ಪ್ರಶ್ನೆ 78. ಜೀವನದಲ್ಲಿ ನಡೆದ ಕೆಲವು ಘಟನೆಗಳು ಅಹಿತಕರವಾಗಿರುತ್ತವೆ. ಈ ಘಟನೆಗಳಿಂದ ನಾವು ಹೊರಬರುವುದು ಹೇಗೆ?

 


ಗುರುದೇವ್ ಶ್ರೀ ಶ್ರೀ ರವಿಶಂಕರ್:

ಘಟನೆಗಳಿಗೆ ಅಗತ್ಯಕ್ಕಿಂತ ಹೆಚ್ಚು ಮಹತ್ವ ನೀಡುವುದೇ, ನೀವು ಜೀವನದಲ್ಲಿ ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳಿಗೆ ಕಾರಣ. ಇದರಿಂದ ಘಟನೆಗಳ ಪ್ರಾಮುಖ್ಯತೆ ಹೆಚ್ಚುತ್ತಾ ಹೋಗುತ್ತದೆ ಮತ್ತು ನೀವು ಅದರ ಮುಂದೆ ಸಣ್ಣವರಾಗುತ್ತಾ ಹೋಗುತ್ತೀರಿ. ಉದಾಹರಣೆಗೆ, ನೀವು ಟ್ರಾಫಿಕ್ ನಿಂದ ತುಂಬಿರುವ ಮೋಟಾರು ರಸ್ತೆಯಲ್ಲಿ ಗಾಡಿಯನ್ನು ಓಡಿಸುತ್ತಿದ್ದೀರಿ ಮತ್ತು ನಿಮ್ಮ ಮುಂದೆ ಅತಿಯಾಗಿ ಹೊಗೆಯನ್ನು ಹೊರಹಾಕುತ್ತಿರುವ ಮತ್ತೊಂದು ವಾಹನವಿದೆ ಎಂದು ಭಾವಿಸಿ. ಈಗ ನಿಮಗೆ ಮೂರು ಆಯ್ಕೆಗಳಿವೆ - 

  1. ನೀವು ಆ ವಾಹನದ ಬಗ್ಗೆ ದೂರುತ್ತಾ, ಅದನ್ನು ಸಹಿಸಿಕೊಂಡು ಅದರ ಹಿಂದೆಯೇ ಹೋಗುತ್ತಿರಬಹುದು.
  2. ನೀವು ನಿಮ್ಮ ವೇಗವನ್ನು ಕಡಿಮೆಗೊಳಿಸಿ ಅಥವಾ ಸ್ವಲ್ಪ ಸಮಯ ಕಾಯುತ್ತಾ, ಆ ವಾಹನವು ನಿಮ್ಮಿಂದ ದೂರ ಹೋಗಲು ಅನುವು ಮಾಡಿಕೊಡಬಹುದು.
  3. ನೀವು ನಿಮ್ಮ ಕುಶಲತೆಯನ್ನು ಬಳಸಿ ಆ ವಾಹನವನ್ನು ಹಿಂದಿಕ್ಕಿ ಅದರಿಂದ ಮುಂದೆ ಸಾಗಿ ಅದರ ಬಗ್ಗೆ ಸಂಪೂರ್ಣವಾಗಿ ಮರೆತುಹೋಗಬಹುದು.

ಆದರೆ ಮೊದಲ ಪ್ರಕರಣದಂತೆ, ನಿಮ್ಮಲ್ಲಿ ಹೆಚ್ಚಿನವರು ಘಟನೆಗಳಿಗೆ ಒತ್ತುಕೊಟ್ಟು, ಅದಕ್ಕೆ ಗಟ್ಟಿಯಾಗಿ ಅಂಟಿಕೊಂಡು, ಜೀವನ ಪ್ರಯಾಣದುದ್ದಕ್ಕೂ ಕಪ್ಪು ಹೊಗೆಯನ್ನು ಸೇವಿಸುತ್ತಾ ಶೋಚನೀಯರಾಗುತ್ತೀರಿ.

ಎರಡನೆಯ ಪ್ರಕರಣದಲ್ಲೂ, ನಿಮಗೆ ಶಾಶ್ವತ ಪರಿಹಾರ ದೊರೆಯುವುದಿಲ್ಲ, ಏಕೆಂದರೆ ಮತ್ತೊಂದು ದೊಡ್ಡ ವಾಹನವು ನಿಮ್ಮ ಮುಂದೆ ಬರಬಹುದು. ಹಾಗೆಯೇ, ಘಟನೆಗಳಿಂದ ತಪ್ಪಿಸಿಕೊಂಡು ಓಡಿಹೋಗುವುದು ಕೂಡ ಶಾಶ್ವತ ಪರಿಹಾರವಲ್ಲ. ಆದಾಗ್ಯೂ, ಬುದ್ಧಿವಂತರು ತಮ್ಮ ಕೌಶಲ್ಯವನ್ನು ಬಳಸುತ್ತಾರೆ ಮತ್ತು ಘಟನೆಗಳನ್ನು ಮೀರಿ ಬೆಳೆಯುತ್ತಾರೆ. ವಾಹನವು ಒಳ್ಳೆಯ ಸ್ಥಿತಿಯಲ್ಲಿದ್ದರೆ, ಕುಶಲತೆಯು ಪರಿಣಾಮಕಾರಿಯಾಗುತ್ತದೆ. ವಾಹನವನ್ನು ಸುಸ್ಥಿತಿಯಲ್ಲಿ ಕಾಪಾಡಿಕೊಳ್ಳುವುದೇ ಸಾಧನೆ ಅಥವಾ ಅಭ್ಯಾಸ ಮತ್ತು ಕುಶಲತೆಯೆಂದರೆ ಗುರುವಿನ ಅನುಗ್ರಹವಷ್ಟೇ.

ಈ ಹಿಂದೆ ನೀವು ಮಾಡಿದ ತಪ್ಪುಗಳು ನಿಮ್ಮನ್ನು ವಿನಮ್ರರನ್ನಾಗಿ ಮಾಡಿವೆ; ವಿನಮ್ರರಾಗಲು ನೀವು ಭವಿಷ್ಯದಲ್ಲಿ ಮತ್ತೆ ತಪ್ಪುಗಳನ್ನು ಮಾಡಬೇಕಾಗಿಲ್ಲ.

ಗುರುದೇವರ ಅಧಿಕೃತ ಬ್ಲಾಗನಲ್ಲಿ ಈ ಲೇಖನಗಳನ್ನು ಓದಿ

5 Tips to Get Past the Blame Game | Article by Gurudev : CLICK HERE TO READ



ಸೋಷಿಯಲ್ ಮೀಡಿಯಾದಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರನ್ನು ಅನುಸರಿಸಿ:

ಕಾಮೆಂಟ್‌ಗಳು