ನಾವು ಇಟ್ಟುಕೊಳ್ಳುವ ಗುರಿಯನ್ನು ಕಾಲಮಿತಿಗೆ ಹೊಂದಿಸುವುದರಿಂದ ಜೀವ ಶಕ್ತಿಗೆ ನಿರ್ದೇಶನ ಸಿಗುತ್ತದೆ. ಇದಕ್ಕಾಗಿ ಕಲ್ಪನಾ ಶಕ್ತಿ ಇರುವುದು ಅತ್ಯಗತ್ಯ. ಹೆಚ್ಚಿನ ಜನರ ಕಲ್ಪನೆ ಚಿಕ್ಕದಾಗಿರುತ್ತದೆ ಮತ್ತು ಅವರು ಅದರಲ್ಲೆ ಸಿಲುಕಿಕೊಂಡಿರುತ್ತಾರೆ. ಅದು ಹತಾಶೆಯನ್ನು ಉಂಟುಮಾಡುತ್ತದೆ. ಆದರೆ ನೀವು ಭಕ್ತರಾಗಿದ್ದರೆ, "ನಿನ್ನ ಚಿತ್ತದಂತೆ ಎಲ್ಲವೂ ನೆರವೇರಲಿ" ಎಂದು ಹೇಳಿ ಗುರಿಯತ್ತ ಲಘುವಾಗಿ ಹೆಜ್ಜೆ ಹಾಕುತ್ತೀರಿ. ನೀವು ಅದನ್ನು ಸುಲಭವಾಗಿ ತೆಗೆದುಕೊಳ್ಳುತ್ತೀರಿ. ಇಲ್ಲಿ ನಾವು ಒಂದು ವ್ಯತ್ಯಾಸವನ್ನು ಗಮನಿಸಬೇಕು. ಕೆಲವರು, "ದೇವರು ಎಲ್ಲವನ್ನೂ ಮಾಡಲಿ" ಎಂದು ಹೇಳಿ ಶರಣಾಗುತ್ತಾರೆ ಮತ್ತು ಇತರರು "ನಾನು ಜವಾಬ್ದಾರನಾಗಿರಬೇಕು" ಎಂದು ಹೇಳುತ್ತಾರೆ.
ಶರಣಾಗತಿ ಎಂದರೆ "ನಿನ್ನ ಚಿತ್ತದಂತೆ ಎಲ್ಲವೂ ನೆರವೇರಲಿ" ಎಂದು ಹೇಳುವುದು, ಮತ್ತು ನಮಗಾಗಿ "ನಿನ್ನ ಚಿತ್ತ"ವೇನೆಂದರೆ ಇಡೀ ಪ್ರಪಂಚದ ಜವಾಬ್ದಾರಿಯನ್ನು ತೆಗೆದುಕೊಳ್ಳುವುದು ಎಂದು ತಿಳಿಯುವುದು.
ಇದು ವಿರೋಧವಾದ ಪ್ರಕೃತಿಯಂತೆ ಕಂಡು ಸಂಘರ್ಷವನ್ನು ತರುವಂತೆ ತೋರಿದರೂ ವಾಸ್ತವವಾಗಿ ಅವು ಒಂದೇ ನಾಣ್ಯದ ಎರಡು ಬದಿಗಳಾಗಿವೆ. ನೀವು ಎಷ್ಟು ಹೆಚ್ಚು ಶರಣಾಗುತ್ತೀರೋ ಅಷ್ಟು ಜವಾಬ್ದಾರಿಯನ್ನು ಸಹ ತೆಗೆದುಕೊಳ್ಳುತ್ತೀರಿ. ಬೇಜವಾಬ್ದಾರಿಯಿಂದ ಕೂಡಿದವನು ಶರಣಾಗಲು ಸಾಧ್ಯವಿಲ್ಲ. ಯಾರಾದರೂ ಏಕೆ ಬೇಜವಾಬ್ದಾರರಾಗುತ್ತಾರೆ? ಅವರು ಇಲ್ಲಾ ಸೋಮಾರಿಯಾಗಿರುತ್ತಾರೆ ಅಥವಾ ಭಯಭೀತರಾಗಿರುತ್ತಾರೆ ಅಥವಾ ಎರಡೂ ಇರಬಹುದು. ನೀವು ಸೋಮಾರಿಯಾಗಿದ್ದರೆ ಅಥವಾ ಭಯಭೀತರಾಗಿದ್ದರೆ, ಪ್ರೀತಿಯನ್ನು ಅನುಭವಿಸಲು ಸಾಧ್ಯವಿಲ್ಲ.
