ಸಾಮಾನ್ಯವಾಗಿ ನಾವು, ಯಾವುದು ಉದ್ದೇಶಪೂರ್ವಕವಾಗಿರುತ್ತದೋ, ಉಪಯುಕ್ತ ಎನಿಸುತ್ತದೆಯೋ ಮತ್ತು ಯಾವುದು ತರ್ಕಬದ್ಧವಾದದ್ದೋ ಅದನ್ನು ಮಾತ್ರ ಮಾಡುತ್ತೇವೆ. ನಾವು ಎಲ್ಲವನ್ನೂ ತರ್ಕಬದ್ಧ ಮನಸ್ಸಿನ ಮೂಲಕವೇ ನೋಡುತ್ತೇವೆ. ಆದರೆ ಅಂತಃಪ್ರಜ್ಞೆ, ಒಂದು ಹೊಸ ಆವಿಷ್ಕಾರ, ಜ್ಞಾನ ಇದೆಲ್ಲ ತರ್ಕಕ್ಕೆ ಹೊರತಾಗಿದೆ. ಸತ್ಯವು ತರ್ಕವನ್ನು ಮೀರಿದೆ.
ತರ್ಕಬದ್ಧ ಮನಸ್ಸು ಚಡಿಗಳಲ್ಲಿ ಸ್ಥಿರವಾಗಿರುವ ರೈಲು ಹಳಿಯಂತೆ. ವಿಮಾನಕ್ಕೆ ಯಾವುದೇ ಹಳಿಗಳಿಲ್ಲ, ಅದು ಎಲ್ಲಿ ಬೇಕಾದರೂ ಹಾರಬಲ್ಲದು. ಒಂದು ಬಲೂನ್ ಎಲ್ಲಿ ಬೇಕಾದರೂ ತೇಲುತ್ತದೆ. ಕೆಲವರು ಸಮಾಜದ ವಿರುದ್ಧ ದಂಗೆ ಏಳಲು ತಮ್ಮ ತರ್ಕಬದ್ಧ ಮನಸ್ಸಿನಿಂದ ಹೊರಬರಲು ಬಯಸುತ್ತಾರೆ. ಅವರು ತಮ್ಮ ಅಹಂನ ಸಲುವಾಗಿ ಸಾಮಾಜಿಕ ಕಾನೂನನ್ನು ಮುರಿಯಲು ಬಯಸುತ್ತಾರೆ ಹಾಗು ಗಮನವನ್ನು ಸೆಳೆಯಲು, ಕೋಪ ಮತ್ತು ದ್ವೇಷದಿಂದ ದಂಗೆ ಏಳುತ್ತಾರೆ. ಇದು ತರ್ಕಬದ್ಧ ಮನಸ್ಸಿನಿಂದ ಹೊರಬಂದಂತೆ ಅಲ್ಲ. (ತಾವು ಹೊರಬಂದಿದ್ದೇವೆ ಎಂದು ಅವರು ತಿಳಿದಿದ್ದರೂ ಸಹ)
ಯಾವುದೇ ಉದ್ದೇಶವಿಲ್ಲದೆ ನಾವು ಕೆಲಸವನ್ನು ಮಾಡಿದಾಗ, ಮನಸ್ಸು ತರ್ಕದಿಂದ ಹೊರಬರುತ್ತದೆ. ಆ ಕೆಲಸವನ್ನು ಒಂದು ಚಟುವಟಿಕೆಯಾಗಿ ನೋಡಿದರೆ, ಅದು ಒಂದು ಆಟವಾಗಿ ಕಾಣುತ್ತದೆ. ಅದರಿಂದ ಜೀವನ ಹಗುರವಾಗುತ್ತದೆ. ನೀವು ಕೇವಲ ತರ್ಕಬದ್ಧ ಕೃತ್ಯಗಳಲ್ಲಿ ಸಿಲುಕಿಕೊಂಡರೆ, ಜೀವನವು ಒಂದು ಹೊರೆಯಾಗುತ್ತದೆ. ಗೆಲ್ಲುವ ಅಥವಾ ಸೋಲುವ ಯೋಚನೆಯಿಲ್ಲದೆ ನೀವು ಆಟವನ್ನು ಆಡುತ್ತೀರಿ ಎಂದು ಭಾವಿಸೋಣ ಅಥವಾ ಯಾವುದೇ ಉದ್ದೇಶವಿಲ್ಲದೆ ಒಂದು ಕೃತ್ಯವನ್ನು ಮಾಡುತ್ತೀರಿ ಎಂದಿಟ್ಟುಕೊಳ್ಳಿ - ಅದೇ ಸ್ವಾತಂತ್ರ್ಯ - ಅದು ಒಂದು ನೃತ್ಯದಂತೆ. ತರ್ಕಬದ್ಧ ಮನಸ್ಸಿನಿಂದ ಹೊರಗುಳಿದಾಗ ನೀವು ಹೆಚ್ಚಿನ ಸ್ವಾತಂತ್ರ್ಯವನ್ನು, ಅಗ್ರಾಹ್ಯವಾದ ಆಳವನ್ನು ಕಾಣುತ್ತೀರಿ. ಆಗ ನೀವು ವಾಸ್ತವದೊಂದಿಗೆ ಮುಖಾಮುಖಿಯಾಗುತ್ತೀರಿ.
ವಾಸ್ತವತೆ ತರ್ಕ ಮತ್ತು ತರ್ಕಬದ್ಧ ಮನಸ್ಸನ್ನು ಮೀರಿದ್ದಾಗಿದೆ. ನೀವು ತರ್ಕವನ್ನು ಮೀರುವವರೆಗೂ ನಿಮಗೆ ಸೃಜನಶೀಲತೆ ಮತ್ತು ಅನಂತತೆಯ ಅನುಭವವಾಗುವುದಿಲ್ಲ.
ಆದರೆ, ಸ್ವಾತಂತ್ರ್ಯವನ್ನು ಪಡೆಯುವ ಉದ್ದೇಶವಿಟ್ಟುಕೊಂಡು ತರ್ಕವಿರುದ್ಧ ಕ್ರಿಯೆಯನ್ನು ಮಾಡಿದರೆ, ಅದು ಈಗಾಗಲೇ ಒಂದು ಉದ್ದೇಶ ಮತ್ತು ಅರ್ಥವನ್ನು ಹೊಂದಿರುವ ಕಾರಣ, ನಿಮಗೆ ಆ ಅನುಭವ ಸಿಗುವುದಿಲ್ಲ. ಉದ್ದೇಶವು ಈ ಜ್ಞಾನದ ಸಾಧ್ಯತೆಯನ್ನು ಹಾಳು ಮಾಡುತ್ತದೆ. ತರ್ಕಬದ್ಧ ಮನಸ್ಸಿನ ತಡೆಗೋಡೆಯನ್ನು ಮುರಿದು ನಿಮ್ಮ ಸ್ವಾತಂತ್ರ್ಯವನ್ನು ಕಂಡುಕೊಳ್ಳಿ.
ಗುರುದೇವರ ಅಧಿಕೃತ ಬ್ಲಾಗನಲ್ಲಿ ಈ ಲೇಖನಗಳನ್ನು ಓದಿ
Keep your mind open to all possibilities | Article by Gurudev : CLICK HERE TO READ
ಸೋಷಿಯಲ್ ಮೀಡಿಯಾದಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರನ್ನು ಅನುಸರಿಸಿ:
Instagram : https://www.instagram.com/srisriravishankar

ಕಾಮೆಂಟ್‌ಗಳು