ಪ್ರಶ್ನೆ 71. ಬ್ರಹ್ಮಾಂಡದ 5 ಅಂಶಗಳು ಯಾವುವು?

 


ಗುರುದೇವ್ ಶ್ರೀ ಶ್ರೀ ರವಿಶಂಕರ್:

ನಿಮ್ಮದೇ ಅಸ್ತಿತ್ವಕ್ಕೆ ಐದು ಅಂಶಗಳಿವೆ - ಅಸ್ತಿ (ಇರುವುದು); ಭಾತಿ (ಜ್ಞಾನ, ಅಭಿವ್ಯಕ್ತಿ); ಪ್ರೀತಿ; ನಾಮ (ಹೆಸರು); ಮತ್ತು ರೂಪ.

ಭೌತಿಕ ಇರುವಿಕೆಗೆ ಎರಡು ಅಂಶಗಳು - ನಾಮ ಮತ್ತು ರೂಪ.

ಪ್ರಜ್ಞೆಗೆ ಮೂರು ಅಂಶಗಳು - ಅಸ್ತಿ - "ಇರುವಿಕೆ", ಅದು ಇದೆ; ಭಾತಿ - ತಿಳುವಳಿಕೆ / ಅಭಿವ್ಯಕ್ತಿ - ಅದು ತಿಳಿದಿದೆ ಮತ್ತು ವ್ಯಕ್ತಪಡಿಸುತ್ತದೆ; ಮತ್ತು ಪ್ರೀತಿ - ಅದು ಪ್ರೀತಿಯಿಂದ ತುಂಬಿದೆ.

ಇದು ಇಡೀ ಬ್ರಹ್ಮಾಂಡದ ರಹಸ್ಯ.

ಮಾಯೆ ಎಂದರೆ ಪ್ರಜ್ಞೆಯ ಈ ಮೂರು ಅಂಶಗಳ ಬಗ್ಗೆ ಅರಿವಿಲ್ಲದೇ ಇರುವುದು. ನಾಮ ಮತ್ತು ರೂಪಗಳ ಮಿತಿಯಲ್ಲಿ ಸಿಕ್ಕಿಬಿದ್ದಾಗ ಅದೇ ಅಜ್ಞಾನ.

ಪ್ರಶ್ನೆ: ನಾವು ಯಾಕೆ ಅಪರಿಪೂರ್ಣರು?

ಉತ್ತರ: ನಾವು ಪೂರ್ಣತೆಗೆ ಬೆಳೆಯಬೇಕಾಗಿದೆ, ಹಾಗಾಗಿ. ಜೀವನವು, ಅಪೂರ್ಣತೆಯಿಂದ ಪರಿಪೂರ್ಣತೆಯೆಡೆಗಿನ ಒಂದು ಯಾತ್ರೆಯಾಗಿದೆ. ಒಂದು ಬೀಜವು ತನ್ನ ಒಡಲಲ್ಲಿ ಇಡೀ ಮರವನ್ನು ಅಡಗಿಸಿಕೊಂಡಿರುತ್ತದೆ. ಆದರೆ ಬೀಜವು ಮರವಾಗಲು ತಾನು ಬೀಜವಾಗಿರುವುದನ್ನು ಬಿಡಬೇಕು. ಬೀಜವು ಪರಿಪೂರ್ಣವಲ್ಲ. ಸಸಿ ಪರಿಪೂರ್ಣವಲ್ಲ. ಅದು ಮರವಾಗಲು, ಕೇವಲ ಸಸಿ ಆಗಿರುವುದನ್ನು ನಿಲ್ಲಿಸಬೇಕು. ಆದ್ದರಿಂದ ಜೀವನದಲ್ಲಿ ನೀವು ಪ್ರತಿ ಹಂತದಲ್ಲೂ ಕೇವಲ ಅಪೂರ್ಣತೆಯನ್ನು ನೋಡಬಹುದು, ಅಥವಾ ಒಂದು ಪೂರ್ಣತೆಯಿಂದ ಮತ್ತೊಂದು ಪೂರ್ಣತೆಯೆಡೆಗಿನ ಚಲನೆಯನ್ನು ನೋಡಬಹುದು.

ನೀವು ನಿಮ್ಮ ಗಮನವನ್ನು ಯಾವುದರ ಮೇಲೆ ಹರಿಸಿದರೆ, ಅದು ಬೆಳೆಯುತ್ತದೆ. ಕೊರತೆಯ ಬಗ್ಗೆ ನಿಮ್ಮ ಗಮನವಿದ್ದರೆ, ಕೊರತೆಯೇ ಹೆಚ್ಚಾಗುತ್ತದೆ.



ಸೋಷಿಯಲ್ ಮೀಡಿಯಾದಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರನ್ನು ಅನುಸರಿಸಿ:

ಕಾಮೆಂಟ್‌ಗಳು