ಪ್ರಶ್ನೆ 65: ನಾವು ನಮ್ರತೆ ಮತ್ತು ಆತ್ಮವಿಶ್ವಾಸವನ್ನು ಒಂದೇ ಸಮಯದಲ್ಲಿ ಹೇಗೆ ಹೊಂದಬಹುದು?

 


ಗುರುದೇವ್ ಶ್ರೀ ಶ್ರೀ ರವಿಶಂಕರ್:

ಮಾನವ ವ್ಯಕ್ತಿತ್ವದ ಅಪರೂಪದ ಸಂಯೋಜನೆಯೆಂದರೆ ಆತ್ಮವಿಶ್ವಾಸ ಮತ್ತು ನಮ್ರತೆಯು ಒಟ್ಟಿಗೆ ಅಸ್ತಿತ್ವದಲ್ಲಿರುವುದು. ಸಹಜವಾಗಿ ಆತ್ಮವಿಶ್ವಾಸ ಹೆಚ್ಚಿರುವವರು ವಿನಮ್ರರಾಗಿರುವುದಿಲ್ಲ ಹಾಗೂ ನಮ್ರತೆ ಹೊಂದಿರುವ ಜನರು ಆತ್ಮವಿಶ್ವಾಸವನ್ನು ಹೊಂದಿರುವುದಿಲ್ಲ. ನಮ್ರತೆಯೊಂದಿಗೆ ಬೆರೆತ ಆತ್ಮವಿಶ್ವಾಸವು ಎಲ್ಲರ ಮೆಚ್ಚುಗೆಯನ್ನು ಪಡೆಯುತ್ತದೆ.

ಪ್ರಶ್ನೆ: ವಿನಮ್ರ ವ್ಯಕ್ತಿಯಲ್ಲಿ ಆತ್ಮವಿಶ್ವಾಸ ಮತ್ತು ಆತ್ಮವಿಶ್ವಾಸ ಇರುವವರಲ್ಲಿ ನಮ್ರತೆಯನ್ನು ಹೇಗೆ ಬೆಳೆಸಿಕೊಳ್ಳಬಹುದು?

ಗುರುದೇವ್ ಶ್ರೀ ಶ್ರೀ ರವಿಶಂಕರ್:

1. ವಿಶಾಲ ದೃಷ್ಟಿಕೋನದಿಂದ, ಕಾಲ ಮತ್ತು ಸ್ಥಳಕ್ಕೆ ಅತೀತವಾಗಿ ಜೀವನವನ್ನು ನೋಡಿದಾಗ, ನಿಮ್ಮ ಜೀವನವು ಏನೂ ಅಲ್ಲ ಎಂದು ನೀವು ತಿಳಿದುಕೊಳ್ಳುತ್ತೀರಿ.

2. ನೀವು ವಿನಮ್ರರಾಗಿರುವಾಗ, ನೀವು ಅನನ್ಯ ಮತ್ತು ದೈವಕ್ಕೆ ಪ್ರಿಯರಾಗಿದ್ದೀರಿ ಎಂಬುದನ್ನು ತಿಳಿಯಬೇಕು, ಅದು ಆತ್ಮವಿಶ್ವಾಸವನ್ನು ತರುತ್ತದೆ ಮತ್ತು ನೀವು ಅತ್ಯಲ್ಪ ಎಂದು ತಿಳಿದಾಗ ಅದು ನಮ್ರತೆಯನ್ನು ತರುತ್ತದೆ.

3. ನೀವು ಗುರುವನ್ನು ಹೊಂದಿರುವಾಗ, ಅಹಂಕಾರದಿಂದಿರಲು ಸಾಧ್ಯವಿಲ್ಲ. ಗುರುವು ನಿಮಗೆ ಆತ್ಮವಿಶ್ವಾಸವನ್ನು ನೀಡುತ್ತಾರೆ ಮತ್ತು ನಿಮ್ಮಲ್ಲಿ ನಮ್ರತೆಯನ್ನು ಹೆಚ್ಚಿಸುತ್ತಾರೆ. ನಮ್ರತೆಯಿಂದ ಬರುವ ದೌರ್ಬಲ್ಯ ಮತ್ತು ಆತ್ಮವಿಶ್ವಾಸ ತರುವ ದುರಹಂಕಾರವನ್ನು ನಿಮ್ಮಿಂದ ತೆಗೆದುಹಾಕಲಾಗುತ್ತದೆ. ಆಗ ನಿಮ್ಮಲ್ಲಿ ಆತ್ಮವಿಶ್ವಾಸ ಮತ್ತು ನಮ್ರತೆ ಮಾತ್ರ ಉಳಿಯುತ್ತದೆ!

ಗುರುದೇವರ ಅಧಿಕೃತ ಬ್ಲಾಗನಲ್ಲಿ ಈ ಲೇಖನಗಳನ್ನು ಓದಿ

Formula For Happiness - Blog by Gurudev: CLICK HERE TO READ





ಸೋಷಿಯಲ್ ಮೀಡಿಯಾದಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರನ್ನು ಅನುಸರಿಸಿ:


ಕಾಮೆಂಟ್‌ಗಳು