1. ನೀವು ಅಸೂಯೆ ಪಡುವ ವ್ಯಕ್ತಿಯು ಈ ಹಿಂದೆ ಕೆಲವು ಉತ್ತಮ ಕರ್ಮಗಳನ್ನು ಮಾಡಿದ್ದಾರೆ ಮತ್ತು ಈಗ ಅದರ ಫಲವನ್ನು ಅನುಭವಿಸುತ್ತಿದ್ದಾರೆ ಎಂದು ತಿಳಿಯಿರಿ.
2. ಪುಣ್ಯವನ್ನು ಅಥವಾ ಅರ್ಹತೆಯನ್ನು ಸಂಪಾದಿಸಲು ಅದನ್ನು ಈಗ ಸ್ಫೂರ್ತಿಯಾಗಿ ತೆಗೆದುಕೊಳ್ಳಿ.
3. ಅವರ ಬಗ್ಗೆ ಆತ್ಮೀಯ ಭಾವವನ್ನು ಬೆಳೆಸಿಕೊಳ್ಳಿ. ಅವರು ನಿಮ್ಮವರೇ ಎಂದು ಭಾವಿಸಿ ನೋಡಿ.
4. ನೀವು ಈಗಾಗಲೇ ಪಡೆದಿರುವುದರ ಬಗ್ಗೆ, ನಿಮ್ಮ ಬಳಿ ಇರುವ ಎಲ್ಲದರ ಬಗ್ಗೆ ಯೋಚಿಸಿ ಕೃತಜ್ಞರಾಗಿರಿ.
5. ಆನಂದ ಹೇಳಿದ್ದು, "ಸಂವೇದನೆಗಳನ್ನು ಗಮನಿಸಿ"
6. ಅವರೊಂದಿಗೆ ಕೈಗಳನ್ನು ಸೇರಿಸಿ ಮತ್ತು ಒಂದು ತಂಡವನ್ನು ರಚಿಸಿಕೊಳ್ಳಿ.
7. ಚಲಿಸುವ ಸಮಯದ ಪ್ರವಾಹದಲ್ಲಿ ಎಲ್ಲವೂ ನಾಶವಾಗುತ್ತವೆ ಎಂದು ಅರಿತುಕೊಳ್ಳಿ.
8. ನಿಮ್ಮಲ್ಲಿ ಈಗಾಗಲೇ ಇರುವುದರ ಬಗ್ಗೆ ಅಸೂಯೆ ಪಡುವ ಜನರ ಬಗ್ಗೆ ಯೋಚಿಸಿ.
ಸ್ಟೀಫಾನೊ ಸೇರಿಸಿದ್ದು: "ಮತ್ತು ಜನರು ನಿಮ್ಮಲ್ಲಿ ಅಸೂಯೆಪಡುವ ಯಾವುದೂ ನಿಮಗೆ ಹೇಗೂ ಸಂತೋಷವನ್ನು ತಂದಿಲ್ಲ, ಇದನ್ನು ಗಮನಿಸಿ" ಮತ್ತು "ಹೋಗಿ ಅವರನ್ನು ಕೇಳಿ 'ನೀವು ಸಂತೋಷವಾಗಿದ್ದೀರಾ?' " ಎಂದು
ಕ್ಯಾರೋಲಿನ್: "ಅವರು 'ಹೌದು?' ಎಂದು ಹೇಳಿದರೆ?" (ನಗು!).
ಉತ್ತರ "ಹೌದು" ಎಂದಾದರೆ ಅವರು ಆರ್ಟ್ ಆಫ್ ಲಿವಿಂಗ್ ನಲ್ಲಿರಬೇಕು" (ನಗು!)
ಆನಂದ: “ಇತರರು ನಿಮ್ಮ ಬಗ್ಗೆ ಅಸೂಯೆ ಪಟ್ಟರೆ ಏನು ಮಾಡಬೇಕು?"
1. ಅತಿಶಯೋಕ್ತಿಗಳಲ್ಲಿ ಅವರನ್ನು ಪ್ರಶಂಸೆ ಮಾಡಿರಿ.
2. ನಿಮ್ಮ ಒಳ್ಳೆಯ ಕಾರ್ಯಗಳಿಂದ ಅವರಲ್ಲಿ ಆತ್ಮೀಯ ಭಾವ ಬರುವಂತೆ ಮಾಡಿರಿ.
3. ಅವರ ಭಾವನೆಗಳು ತಾತ್ಕಾಲಿಕವೆಂದು ತಿಳಿಯಿರಿ.
4. ಅವರ ಅಸೂಯೆಯನ್ನು ಗುರುತಿಸದಿರುವುದು ಉತ್ತಮ. ನೀವು ಭಾವನೆಯನ್ನು ವಾಸ್ತವವೆಂದು ಗುರುತಿಸಿದರೆ ಅದು ನಿಮ್ಮ ಅಜ್ಞಾನವನ್ನು ಹೆಚ್ಚಿಸುತ್ತದೆ.
5. ಎಲ್ಲಾ ಭಾವನೆಗಳು ಮೋಡಗಳಂತೆ ಹಾದುಹೋಗುತ್ತವೆ ಎಂದು ತಿಳಿಯಿರಿ.
6. ನಿಮ್ಮ ಪ್ರತಿಭೆಯನ್ನು ಅವರ ಮುಂದೆ ಅನಾವಶ್ಯಕವಾಗಿ ತೋರಿಸಿಕೊಳ್ಳಬೇಡಿ.
7. ಅವರು ಕೈಗೊಂಬೆಗಳು ಎಂದು ತಿಳಿಯಿರಿ. ಸೇಬು ಮತ್ತು ಟೊಮೆಟೊಗಳಂತೆ ಅವರು ಕೂಡ ನಾಶವಾಗುತ್ತಾರೆ - ಅದರ ಅವಧಿಯಷ್ಟೇ ದೀರ್ಘವೆಂದು ತಿಳಿಯಿರಿ (ನಗು!).
ಇದ್ಯಾವುದೂ ಕೆಲಸ ಮಾಡದಿದ್ದರೆ, ಸುಮ್ಮನೆ ಮಲಗಿ ನಿದ್ರಿಸಿ. :)
ಗುರುದೇವರ ಅಧಿಕೃತ ಬ್ಲಾಗನಲ್ಲಿ ಈ ಲೇಖನಗಳನ್ನು ಓದಿ
1. 5 Tips To Pass The Blame Game: CLICK HERE TO READ
2. Do not hesitate to ask for forgiveness: CLICK HERE TO READ
ಸೋಷಿಯಲ್ ಮೀಡಿಯಾದಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರನ್ನು ಅನುಸರಿಸಿ:
Instagram : https://www.instagram.com/srisriravishankar
Twitter : http://twitter.com/SriSriFacebook : https://www.facebook.com/SriSriRaviShankarK/
Website : http://srisri.org/
LinkedIn : https://in.linkedin.com/in/srisriravishankar

ಕಾಮೆಂಟ್‌ಗಳು