ಪ್ರಶ್ನೆ 59: ನಾವೇ ಆಕಾಶ ತತ್ತ್ವ ಅಥವಾ ಆಕಾಶದ ಒಂದು ಭಾಗವಾಗಿದ್ದರೆ, ಕೆಲವು ಜಾಗದಲ್ಲಿ ನಾವು ಹಾಯಾಗಿರುತ್ತೇವೆ ಮತ್ತು ಬೇರೆ ಸ್ಥಳಗಳಲ್ಲಿ ಅನಾನುಕೂಲತೆಯನ್ನು ಅನುಭವಿಸುತ್ತೇವೆ ಏಕೆ?

 


ಗುರುದೇವ್ ಶ್ರೀ ಶ್ರೀ ರವಿಶಂಕರ್:

ಅದು ಅಜ್ಞಾನದಿಂದಾಗಿ. ಅಥವಾ ನಿಮ್ಮ ದೇಹದ ರೀತಿ ಮತ್ತು ಅದು ಹೊರಹಾಕುವ ಕಂಪನಗಳಿಂದಾಗಿ ಆಗಿರಬಹುದು. ನೀವು ಸೀಮಿತ ಕಂಪನಗಳನ್ನು ಹೊಂದಿರಬಹುದು ಅಥವಾ ನೀವು ಆರಾಮವಾಗಿರಲು ಮತ್ತು ಎಲ್ಲಾ ರೀತಿಯ ಜನರೊಂದಿಗೆ ನಿರಾಳವಾಗಿರಲು ನಿಮಗೆ ಸಾಧ್ಯವಾಗದೆ ಇರಬಹುದು. ಅದಕ್ಕಾಗಿ ನಿಮ್ಮಮನಸ್ಸು ಕೇಂದ್ರೀಕೃತವಾಗಿಲ್ಲದೇ ಇರಬಹುದು. 

ನೀವು ಸಂಪೂರ್ಣವಾಗಿ ಕೇಂದ್ರೀಕೃತವಾಗಿದ್ದರೆ, ಆಗ ಸಂಪೂರ್ಣ 360 ಡಿಗ್ರಿ ವ್ಯಾಪ್ತಿಯ ಕಂಪನಗಳೊಂದಿಗೆ (ಎಲ್ಲಾ ರೀತಿಯ ಜನರೊಂದಿಗೆ) ನೀವು ಆರಾಮವಾಗಿರುತ್ತೀರಿ, ಏಕೆಂದರೆ ವೃತ್ತದಂತೆಯೇ, ಪ್ರತಿಯೊಂದು ಬಿಂದುವು ಕೇಂದ್ರದಿಂದ ಸಮಾನವಾಗಿರುತ್ತದೆ. ಆದರೆ ನೀವು ಈ ವಲಯದ ಕೇಂದ್ರದಲ್ಲಿರದೆ ಬೇರೆ ಸ್ವರಮೇಳದಲ್ಲಿದ್ದರೆ, ನೀವು ಎಲ್ಲದರಿಂದಲೂ ಸಮನಾಗಿರುವುದಿಲ್ಲ. ಆದ್ದರಿಂದ ನೀವು ಪ್ರತಿ ಕಂಪನದೊಂದಿಗೆ ಆರಾಮದಾಯಕವಾಗಿರುವುದಿಲ್ಲ.

ಗುರುದೇವರ ಅಧಿಕೃತ ಬ್ಲಾಗನಲ್ಲಿ ಈ ಲೇಖನಗಳನ್ನು ಓದಿ

1. Keep your mind open to all possibilities! : CLICK HERE TO READ

2. Principles of the Universe : CLICK HERE TO READ

3. You are vast sky of love, beauty and charm : CLICK HERE TO READ



ಸೋಷಿಯಲ್ ಮೀಡಿಯಾದಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರನ್ನು ಅನುಸರಿಸಿ:

ಕಾಮೆಂಟ್‌ಗಳು