್ಮ ನಗು - ಈ ಗುಣಗಳಿಂದಾಗಿ ಸಿಗುವ ಗೌರವ. ಈ ಗೌರವವನ್ನು ಯಾರೂ ನಿಮ್ಮಿಂದ ಕಸಿದುಕೊಂಡು ಹೋಗಲು ಸಾಧ್ಯವಿಲ್ಲ.

ನಿಮ್ಮಲ್ಲಿನ ಸದ್ಗುಣಗಳಿಗೆ ನೀವು ಎಷ್ಟು ಕಡಿಮೆ ಅಂಟಿಕೊಂಡರೆ ಅಷ್ಟು ನಿಮ್ಮ ಗೌರವವನ್ನು ನೀವು ಕಾಪಾಡಿಕೊಳ್ಳಬಹುದು. ನಿಮ್ಮಲ್ಲಿರುವ ಸದ್ಗುಣಗಳ ಬಗ್ಗೆ ನೀವು ಅಹಂಕಾರ ಪಟ್ಟರೆ, ಆಗ ಬೇರೆ ಎಲ್ಲರನ್ನೂ ಕೀಳಾಗಿ ಕಾಣುತ್ತೀರಿ ಮತ್ತು ಅದರಿಂದ ನಿಮ್ಮ ಸದ್ಗುಣಗಳು ಕಡಿಮೆಯಾಗಲು ಪ್ರಾರಂಭಿಸುತ್ತವೆ. ನಮ್ಮ ಸದ್ಗುಣಗಳ ಬಗ್ಗೆ ಮಮಕಾರರಹಿತವಾಗಿರುವುದು ಅತ್ಯುನ್ನತ ಸ್ವಾಭಿಮಾನವನ್ನು ತರುತ್ತದೆ. ಹಲವು ಬಾರಿ ನಾವು ಅಹಂಕಾರವನ್ನು ಸ್ವಾಭಿಮಾನವೆಂದುಕೊಳ್ಳುತ್ತೇವೆ. ಅಹಂಕಾರಕ್ಕೆ ಇನ್ನೊಬ್ಬರೊಂದಿಗಿನ ಹೋಲಿಕೆ ಅವಶ್ಯ; ಸ್ವಾಭಿಮಾನವು ಕೇವಲ ನಮ್ಮ ಮೇಲಿನ ವಿಶ್ವಾಸದಿಂದ ಬರುತ್ತದೆ. ಉದಾಹರಣೆಗೆ, ಒಬ್ಬ ಸಂಭಾವಿತ ವ್ಯಕ್ತಿಯು ತಾನು ಗಣಿತ ಅಥವಾ ಭೌಗೋಳಿಕದಲ್ಲಿ ಪ್ರವೀಣ ಎಂದು ಹೇಳಿಕೊಳ್ಳುತ್ತಾನೆಂದರೆ, ಇದು ಸ್ವಾಭಿಮಾನ. ಆದರೆ ನಿಮಗಿಂತ ನನಗೆ ಚೆನ್ನಾಗಿ ತಿಳಿದಿದೆ ಎಂದು ಹೇಳುವುದು, ಅದು ಅಹಂಕಾರ.

ಅಹಂ ಎಂದರೆ ಸ್ವ-ಗೌರವದ ಕೊರತೆ.

ಅಹಂನಿಂದ ನಿಮಗೆ ಆಗಾಗ್ಗೆ ಅಸಮಾಧಾನವಾಗುತ್ತದೆ. ಆದರೆ ಸ್ವಾಭಿಮಾನ ಹೊರಗಿನ ಅಂಶಗಳಿಂದ ಅಸಮಾಧಾನಗೊಳ್ಳುವುದನ್ನು ನಿರೋಧಿಸುತ್ತದೆ. ಸ್ವಾಭಿಮಾನದಲ್ಲಿ, ಎಲ್ಲವೂ ಒಂದು ಆಟ, ಗೆಲ್ಲುವುದು ಅಥವಾ ಕಳೆದುಕೊಳ್ಳುವುದಕ್ಕೆ ಯಾವುದೇ ಅರ್ಥವಿಲ್ಲ, ಪ್ರತಿ ಹೆಜ್ಜೆಯೂ ಸಂತೋಷ ಮತ್ತು ಪ್ರತಿಯೊಂದು ನಡೆಯೂ ವಿಜೃಂಭಣೆಯ ಆಚರಣೆಯಾಗಿದೆ.

ಗುರುದೇವರ ಅಧಿಕೃತ ಬ್ಲಾಗನಲ್ಲಿ ಈ ಲೇಖನಗಳನ್ನು ಓದಿ

If You Realize This Simple Truth, You Will Remain Unshaken! | Article by Gurudev : CLICK HERE TO READ



ಸೋಷಿಯಲ್ ಮೀಡಿಯಾದಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರನ್ನು ಅನುಸರಿಸಿ:

ಕಾಮೆಂಟ್‌ಗಳು