ಪ್ರಶ್ನೆ 70: ನಮ್ಮ ದೈನಂದಿನ ಜೀವನದಲ್ಲಿ ತ್ಯಾಗದ ಪಾತ್ರವೇನು?

 


ಗುರುದೇವ್ ಶ್ರೀ ಶ್ರೀ ರವಿಶಂಕರ್:

ನಿಮಗೆ ಸಂತೋಷವನ್ನು ನೀಡುವ ಅಥವಾ ನಿಮಗೆ ಪ್ರಿಯವಾದ ಯಾವುದನ್ನಾದರೂ, ಒಂದು ಒಳ್ಳೆಯ ಕಾರ್ಯಸಾಧನೆಗಾಗಿ ಇಲ್ಲ ಯಾವುದಾದರು ಮಹತ್ತರ ಉದ್ದೇಶಕ್ಕಾಗಿ ಬಿಟ್ಟುಕೊಡುವುದೇ ತ್ಯಾಗವೆನಿಸುತ್ತದೆ. ತ್ಯಾಗವು ಜೀವನದಲ್ಲಿ ಶಕ್ತಿಯನ್ನು ತರುತ್ತದೆ. ತ್ಯಾಗವಿಲ್ಲದ ಜೀವನವು ನಿಶ್ಚಲವಾಗಿರುತ್ತದೆ. ತ್ಯಾಗವು ನಿಮಗೆ ಅಧಿಕವಾದ ನಂಬಿಕೆಯನ್ನುತರುತ್ತದೆ. ಇದು ನಿಮ್ಮನ್ನು ಉನ್ನತವಾದ ಸ್ಥರಕ್ಕೆ ಕರೆದೊಯ್ಯುತ್ತದೆ.

ಸಾಮಾನ್ಯವಾಗಿ ಜನರು, ತ್ಯಾಗವು ಜೀವನವನ್ನು ಮಂದ ಮತ್ತು ಸಂತೋಷರಹಿತವಾಗಿಸುತ್ತದೆ ಎಂದು ಭಾವಿಸುತ್ತಾರೆ. ಆದರೆ ವಾಸ್ತವದಲ್ಲಿ, ತ್ಯಾಗವೇ ಜೀವನವನ್ನು ಮೌಲ್ಯಯುತವಾಗಿಸುತ್ತದೆ. ನಿಮ್ಮ ಜೀವನದಲ್ಲಿರುವ ತ್ಯಾಗದ ಪ್ರಮಾಣವು ನಿಮ್ಮ ವೈಭವವನ್ನು ಹೊರತರುತ್ತದೆ ಮತ್ತು ನಿಮಗೆ ದುಃಖದಿಂದ ಹೊರಬರಲು ಸಹಾಯ ಮಾಡುತ್ತದೆ. ತ್ಯಾಗವಿಲ್ಲದ ಜೀವನವು ಯೋಗ್ಯವಾಗಿಲ್ಲ. ಉತ್ಸಾಹ, ಶಕ್ತಿ ಮತ್ತು ಸಂತೋಷ ಎಲ್ಲವೂ ತ್ಯಾಗದೊಂದಿಗೆ ಮಿಳಿತವಾಗಿದೆ.

ಪ್ರಶ್ನೆ: ಕೆಲವರು "ನಾನು ತುಂಬಾ ತ್ಯಾಗ ಮಾಡಿದ್ದೇನೆ" ಎಂದು ಸದಾ ದೂರುತ್ತಿರುತ್ತಾರೆ?

ಉತ್ತರ: ಅದು ಒಳ್ಳೆಯದು. ತ್ಯಾಗ ಮಾಡಿರುವ ಭಾವವು ಅವರಿಗೆ ದೂರುವ ಶಕ್ತಿಯನ್ನು ನೀಡಿದೆ. ಅದು ಅವರನ್ನು ತಮ್ಮನ್ನು ತಾವೇ ದೂಷಿಸಿಕೊಳ್ಳುವುದರಿಂದ ಉಳಿಸುತ್ತದೆ. ತ್ಯಾಗವೇ ಇಲ್ಲದಿದ್ದರೆ ಅವರು ಹೆಚ್ಚು ದೂಷಿಸಿಕೊಂಡು ಖಿನ್ನತೆಗೆ ಒಳಗಾಗುತ್ತಿದ್ದರು.

ಗುರುದೇವರ ಅಧಿಕೃತ ಬ್ಲಾಗನಲ್ಲಿ ಈ ಲೇಖನಗಳನ್ನು ಓದಿ

How does the EGO works? - CLICK HERE TO READ



ಸೋಷಿಯಲ್ ಮೀಡಿಯಾದಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರನ್ನು ಅನುಸರಿಸಿ:

ಕಾಮೆಂಟ್‌ಗಳು