ಪ್ರಶ್ನೆ 77. ಗುರುದೇವ, ನಿಮ್ಮ ಸ್ಫೂರ್ತಿಯ ಮೂಲ ಯಾರು?

 


ಗುರುದೇವ್ ಶ್ರೀ ಶ್ರೀ ರವಿಶಂಕರ್:

ಸ್ಫೂರ್ತಿ ಯಾವಾಗಲೂ ಒಳಗಿನಿಂದಲೇ ಬರುತ್ತದೆ. ಜೀವನದಲ್ಲಿ ಏನನ್ನಾದರೂ ಸಾಧಿಸುವ, ಸಮಾಜದಲ್ಲಿ ಏನಾದರು ಸೇವೆಯನ್ನು ಮಾಡುವ ಅಥವಾ ಜಗತ್ತಿಗೆ ಏನನ್ನಾದರೂ ಮರಳಿ ನೀಡುವ ಬದ್ಧತೆಯನ್ನು ನೀವು ಹೊಂದಿರುವಾಗ, ಎಲ್ಲದರಿಂದಲೂ ಮತ್ತು ನಿಮ್ಮ ಸುತ್ತಲಿನ ಪ್ರತಿಯೊಬ್ಬರಿಂದಲೂ ನೀವು ಸ್ಫೂರ್ತಿಯನ್ನು ಪಡೆಯಬಹುದು.

ಯಾವುದರಿಂದಲೋ ಸ್ಫೂರ್ತಿಯನ್ನು ಪಡೆಯಬೇಕೆಂದು ನೀವು ನಿರ್ಧರಿಸಲು ಸಾಧ್ಯವಿಲ್ಲ, ಸ್ಫೂರ್ತಿ ಎಂಬುದು ಬಹುತೇಕ ಸ್ವಾಭಾವಿಕವಾಗಿ ಸಂಭವಿಸುತ್ತದೆ. ಉದಾಹರಣೆಗೆ, ಒಂದು ಮಗುವು ಆಟವಾಡುವುದನ್ನು ನೋಡುವಾಗ ನಿಮ್ಮೊಳಗೆ ಏನೋ ಒಂದು ಸ್ಪುರಣೆಯಾಗುತ್ತದೆ. ನೀವು ಅದರಿಂದ ಸ್ಫೂರ್ತಿ ಪಡೆಯುತ್ತೀರಿ. ಹಾಗೆಯೇ ಯಾರೋ ಕೆಲವು ಉತ್ತಮ ಕೆಲಸಗಳನ್ನು ಮಾಡುತ್ತಿರುವುದನ್ನು ನೋಡಿದಾಗ, ನಿಮಗೂ ಅದನ್ನು ಮಾಡುವ ಬಯಕೆಯಾಗುತ್ತದೆ..

ನೀವು ಒತ್ತಡದಿಂದ ಮುಕ್ತರಾದಾಗ, ನಿಮ್ಮ ಸುತ್ತಲಿನ ಎಲ್ಲವೂ ನಿಮ್ಮಲ್ಲಿ ಸ್ಫೂರ್ತಿಯನ್ನು ತರುತ್ತದೆ ಎಂದು ನಾವು ಭಾವಿಸುತ್ತೇನೆ. ಆದರೆ ನಿಮ್ಮಲ್ಲಿ ಒತ್ತಡವು ತುಂಬಿಕೊಂಡಿದ್ದರೆ, ಅತ್ಯತ್ತಮವಾದ ಜ್ಞಾನವು ಸಹ ನಿಜವಾಗಿಯೂ ನಿಮ್ಮೊಳಗೆ ಪ್ರವೇಶಿಸುವುದಿಲ್ಲ.

ಗುರುದೇವರ ಅಧಿಕೃತ ಬ್ಲಾಗನಲ್ಲಿ ಈ ಲೇಖನಗಳನ್ನು ಓದಿ

12 Inspirational tweets from Gurudev Sri Sri Ravi Shankar to kick start your week | Article by Gurudev : CLICK HERE TO READ




ಸೋಷಿಯಲ್ ಮೀಡಿಯಾದಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರನ್ನು ಅನುಸರಿಸಿ:


ಕಾಮೆಂಟ್‌ಗಳು