ಪ್ರಶ್ನೆ 73. ಗುರುದೇವ, ಭಗವದ್ಗೀತೆಯಲ್ಲಿ ಭಗವಾನ್ ಶ್ರೀ ಕೃಷ್ಣ, “ಸರ್ವ-ಸಂಕಲ್ಪ ಸಂನ್ಯಾಸೀ” ಎಂದು ಹೇಳುತ್ತಾರೆ. ಅದರ ಅರ್ಥವೇನು?
ನೀವು ನಿದ್ರೆಗೆ ಹೋಗುವಾಗ, “ನಾನು ಇದನ್ನು ಮಾಡಬೇಕು, ನಾನು ಅದನ್ನು ಮಾಡಬೇಕು” ಎಂದು ಯೋಚಿಸುತ್ತಿದ್ದರೆ, ನಿಮಗೆ ನಿದ್ರೆ ಮಾಡಲು ಸಾಧ್ಯವಾಗುತ್ತದೆಯೇ? ನಿದ್ದೆ ಮಾಡುವಾಗ ನೀವು ಏನು ಮಾಡುತ್ತೀರಿ? ಎಲ್ಲ ಯೋಚನೆಯನ್ನು ಪಕ್ಕಕ್ಕೆ ಇರಿಸಿ, ನಿದ್ರಿಸುತ್ತೀರಿ ಅಲ್ಲವೇ? ಆಗ ಮಾತ್ರ ನಿಮಗೆ ನಿದ್ರೆ ಬರಲು ಸಾಧ್ಯವಾಗುತ್ತದೆ. ಈ ವಾಕ್ಯದಲ್ಲಿ ಆಳವಾದ ಅರ್ಥವಿದೆ. 'ನನಗೆ ಇದು ಬೇಕು', 'ನಾನು ಇದನ್ನು ಮಾಡಬೇಕು, ಅದನ್ನು ಮುಗಿಸಬೇಕು' ಎಂಬ ಆಲೋಚನೆಗಳ ಜ್ವರದಲ್ಲಿ ಮನಸ್ಸು ಸಿಲುಕಿರುವವರೆಗೂ ಯೋಗವು ಸಾಧ್ಯವಾಗುವುದಿಲ್ಲ.
20 ವಿಭಿನ್ನ ವಿಷಯಗಳ ಬಗ್ಗೆ ನಿಮ್ಮ ಮನಸ್ಸು ಆಲೋಚನೆಯಲ್ಲಿರುವಾಗ ನೀವು ಹೇಗೆ ಆಳವಾದ ವಿಶ್ರಾಂತಿ ಪಡೆಯಲು ಸಾಧ್ಯ? ಅಂತಹ ಸ್ಥಿತಿಯಲ್ಲಿ ನಿಮಗೆ ಏನಾದರೂ ಆರಾಮ ಸಿಗಬಹುದೇ? ಆದ್ದರಿಂದ ಸ್ವಲ್ಪ ಸಮಯದವರೆಗೆ, ನೀವು ಎಲ್ಲವನ್ನೂ ಬದಿಗಿರಿಸಬೇಕಾಗುತ್ತದೆ. “ಸರ್ವ-ಸಂಕಲ್ಪ ಸಂನ್ಯಾಸೀ” ಎಂಬುದರ ತಾತ್ಪರ್ಯ ಇದೇ.
