ಪ್ರಶ್ನೆ 68. ವ್ಯವಹಾರ ಮತ್ತು ಆಧ್ಯಾತ್ಮಿಕತೆಯ ಒಳನೋಟವನ್ನು ದಯವಿಟ್ಟು ತಿಳಿಸಿಕೊಡಿ?

 


ಗುರುದೇವ್ ಶ್ರೀ ಶ್ರೀ ರವಿಶಂಕರ್:

ಆಗಾಗ್ಗೆ ವ್ಯವಹಾರವನ್ನು ಆಧ್ಯಾತ್ಮಿಕರು ಕೀಳಾಗಿ ಕಾಣುತ್ತಾರೆ ಮತ್ತು ಆಧ್ಯಾತ್ಮವನ್ನು ಉದ್ಯಮಿಗಳು ಪ್ರಾಯೋಗಿಕವಲ್ಲವೆಂದು ತಳ್ಳಿಹಾಕುತ್ತಾರೆ. ಆಧ್ಯಾತ್ಮ ಹೃದಯದಂತಾದರೆ ವ್ಯವಹಾರವು ಅದರ ಕೈಕಾಲುಗಳಿದ್ದಂತೆ, ನಮ್ಮ ಪೂರ್ವಜರು ಕಲ್ಪಿಸಿಕೊಟ್ಟ ದೃಷ್ಟಿ ಇದೇ. ಈ ಎರಡೂ ಅಂಶಗಳಿಲ್ಲದೆ ಒಬ್ಬ ವ್ಯಕ್ತಿ ಅಥವಾ ಸಮಾಜ ಸಂಪೂರ್ಣವಾಗುವುದಿಲ್ಲ. ವ್ಯವಹಾರವು ವಸ್ತು ಸೌಕರ್ಯವನ್ನು ತರುತ್ತದೆ ಮತ್ತು ಆಧ್ಯಾತ್ಮವು ಮಾನಸಿಕ ಮತ್ತು ಭಾವನಾತ್ಮಕ ಆರಾಮವನ್ನು ತರುತ್ತದೆ. ಆಧ್ಯಾತ್ಮಿಕತೆಯು ವ್ಯವಹಾರಕ್ಕೆ ನೈತಿಕತೆ ಮತ್ತು ನ್ಯಾಯದ ಆಯಾಮವನ್ನು ನೀಡುತ್ತದೆ. ದೇಹ / ಮನಸ್ಸಿನ ಸಂಕೀರ್ಣದಲ್ಲಿ ಯಾವುದೇ ಒಂದು ಆರಾಮವನ್ನು ಕಳೆದುಕೊಳ್ಳುವುದು ಎಂದರೆ ಎರಡೂ ಸೌಕರ್ಯಗಳನ್ನು ಕಳೆದುಕೊಂಡಂತೆಯೇ.

ಬಡವರ ಮೂಲಭೂತ ಅಗತ್ಯಗಳನ್ನು ಪೂರೈಸದೆ ನೀವು ಅವರೊಂದಿಗೆ ಆಧ್ಯಾತ್ಮದ ಬಗ್ಗೆ ಮಾತನಾಡಲು ಸಾಧ್ಯವಿಲ್ಲ. ಅವರನ್ನು ಪ್ರಾಪಂಚಿಕವಾಗಿ ಬೆಂಬಲಿಸುವ ಅಗತ್ಯವಿದೆ. ಸೇವೆಯಿಲ್ಲದೆ ಇರುವ ಯಾವುದೇ ಆಧ್ಯಾತ್ಮವು ಜಗತ್ತಿನಲ್ಲಿಲ್ಲ. ಪ್ರಾಪಂಚಿಕ ಅವಶ್ಯಕತೆಗಳನ್ನು ನಿರ್ಲಕ್ಷಿಸಿದರೆ ಸೇವೆ ಮಾಡಲಾಗುವುದಿಲ್ಲ. ಸೇವೆ ಎಂಬುದು ಕೇವಲ ಮಾತುಗಳ ಮೂಲಕ ನಡೆಯುವಿದಿಲ್ಲ, ಸೇವೆ ಮಾಡಲು ಕೈಕಾಲುಗಳು ಬೇಕು.

ಪ್ರತಿಯೊಂದು ವ್ಯವಸ್ಥೆಯು ನ್ಯೂನತೆಗಳನ್ನು ಹೊಂದಿದೆ. ಬಂಡವಾಳಶಾಹಿ ಬಡವರನ್ನು ಶೋಷಿಸುತ್ತಿದ್ದಂತೆ, ಸಮಾಜವಾದವು ವೈಯಕ್ತಿಕ ಸೃಜನಶೀಲತೆ ಮತ್ತು ಉದ್ಯಮಶೀಲತೆಯನ್ನು ಕುಗ್ಗಿಸುತ್ತದೆ. ಆಧ್ಯಾತ್ಮವು ಸಮಾಜವಾದ ಮತ್ತು ಬಂಡವಾಳಶಾಹಿಗಳ ನಡುವಿನ ಸೇತುವೆಯಾಗಿದೆ. ಆಧ್ಯಾತ್ಮಿಕತೆಯು ಬಂಡವಾಳಶಾಹಿಗಳಿಗೆ ಸೇವೆ ಮಾಡುವ ಹೃದಯವನ್ನು ನೀಡುತ್ತದೆ ಮತ್ತು ಸಮಾಜವಾದಿಗಳಿಗೆ ಹೊಸತನ್ನು ಸೃಷ್ಟಿಸುವ ಹುರುಪನ್ನು ನೀಡುತ್ತದೆ.


ಗುರುದೇವರ ಅಧಿಕೃತ ಬ್ಲಾಗನಲ್ಲಿ ಈ ಲೇಖನಗಳನ್ನು ಓದಿ

1. 5 Skills you must develop to Succeed in life and business : CLICK HERE TO READ

2. 7 Tips to Tap your Creative Genius : CLICK HERE TO READ





ಕಾಮೆಂಟ್‌ಗಳು