ಅಜ್ಞಾನಿಗಳ ಪ್ರೀತಿ ಹಾನಿಕಾರಕವಾಗಬಹುದು ಆದರೆ ಜ್ಞಾನೋದಯವಾದ ವ್ಯಕ್ತಿಯ ಕೋಪವೂ ಕೂಡ ನಮಗೆ ಹಾನಿಕಾರಕವಲ್ಲ. ಅದರಿಂದ ಒಳ್ಳೆಯದು ಮಾತ್ರವೇ ಆಗುತ್ತದೆ!
ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿರುವ ಶಾಲೆ ಇದಕ್ಕೆ ಉದಾಹರಣೆಯಾಗಿದೆ. ನಮ್ಮ ಶಾಲೆಯಲ್ಲಿ 250 ಮಕ್ಕಳು ದಾಖಲಾಗಿದ್ದಾರೆ ಆದರೆ ಯಾವುದೇ ದಿನ ಅದರಲ್ಲಿ 200 ಮಂದಿ ಮಾತ್ರ ತರಗತಿಗೆ ಬರುತ್ತಾರೆ. ಏಕೆಂದರೆ ಆ ಮಿಕ್ಕ ಐವತ್ತು ಮಕ್ಕಳು ಅವರ ಮನೆಯಲ್ಲಿ, "ಅಮ್ಮ, ನಾನು ಶಾಲೆಗೆ ಹೋಗುವುದಿಲ್ಲ" ಎಂದು ಅಳುತ್ತಿರುತ್ತಾರೆ.
ಆಗ ತಾಯಿಯು "ಓ, ಕಂದ, ಅಳಬೇಡ... ನಿನ್ನಿಷ್ಟ" ಎಂದು ಹೇಳುತ್ತಾಳೆ. "ಜಗತ್ತಿನಲ್ಲಿ ಬೇರೇ ಯಾವುದೇ ಮಗು ನನ್ನ ಮಗುವಿನಂತೆ ಇಲ್ಲ" ಎಂದು ಬಹಳವೇ ಮುದ್ದಿನಿಂದ ತನ್ನ ಮಗುವಿಗೆ ನೋವಾಗಬಾರದು ಎಂದು ಅದರ ಮಾತನ್ನು ಕೇಳಲು ಪ್ರಾರಂಭಿಸುತ್ತಾಳೆ. ಆಕೆ ಶಿಕ್ಷಕರ ದೃಷ್ಟಿಕೋನವನ್ನು ನೋಡುವುದಿಲ್ಲ, ಬದಲಿಗೆ ಶಿಕ್ಷಕರನ್ನೇ "ನೀವು ನನ್ನ ಮಗುವಿಗೆ ಸರಿಯಾಗಿ ಏಕೆ ಕಲಿಸುತ್ತಿಲ್ಲ? ಅವನು ತುಂಬಾ ಮುಗ್ಧ" ಎಂದು ಕೇಳುತ್ತಾಳೆ. ಅದರಿಂದ ಏನಾಗುತ್ತದೆ - ಮಗು ಹಾಳಾಗುತ್ತದೆ. ತಾಯಿಯ ಅಜ್ಞಾನದ ಪ್ರೀತಿ ಮಗುವನ್ನು ಹಾಳು ಮಾಡಿತು. ಆ ಮಗು ಎಂದಿಗೂ ವರ್ಣಮಾಲೆಯನ್ನು ಕಲಿಯುವುದಿಲ್ಲ, ಓದಲು ಅಥವಾ ಬರೆಯಲು ಕಲಿಯುವುದಿಲ್ಲ, ಆದರೆ ತಾಯಿ ಮಾತ್ರ "ಓಹ್, ಪರವಾಗಿಲ್ಲ, ನೋಡಿಕೊಳ್ಳಲು ಕುರಿಗಳಿವೆ ಮತ್ತು ಉಳಲು ನೆಲವಿದೆ" ಎಂದುಕೊಂಡು ಸುಮ್ಮನಿರುತ್ತಾಳೆ. ತಾಯಿಯ ಈ ಅಜ್ಞಾನದ ಪ್ರೀತಿ ಮಗುವನ್ನು ಹಾಳು ಮಾಡಿತು.
