ಪ್ರಕೃತಿಯ ಸಹಕಾರದಿಂದ ಮಾನವರಿಗೆ ಮಾಹಿತಿ ಮತ್ತು ಸೌಕರ್ಯವನ್ನು ಕಲ್ಪಿಸುವುದೇ ತಂತ್ರಜ್ಞಾನದ ಉದ್ದೇಶವಾಗಿದೆ. ಆಧ್ಯಾತ್ಮಿಕ ಮೌಲ್ಯಗಳನ್ನು - ಮಾನವ ಮೌಲ್ಯಗಳನ್ನು - ನಿರ್ಲಕ್ಷಿಸಿದಾಗ, ಆರಾಮವನ್ನು ತರುವ ಬದಲು, ತಂತ್ರಜ್ಞಾನವು ಭಯ ಮತ್ತು ವಿನಾಶವನ್ನು ತರುತ್ತದೆ. ಮಾನವೀಯ ಮೌಲ್ಯಗಳಿಲ್ಲದ ತಂತ್ರಜ್ಞಾನವು ಪ್ರಕೃತಿಯನ್ನು ಸತ್ತ ವಸ್ತುವಾಗಿ ನೋಡುತ್ತದೆ. ವಿಜ್ಞಾನವು ಪ್ರಕೃತಿಯ ಬಗ್ಗೆ ಒಳನೋಟವನ್ನು ನೀಡಿದರೆ, ಆಧ್ಯಾತ್ಮವು ಪ್ರಕೃತಿಯನ್ನು ಜೀವಂತಗೊಳಿಸುತ್ತದೆ.
ಉದಾಹರಣೆಗೆ, ಮಕ್ಕಳ ದೃಷ್ಟಿಯಲ್ಲಿ, ಜಗತ್ತಿನಲ್ಲಿ ಯಾವುದೂ ಪ್ರಾಣವಿಲ್ಲದೇ ಇಲ್ಲ - ಪ್ರಾಣಿಗಳು, ಮರಗಳು, ಸೂರ್ಯ ಚಂದ್ರ - ಎಲ್ಲಕ್ಕೂ ಜೀವವಿರುತ್ತದೆ, ಅವೆಲ್ಲಕ್ಕೂ ಭಾವನೆಗಳಿರುತ್ತವೆ. ಅದೇ ಒತ್ತಡಕ್ಕೊಳಗಾದ ಮತ್ತು ಅಜ್ಞಾನಿಯ ದೃಷ್ಟಿಯಲ್ಲಿ, ಮಾನವರು ಸಹ ರೋಬೋಗಳಂತೆ - ವಸ್ತುಗಳಾಗುತ್ತಾರೆ!
ಆಧ್ಯಾತ್ಮವಿಲ್ಲದ ತಂತ್ರಜ್ಞಾನವು ವಿನಾಶಕಾರಿಯಾಗುತ್ತದೆ. ಆಧ್ಯಾತ್ಮಿಕತೆಯು ಪ್ರಜ್ಞೆಯ ತಂತ್ರಜ್ಞಾನವಾಗಿದೆ, ಮತ್ತು ಇಡೀ ಸೃಷ್ಟಿಯು ಇದೇ ಪ್ರಜ್ಞೆಯ ಆಟ ಮತ್ತು ಪ್ರದರ್ಶನವಾಗಿದೆ.
ಗುರುದೇವರ ಅಧಿಕೃತ ಬ್ಲಾಗನಲ್ಲಿ ಈ ಲೇಖನಗಳನ್ನು ಓದಿ
1. 5 Sacred Secrets Guarded By The Subtle Beings and Angels In This Creation : CLICK HERE TO READ
2. How To Improve Your Creative Thinking? : CLICK HERE TO READ
ಸೋಷಿಯಲ್ ಮೀಡಿಯಾದಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರನ್ನು ಅನುಸರಿಸಿ:

ಕಾಮೆಂಟ್‌ಗಳು