ಅಸ್ತಿತ್ವಕ್ಕೆ ಮೂರು ಹಂತಗಳಿವೆ - ಬಾಹ್ಯ ಜಗತ್ತು, ವಿಭಿನ್ನ ಶಕ್ತಿಗಳಿಂದ ಕೂಡಿದ ಸೂಕ್ಷ್ಮ ಜಗತ್ತು ಮತ್ತು ದೈವತ್ವ ಅಥವಾ ದೇವರು. ಇಲ್ಲಿ ನಡೆಸಲಾಗುವ ಎಲ್ಲಾ ಯಜ್ಞಗಳು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಯೋಜನಗಳನ್ನು ಸಾಧಿಸುವ ಗುರಿಯನ್ನು ಹೊಂದಿವೆ. ನಿಮ್ಮೊಳಗೆ ನೀವು ಆಳವಾಗಿ ಹೋದಾಗ, ಎಲ್ಲವೂ ಎಲ್ಲಿಂದ ಬಂದಿರುವುದೋ - ಆ ಮೂಲ ಸ್ಥಾನಕ್ಕೆ ಹೋದಾಗ, ನೀವು ಸರ್ವೋಚ್ಚ ಶಾಂತಿಯನ್ನು ಅನುಭವಿಸುತ್ತೀರಿ. ನೀವು ಆಳವಾದ ಧ್ಯಾನದಲ್ಲಿರುವಾಗ ಮಾತ್ರ, ಈ ಮಂತ್ರಗಳು ಪರಿಣಾಮ ಬೀರುತ್ತವೆ. ಇವುಗಳು ಅತ್ಯಂತ ಶಕ್ತಿಯುತವಾಗಿದೆ, ಸುಂದರವಾಗಿದೆ ಮತ್ತು ಸೂಕ್ಷ್ಮ ಜಗತ್ತನ್ನು ಉನ್ನತಿಗೊಳಿಸುತ್ತವೆ. ಇದರ ಒಂದು ಭಾಗವಾಗಿರುವುದು ಮತ್ತು ಇದರಲ್ಲಿ ಭಾಗವಹಿಸುತ್ತಿರುವುದು ನಮ್ಮೆಲ್ಲರ ಅದೃಷ್ಟವಾಗಿದೆ.
ಇಲ್ಲಿ ಎಲ್ಲಾ ವೇದಗಳ ಪಂಡಿತರಿದ್ದಾರೆ ಮತ್ತು ಅವರು ವೇದಮಂತ್ರಗಳನ್ನು ಪಠಿಸುತ್ತಾರೆ. ಸಾವಿರಾರು ವರ್ಷಗಳಿಂದ ಇದು ನಡೆಯುತ್ತಿದೆ. ಇಡೀ ಜಗತ್ತಿಗೆ ಒಳಿತಾಗಲೆಂದು ಇವುಗಳನ್ನು ಮಾಡಲಾಗುತ್ತದೆ. ಇಲ್ಲಿ ನಡೆಯುತ್ತಿರುವ ಯಜ್ಞಗಳಲ್ಲಿ ನಾವೆಲ್ಲರೂ ಒಂದೇ ದೇಹ, ಒಂದೇ ಮನಸ್ಸು ಮತ್ತು ಒಂದೇ ಚೇತನವಾಗಿ ಸಂಪೂರ್ಣವಾಗಿ ಮುಳುಗಿ ಒಟ್ಟುಗೂಡಿದ್ದೇವೆ. ಮಂತ್ರಗಳ ಅರ್ಥವು ನಮಗೆ ತಿಳಿದಿಲ್ಲದಿದ್ದರೂ ಸಹ, ಅದು ನಮ್ಮ ಜೀವನದ ಸೂಕ್ಷ್ಮ ಮಟ್ಟಗಳಲ್ಲಿ ಮತ್ತು ಇಡೀ ಮಾನವಕುಲಕ್ಕೆ ಏನಾದರೂ ಒಳ್ಳೆಯದನ್ನು ಮಾಡುತ್ತಿವೆ ಎಂಬುದು ನಮಗೆ ಖಂಡಿತವಾಗಿ ತಿಳಿದಿದೆ.