ಸಂಪೂರ್ಣ ಜವಾಬ್ದಾರಿ ಎಂದರೆ ಸಂಪೂರ್ಣ ಶರಣಾಗತಿ. ಇದು ಅರ್ಥಮಾಡಿಕೊಳ್ಳಲು ಸ್ವಲ್ಪ ಕಷ್ಟ, ಆದರೆ ಇದೇ ಸತ್ಯ. ಜನರು ಸಾಮಾನ್ಯವಾಗಿ ‘ನಾನು ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ’ ಎನ್ನುತ್ತಾರೆ ಇಲ್ಲಾ ‘ಶರಣಾಗುತ್ತೇನೆ’ ಎಂದು ಹೇಳುತ್ತಾರೆ. ಆದರೆ ನಾವು ಹೇಳುತ್ತೇವೆ ಅವೆರಡೂ ಜೊತೆಯಾಗಿಯೇ ಸಾಗುತ್ತದೆ ಎಂದು. ನೀವು ಜ್ಞಾನಕ್ಕೆ ಶರಣಾಗಿದ್ದೀರಿ ಎಂದು ಭಾವಿಸೋಣ, ಇದರರ್ಥ ನೀವು ಅದನ್ನು ಇತರರೊಂದಿಗೆ ಹಂಚಿಕೊಳ್ಳಲು ಬದ್ಧರಾಗಿದ್ದೀರಿ ಎಂದು. ಆಗ ಅದು ಪ್ರವರ್ಧಮಾನಕ್ಕೆ ಬರುವುದನ್ನು ನೋಡಲು ನೀವು ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೀರಿ.
ಪ್ರಶ್ನೆ: ಕರ್ತೃತ್ವದಿಂದ ಗೊಂದಲವು ಉಂಟಾಗುತ್ತದೆ ಅಲ್ಲವೇ?
ಉತ್ತರ: ನೀವು ಜವಾಬ್ದಾರಿಯನ್ನು ತೆಗೆದುಕೊಂಡು ಮುಂದುವರಿಯುವಾಗ ಅಡಚಣೆಗಳು ಬಂದರೆ "ಶರಣಾಗತಿ"ಯನ್ನು ನೆನಪಿಸಿಕೊಳ್ಳಿ. ಅದು ನಿಮಗೆ ಮುಂದುವರಿಯಲು ಶಕ್ತಿಯನ್ನು ನೀಡುತ್ತದೆ. ಇದು ನಿಮ್ಮನ್ನು ಕರ್ತೃತ್ವದ ಭಾರದಿಂದ ಬಿಡುಗಡೆ ಮಾಡುತ್ತದೆ. ವರ್ತಮಾನ ಕ್ಷಣದಲ್ಲಿ ಜೀವನದ ಕ್ರಿಯಾತ್ಮಕ ಅಭಿವ್ಯಕ್ತಿಯೇ ಜವಾಬ್ದಾರಿ. ನೀವು ನಡುಗಿದಾಗ, ಜವಾಬ್ದಾರಿಯ ಆಧಾರವಾದ ಶರಣಾಗತಿಯನ್ನು ನೆನಪು ಮಾಡಿಕೊಳ್ಳಿ.
ಜವಾಬ್ದಾರಿಯನ್ನು ತೆಗೆದುಕೊಳ್ಳುವುದು ಅಥವಾ ಕರ್ತೃತ್ವದ ಭಾವ ಇಲ್ಲದೆ ಶರಣಾಗುವುದು ಬುದ್ಧಿವಂತರ ಲಕ್ಷಣ. ಪೂರ್ಣ ಬೇಜವಾಬ್ದಾರಿತನ ನಿಮಗೆ ಅಸಾಧ್ಯ. ಸೀಮಿತ ಜವಾಬ್ದಾರಿ ನಿಮ್ಮನ್ನು ದುರ್ಬಲಗೊಳಿಸುತ್ತದೆ. ಸ್ವಲ್ಪವೇ ನೀರು ಸೂರ್ಯನಿಂದ ಆವಿಯಾಗುತ್ತದೆ ಆದರೆ ಸಾಗರ ಎಂದಿಗೂ ಒಣಗುವುದಿಲ್ಲ. ಸೀಮಿತ ಜವಾಬ್ದಾರಿ ನಿಮ್ಮನ್ನು ಆಯಾಸಗೊಳಿಸುತ್ತದೆ. ಅನಿಯಮಿತ ಜವಾಬ್ದಾರಿ ನಿಮಗೆ ಅಧಿಕಾರ ನೀಡುತ್ತದೆ ಮತ್ತು ನಿಮ್ಮನ್ನು ಸಂತೋಷಗೊಳಿಸುತ್ತದೆ.
ಗುರುದೇವರ ಅಧಿಕೃತ ಬ್ಲಾಗನಲ್ಲಿ ಈ ಲೇಖನಗಳನ್ನು ಓದಿ
1. Your life is not a big burden, big responsibility for the Divine : CLICK HERE TO READ
2. 10 attributes of a great leader: CLICK HERE TO READ

ಕಾಮೆಂಟ್‌ಗಳು