ಪ್ರಬುದ್ಧರ ಕೋಪವು ಒಂದು ಆಶೀರ್ವಾದದಂತೆ. ಪುರಾಣಗಳಲ್ಲಿ ಇದರ ಅನೇಕ ಉದಾಹರಣೆಗಳಿವೆ. ಹಿಂದೆ ಒಬ್ಬ ಗುರುವು, ಭಾರತದ ಮಧ್ಯ ಪ್ರಾಂತ್ಯದಲ್ಲಿ ಸಂಚರಿಸುತ್ತಿದ್ದರು. ಅವರ ಶಿಷ್ಯನು ಸಹ ಕೆಲವು ಗಜಗಳಷ್ಟು ಹಿಂದಿನಿಂದ ಅವರನ್ನು ಹಿಂಬಾಲಿಸುತ್ತಿದ್ದನು. ಆಗ ಕೆಲವು ಹುಡುಗರು ಅಸಭ್ಯ ಮತ್ತು ಒರಟುತನದಿಂದ ಶಿಷ್ಯನನ್ನು ನಿಂದಿಸಿ, ಕಲ್ಲುಗಳನ್ನು ಎಸೆದು ಕೀಟಲೆ ಮಾಡಲು ಪ್ರಾರಂಭಿಸಿದರು. ಹುಡುಗರು, ಗುರುವನ್ನು ಮತ್ತು ಶಿಷ್ಯನನ್ನು ಹಿಂಬಾಲಿಸುತ್ತ ಬರುತ್ತಲೇ ತಮ್ಮ ಕೀಟಲೆಯನ್ನು ಮುಂದುವರೆಸಿದರು ಮತ್ತು ಹಾಗೆ ಸಾಗುತ್ತಲೇ ಅವರು ನದಿಯ ದಂಡೆಗೆ ಬಂದರು. ನದಿಯನ್ನು ದಾಟಲು ಗುರು ಮತ್ತು ಶಿಷ್ಯ ಒಂದು ದೋಣಿಯಲ್ಲಿ ಹತ್ತಿದರೆ, ಆ ಹುಡುಗರು ಸಹ ಮತ್ತೊಂದು ದೋಣಿಯಲ್ಲಿ ಹತ್ತಿ ಅವರ ಕೀಟಲೆಯನ್ನು ಮುಂದುವರಿಸಿದರು. ನದಿಯ ಮಧ್ಯಕ್ಕೆ ಬಂದ ಹಾಗೆ ಆ ಹುಡುಗರಿದ್ದ ದೋಣಿ ಮುಳುಗಲು ಪ್ರಾರಂಭವಾಯಿತು. ಆಗ ಗುರುವು ಶಿಷ್ಯನ ಮುಖಕ್ಕೆ ಹೊಡೆದರು. ಶಿಷ್ಯನಿಗೆ ತುಂಬಾ ಆಶ್ಚರ್ಯವಾಯಿತು, ಏಕೆಂದರೆ ಹುಡುಗರ ಕಿರುಕುಳಕ್ಕೆ ಪ್ರತಿಕ್ರಿಯೆಯಾಗಿ ಅವನು ಒಂದು ಮಾತನ್ನೂ ಹೇಳಿರಲಿಲ್ಲ. ಅವನು ಅಷ್ಟು ಒಳ್ಳೆಯ ಶಿಷ್ಯನಾಗಿದ್ದನು ಮತ್ತು ಆದರೂ ಗುರುವು ಅವನಿಗೆ ಕಪಾಳಮೋಕ್ಷ ಮಾಡಿದ್ದರು!
ನಂತರ ಗುರುವು ಹೇಳಿದರು, "ಇದು ನಿನ್ನದೇ ತಪ್ಪು. ಅವರ ದೋಣಿ ಮುಳುಗಲು ನೀನೇ ಜವಾಬ್ದಾರ. ಅವರ ನಿಂದನೆಗೆ ನೀನು ಮುಂಚೆ ಪ್ರತಿಕ್ರಿಯಿಸಲಿಲ್ಲ. ನಿನ್ನಲ್ಲಿ ಅವರ ಅವಮಾನಗಳನ್ನು ಕಡಿಮೆ ಮಾಡಿಸಲು ಸಾಕಷ್ಟು ಸಹಾನುಭೂತಿ ಇಲ್ಲದಿರುವುದರಿಂದ ಈಗ ಪ್ರಕೃತಿಯೇ ಅವರನ್ನು ಕೆಟ್ಟದಾಗಿ ಶಿಕ್ಷಿಸಿದೆ."
ಗುರುವು ನೀಡಿದ ಏಟು, ಆ ಇಡೀ ಘಟನೆಯ ಕರ್ಮವನ್ನು ಹುಡುಗರ ಭವಿಷ್ಯಕ್ಕೆ ಕೊಂಡೊಯ್ಯದಂತೆ ತಡೆಯಿತು. ಹುಡುಗರ ದೋಣಿ ಮುಳುಗುವುದನ್ನು ನೋಡಿ ಶಿಷ್ಯನು ಅನುಭವಿಸಿರಬಹುದಾದ ಯಾವುದೇ ಸಣ್ಣ ಸಂತೋಷವನ್ನು ಕಿತ್ತುಕೊಳ್ಳಲು ಸಹ ಇದು ನೆರವಾಯಿತು! ಆದ್ದರಿಂದ, ಇದು ಶಿಷ್ಯನಿಗೆ ಘಟನೆಯ ಕರ್ಮವು ತಾಗದಂತೆ ಮಾಡಿತು. ಆದ್ದರಿಂದ, ಜ್ಞಾನಿಗಳ ಅಥವಾ ಜ್ಞಾನದಿಂದ ಕೂಡಿದ ಕೋಪವು ಆಶೀರ್ವಾದವೇ ಆಗಿದೆ!
ಗುರುದೇವರ ಅಧಿಕೃತ ಬ್ಲಾಗನಲ್ಲಿ ಈ ಲೇಖನಗಳನ್ನು ಓದಿ
1. 7 Things About Enlightenment Answered by Gurudev : CLICK HERE TO READ
2. Mysteries are to be lived, not understood : CLICK HERE TO READ
3. Story of Satyakama - By Sri Sri Ravi Shankar : CLICK HERE TO READ

ಕಾಮೆಂಟ್‌ಗಳು