ಪ್ರಶ್ನೆ 66. ಶಾಶ್ವತವಾಗಿ ನಗುವನ್ನು ಉಳಿಸಿಕೊಳ್ಳುವ ರಹಸ್ಯವೇನು?

 



ಪೂರ್ಣವಾಗಿ ಜ್ಞಾನೋದಯವಾದ ವ್ಯಕ್ತಿಗೆ ಯಾವುದೇ ಅಗತ್ಯಗಳಾಗಲಿ ಜವಾಬ್ದಾರಿಗಳಾಗಲೀ ಇರುವುದಿಲ್ಲ. ಹಾಗೆಯೇ ಜಡತೆಯಿಂದ ಕೂಡಿರುವ ವ್ಯಕ್ತಿಗೆ ಸಹ ಯಾವುದೇ ಅಗತ್ಯಗಳು ಮತ್ತು ಜವಾಬ್ದಾರಿಗಳಿರುವುದಿಲ್ಲ. ಈ ಎರಡರ ನಡುವೆ ಇರುವ ಪ್ರತಿಯೊಬ್ಬರಿಗೂ ಕೆಲವು ಅಗತ್ಯಗಳು ಮತ್ತು ಜವಾಬ್ದಾರಿಗಳಿರುತ್ತವೆ.

ನೀವು ನಿಮ್ಮ ಎಲ್ಲಾ ಜವಾಬ್ದಾರಿಗಳನ್ನು ಮತ್ತು ಅಗತ್ಯಗಳನ್ನು ಪಟ್ಟಿ ಮಾಡಿ ಗಮನಿಸಿ. ನಿಮ್ಮ ಅಗತ್ಯತೆಗಳು ನಿಮ್ಮ ಜವಾಬ್ದಾರಿಗಳಿಗಿಂತ ಹೆಚ್ಚಿನದಾಗಿದೆ ಎಂದಾದರೆ, ಅದು ಜೀವನದಲ್ಲಿ ದುಃಖಕ್ಕೆ ಕಾರಣವಾಗುತ್ತದೆ.

ಆದರೆ ನೀವು ಹೆಚ್ಚಿನ ಜವಾಬ್ದಾರಿಯನ್ನು ತೆಗೆದುಕೊಂಡರೆ ಮತ್ತು ಕಡಿಮೆ ಅಗತ್ಯಗಳನ್ನು ಹೊಂದಿದ್ದರೆ, ನೀವು ಸಂತೋಷವಾಗಿರುತ್ತೀರಿ. ಇದೇ ರಹಸ್ಯ.

ನಿಮ್ಮ ಅಗತ್ಯತೆಗಳು ಹೆಚ್ಚಾಗಿದ್ದು ನೀವು ಅದರ ಮೇಲೆ ಮಾತ್ರ ಗಮನಹರಿಸುತ್ತ, ಅದರ ಬಗ್ಗೆ ಜವಾಬ್ದಾರಿಯನ್ನು ತೆಗೆದುಕೊಳ್ಳದೇ ಇದ್ದರೆ, ನೀವು ಸದಾ ಅತೃಪ್ತರಾಗಿ ಗೊಣಗಾಡುತ್ತಲೇ ಇರುತ್ತೀರಿ.

ನೀವು ಜವಾಬ್ದಾರಿಯನ್ನು ಹೆಚ್ಚಿಸಿಕೊಂಡು ಅಗತ್ಯಗಳು ಕಡಿಮೆಯಾದಂತೆಲ್ಲ - ಉತ್ಸಾಹ, ಸಂತೋಷ, ಸೃಜನಶೀಲತೆ ಇತ್ಯಾದಿಗಳೆಲ್ಲವೂ ನಿಮ್ಮ ಬಳಿಗೆ ಸಹಜವಾಗಿಯೇ ಬರುತ್ತದೆ.

ಈಗ ಒಂದು ಪ್ರಶ್ನೆ ಉದ್ಭವಿಸಬಹುದು -  ಹಸಿವಾಗಿದ್ದರೆ ಏನು ಮಾಡಬೇಕು? ಹಸಿವು ಸಹ ಅಗತ್ಯವೇ. ನಮಗೆ ಹಸಿವಾದಾಗ ಆಹಾರವನ್ನು ಸೇವಿಸಬೇಕು. ಬಾಯಾರಿದರೆ, ನೀರು ಕುಡಿಯಬೇಕು. ಇವೆಲ್ಲ ದೈಹಿಕ ಅಗತ್ಯಗಳು. ಅದನ್ನು ಪೂರೈಸಬೇಕಾಗಿದೆ.

ನಾವು ನಿಮಗೆ ಹೇಳುವುದೇನೆಂದರೆ, ನಿಮ್ಮ ದೇಹವು ಈ ಭೂಮಿಗೆ ಸೇರಿದ್ದಾಗಿದೆ ಮತ್ತು ಭೂಮಿಯೇ ಅದರ ಕಾಳಜಿವಹಿಸುತ್ತದೆ. ನೀವು ದೈವಕ್ಕೆ ಸೇರಿದವರಾಗಿದ್ದೀರಿ ಮತ್ತು ದೈವವು ನಿಮ್ಮನ್ನು ಸದಾ ನೋಡಿಕೊಳ್ಳುತ್ತದೆ.

ವಾಸ್ತವವಾಗಿ, ದೈವವೇ ನಿಮ್ಮನ್ನು ಸಲಹುತ್ತಿರುವುದು.

ನಿಮ್ಮ ದೇಹದಿಂದ ನೀವು ಪ್ರತ್ಯೇಕ ಎಂಬುದನ್ನು ಗಮನಿಸಿ. ಈ ವ್ಯತ್ಯಾಸವನ್ನು ನೀವು ಗುರುತಿಸಿದ ತಕ್ಷಣ, ನೀವು ದೈವಕ್ಕೆ ಸೇರಿದವರು ಎಂದು ತಿಳಿಯುವಿರಿ, ಆಗ ನಗು ನಿಮ್ಮ ಶಾಶ್ವತ ಲಕ್ಷಣವಾಗುತ್ತದೆ.

ಗುರುದೇವರ ಅಧಿಕೃತ ಬ್ಲಾಗನಲ್ಲಿ ಈ ಲೇಖನಗಳನ್ನು ಓದಿ

Mysteries are to be lived, not understood! (MIND BOGGLING ARTICLE) : CLICK HERE TO READ




ಸೋಷಿಯಲ್ ಮೀಡಿಯಾದಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರನ್ನು ಅನುಸರಿಸಿ:

Instagram : 
https://www.instagram.com/srisriravishankar
Twitter : http://twitter.com/SriSri

ಕಾಮೆಂಟ್‌ಗಳು