ಯದಾ ಹಿ ನೇಂದ್ರಿಯಾರ್ಥೇಷು ನ ಕರ್ಮಸ್ವನುಷಜ್ಜತೇ। ಸರ್ವಸಂಕಲ್ಪಸಂನ್ಯಾಸೀ ಯೋಗಾರೂಢಸ್ತದೋಚ್ಯತೆ ।।ಭಗವದ್ಗೀತೆ, 6.4।।
ಒಬ್ಬನು ತನಗಾಗಿ ಏನನ್ನೂ ಬಯಸದ ಹಂತವನ್ನು ತಲುಪಿದಾಗ, ಅವನು ಯೋಗಿಯಾಗುತ್ತಾನೆ, ಸನ್ಯಾಸಿಯಾಗುತ್ತಾನೆ. ಅಂತಹ ಬುದ್ಧಿವಂತ ಮತ್ತು ನಿಸ್ವಾರ್ಥ ವ್ಯಕ್ತಿ ತನ್ನ ಸುತ್ತಲಿನ ಎಲ್ಲರಿಗೂ ಉಪಯುಕ್ತವಾಗುತ್ತಾನೆ. ನೀವು ನಿಜವಾಗಿಯೂ ಯಾರನ್ನು ಸಂತ, ಪ್ರವಾದಿ ಎಂದು ಕರೆಯುತ್ತೀರಿ? ಯಾರು ತನಗಾಗಿ ಏನನ್ನೂ ಅಪೇಕ್ಷಿಸುವುದಿಲ್ಲವೋ ಮತ್ತು ಎಲ್ಲರ ಕಲ್ಯಾಣ ಮತ್ತು ಯೋಗಕ್ಷೇಮಕ್ಕಾಗಿ ಮಾತ್ರ ಪ್ರಾರ್ಥಿಸಿ ಮತ್ತು ಅದಕ್ಕಾಗಿ ಕೆಲಸ ಮಾಡುವವರೋ ಅಂತಹವರನ್ನು.
ಜನರು ಸಾಮಾನ್ಯವಾಗಿ ಖ್ಯಾತಿ, ಹಣ ಇತ್ಯಾದಿಗಳನ್ನು ಬಯಸುತ್ತಾರೆ. ಇಂತಹ ಆಸೆಯೇ ಒಬ್ಬ ವ್ಯಕ್ತಿಯನ್ನು ನಾಶಪಡಿಸುತ್ತದೆ ಮತ್ತು ಜೀವನದಲ್ಲಿ ಅವನ ದೃಷ್ಟಿಕೋನವನ್ನು ಬಹಳ ಕಿರಿದಾಗಿಸಿ ಸೀಮಿತಗೊಳಿಸುತ್ತದೆ. ಆದ್ದರಿಂದಲೇ ಒಬ್ಬ ವ್ಯಕ್ತಿಯು ಈ ರೀತಿಯ ಬಯಕೆಯ ಜ್ವರವನ್ನು ಕಡಿಮೆಗೊಳಿಸಿ, ಒಳಗಿನಿಂದ ಖಾಲಿಯಾಗುವವರೆಗೂ ಅವನಿಗೆ ಶಾಂತಿ ಸಿಗುವುದಿಲ್ಲ ಎಂದು ಶ್ರೀಕೃಷ್ಣನು ಹೇಳುತ್ತಾನೆ. ಮನಸ್ಸು ಟೊಳ್ಳಾಗಿ ಖಾಲಿಯಾದ ನಂತರವೇ, ಒಬ್ಬನು ಅಂತಹ ಆಳವಾದ ವಿಶ್ರಾಂತಿಯನ್ನು ಅನುಭವಿಸುತ್ತಾನೆ ಮತ್ತು ಆ ಸಮಯದಲ್ಲಿ ಮಾತ್ರವೇ ಆಳವಾದ ಆನಂದವು ಒಳಗಿನಿಂದ ಉದ್ಭವಿಸುತ್ತದೆ.
ಅಂತಹ ಸ್ಥಿತಿಯಲ್ಲಿ, ಅವರು ದೈವಿಕತೆಯ ಬೆಳಕನ್ನು ಒಳಗೆ ಮತ್ತು ಸುತ್ತಲೂ ಕಾಣುತ್ತಾರೆ. ಇದನ್ನೇ ಇಲ್ಲಿ ತಿಳಿಸಿಕೊಡಲಾಗಿದೆ.
ಗುರುದೇವರ ಅಧಿಕೃತ ಬ್ಲಾಗನಲ್ಲಿ ಈ ಲೇಖನಗಳನ್ನು ಓದಿ
Contradictions in the Bhagavad Gita | Article by Gurudev : CLICK HERE TO READ

ಕಾಮೆಂಟ್‌ಗಳು