ಬುದ್ಧಿಗೆ ಇದು ಗೋಚರವಾಗದೇ ಇರಬಹುದು ಆದರೆ ಸೂಕ್ಷ್ಮ ದೇಹವು ಇದರ ಆಳವನ್ನು ಅರ್ಥಮಾಡಿಕೊಳ್ಳುತ್ತಿದೆ ಮತ್ತು ಉತ್ಪತ್ತಿಯಾಗುವ ಕಂಪನಗಳು ಅಸ್ತಿತ್ವದ ಎಲ್ಲಾ ಸೂಕ್ಷ್ಮ ಪದರಗಳಿಗೆ ಒಳ್ಳೆಯದನ್ನು ಮಾಡುತ್ತಿದೆ. ಈ ಶಕ್ತಿಯು ಆಶೀರ್ವಾದವನ್ನು ಕೊಡಮಾಡುತ್ತದೆ, ಇಡೀ ಮಾನವಕುಲಕ್ಕೆ ಒಳಿತು ಮಾಡುತ್ತದೆ, ನಮ್ಮ ಕೆಟ್ಟ ಕರ್ಮಗಳನ್ನು ತೊಳೆದು ಹಾಕುತ್ತದೆ, ಜಗತ್ತಿನಲ್ಲಿ ಸಾಮರಸ್ಯವನ್ನು ಉತ್ತೇಜಿಸುತ್ತದೆ ಮತ್ತು ಆಸೆಗಳನ್ನು ಈಡೇರಿಸುತ್ತದೆ. ಸೂಕ್ಷ್ಮ ಜಗತ್ತು ಶಕ್ತಿಯುತವಾದಾಗ ಆಸೆಗಳು ಈಡೇರುತ್ತವೆ. ಇವುಗಳು ನಮ್ಮನ್ನು ಆತ್ಮಸಾಕ್ಷಾತ್ಕಾರಕ್ಕೆ ಹತ್ತಿರ ತರುತ್ತವೆ ಮತ್ತು ಲೌಕಿಕ ಜಗತ್ತಿನಲ್ಲಿ ಯಶಸ್ಸನ್ನು ಸಹ ದಯಪಾಲಿಸುತ್ತದೆ.
ಒಂದು ದೇಹವಾಗಿ, ಒಂದೇ ಮನಸ್ಸಾಗಿ, ಪರಮ ಸತ್ಯದಲ್ಲಿ ಸ್ಥಾಪಿತವಾಗಿ, ನಿಮ್ಮ ಲೌಕಿಕ ಕರ್ತವ್ಯಗಳನ್ನು ಪೂರೈಸುತ್ತಾ ಶಾಂತಿಯ ಆಳದಲ್ಲಿ ವಿಶ್ರಾಂತಿ ಪಡೆಯಿರಿ. ಎಲ್ಲವೂ ಚೆನ್ನಾಗಿ ನಡೆಯುತ್ತಿದೆ, ಎಲ್ಲವೂ ನಿಮಗಾಗಿ ಮಾಡಲಾಗುತ್ತಿದೆ ಎಂಬ ಭಾವನೆಯೊಂದಿಗೆ ಈ ಪ್ರೀತಿ ಮತ್ತು ಭಕ್ತಿಯಲ್ಲಿ ಮುಳುಗಿರಿ. ಹೇಗೆ ಜೋಳವು ಸ್ವಲ್ಪ ಬೆಚ್ಚಗಾದಾಗ, ಪಾಪ್-ಕಾರ್ನ್ ಆಗುತ್ತದೆಯೋ, ಅದೇ ರೀತಿಯಲ್ಲಿ, ದೈವತ್ವವದಿಂದ ಕೂಡಿದ ಪ್ರಜ್ಞೆಯು ಮಂತ್ರಗಳ ಪಠಣದಿಂದ ಅರಳುತ್ತದೆ ಮತ್ತು ಪ್ರಕಟವಾಗುತ್ತದೆ. ಪ್ರಜ್ಞೆ ಅರಳಲು ಅವಕಾಶ ನೀಡುವ ಸುಂದರ ಸಂದರ್ಭ ಇದು. ಓಂ ಶಾಂತಿ! (ಎಲ್ಲೆಡೆ ಶಾಂತಿ ಇರಲಿ).
ಗುರುದೇವರ ಅಧಿಕೃತ ಬ್ಲಾಗನಲ್ಲಿ ಈ ಲೇಖನಗಳನ್ನು ಓದಿ
1. Navratri is the celebration of the spirit : CLICK HERE TO READ
2. The festival of Navratri is a time for self-referral and getting back to the Source : CLICK HERE TO READ
3. Significance of Devi Kavacham (Navratri Special Chant) : CLICK HERE TO READ
ಸೋಷಿಯಲ್ ಮೀಡಿಯಾದಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರನ್ನು ಅನುಸರಿಸಿ:

ಕಾಮೆಂಟ್‌ಗಳು