ಪ್ರಶ್ನೆ 56. ಜೀವನದಲ್ಲಿ ನಾವು ನಿಷ್ಠೆಯನ್ನು ಕಾಪಾಡಿಕೊಳ್ಳುವುದು ಹೇಗೆ?

 


ಗುರುದೇವ್ ಶ್ರೀ ಶ್ರೀ ರವಿಶಂಕರ್:

ಪ್ರಬುದ್ಧ ಮತ್ತು ಐಕ್ಯವಾದ ಮನಸ್ಸು ಸಹಜವಾಗಿ ವರ್ತಿಸುವ ರೀತಿಯೇ ನಿಷ್ಠೆ. ನಿಷ್ಠೆಯು ಪ್ರಜ್ಞೆಯ ಸಂಪೂರ್ಣತೆಯನ್ನು ಸೂಚಿಸುತ್ತದೆ ಮತ್ತು ಮನಸ್ಸಿನ ಶ್ರೀಮಂತಿಕೆಯನ್ನು ತೋರಿಸುತ್ತದೆ. ಮನಸ್ಸು ಸಂಯೋಜಿತವಾಗಿಲ್ಲದಿದ್ದಾಗ ಅದು ಜ್ವರದಿಂದ ಕೂಡಿರುತ್ತದೆ, ವಿಶ್ವಾಸದ್ರೋಹಿ ಮತ್ತು ಅವಕಾಶವಾದಿಯಾಗಿರುತ್ತದೆ. ವಿಶ್ವಾಸದ್ರೋಹವು ಅವಕಾಶವಾದದಿಂದ ಬರುವುದು ಮತ್ತು ಅವಕಾಶವಾದವು ಒಬ್ಬರ ವಿಧಿಯ ಬಗ್ಗೆ ಇರುವ ಸಂಕುಚಿತ ದೃಷ್ಟಿಕೋನದಿಂದ ಬರುವುದು. ಆರೋಗ್ಯವನ್ನು ಕಾಪಾಡಿಕೊಳ್ಳಲು ಸಮಗ್ರತೆ ಅಥವಾ ಸಂಪೂರ್ಣತೆ ಅತ್ಯಗತ್ಯವಾಗಿದೆ.

ವಿಭಜಿತ ಮನಸ್ಸು ಕ್ರಮೇಣ ಸ್ಕಿಜೋಫ್ರೇನಿಯಾ ಮತ್ತು ಇತರ ದೈಹಿಕ ಹಾಗೂ ಮಾನಸಿಕ ಅಸ್ವಸ್ಥತೆಗಳಿಗೆ ಕಾರಣವಾಗುತ್ತದೆ. ನಿಷ್ಠೆಯು ಮನುಷ್ಯನಿಗೆ ನಿಜವಾದ ಶಕ್ತಿ ಕೊಡುತ್ತದೆ ಮತ್ತು ದೀರ್ಘಾವಧಿಯಲ್ಲಿ ಪ್ರಕೃತಿಯ ಬೆಂಬಲವನ್ನು ಹೊಂದಿರುತ್ತದೆ. ಭಯ ಮತ್ತು ಮಹತ್ವಾಕಾಂಕ್ಷೆಗಳು ನಿಷ್ಠೆಗೆ ಅಡ್ಡಿಯಾಗಿವೆ. ಲೌಕಿಕ ಮತ್ತು ಆಧ್ಯಾತ್ಮಿಕ ಎರಡೂ ಪಥದಲ್ಲಿ ನಿಷ್ಠೆ ಅಗತ್ಯ. ಯಾವುದೇ ಸಂಸ್ಥೆ, ಗುಂಪು ಅಥವಾ ಸಮಾಜವನ್ನು ರಚಿಸಲು, ನಿರ್ವಹಿಸಲು ಅಥವಾ ನಾಶಮಾಡಲು ಸಹ ನಿಷ್ಠೆ ಅಗತ್ಯವಾಗಿದೆ.

ನಿಷ್ಠೆ ಎಂದರೆ ಬದ್ಧತೆಯ ನಿರಂತರತೆಯನ್ನು ನಂಬುವುದು. ಬದ್ಧತೆಯನ್ನು ಗೌರವಿಸುವುದೇ ನಿಷ್ಠೆ. ಇದು ರಾಗ ಮತ್ತು ದ್ವೇಷಗಳ ದ್ವಂದ್ವದಿಂದ ನಿಮ್ಮನ್ನು ಬಿಡಿಸುತ್ತದೆ. ಜವಾಬ್ದಾರಿ, ಸಮರ್ಪಣೆ, ಬದ್ಧತೆ ನಿಷ್ಠೆಯ ಅಂಗಗಳಾಗಿವೆ.

ನಿಷ್ಠಾವಂತ ಮನಸ್ಸು “ಹೌದು” ಎಂಬ ಒಪ್ಪಿಗೆಯ ಭಾವನೆಯಲ್ಲಿರುವ ಮನಸ್ಸಾಗಿದೆ. ಉತ್ತರವನ್ನು ಪಡೆಯುವುದೇ ಪ್ರಶ್ನೆಯನ್ನು ಕೇಳುವ ಉದ್ದೇಶವಾಗಿರುತ್ತದೆ ಹಾಗೂ ಎಲ್ಲಾ ಉತ್ತರಗಳ ಉದ್ದೇಶವು ಒಂದೇ ... 'ಹೌದು' ಎಂಬ ಒಪ್ಪಿಗೆಯನ್ನು ಮನಸ್ಸಿನಲ್ಲಿ ಮೂಡಿಸಿಕೊಳ್ಳುವುದು. 'ಹೌದು' ಎಂಬುದು ಜ್ಞಾನದ ಅಂಗೀಕಾರವಾಗಿದೆ. 'ಹೌದು’ ಎನ್ನುವ ಮನಸ್ಸು ಶಾಂತ, ಸಮಗ್ರ ಮತ್ತು ಸಂತೋಷದಾಯಕ ಮನಸ್ಸಾಗಿದೆ. 'ಇಲ್ಲ'ವೆಂಬ ನಕಾರಾತ್ಮಕತೆ ತುಂಬಿರುವ ಮನಸ್ಸು ಉದ್ವೇಗ, ಅನುಮಾನ ಮತ್ತು ಶೋಚನೀಯವಾಗಿರುತ್ತದೆ. ನಿಷ್ಠೆಯು 'ಹೌದು' ಎನ್ನುವ ಮನಸ್ಸಿನಿಂದ ಪ್ರಾರಂಭವಾಗುತ್ತದೆ ಮತ್ತು 'ಇಲ್ಲ' ಎನ್ನುವ ಮನಸ್ಸಿನಿಂದ ನಾಶವಾಗುತ್ತದೆ. 

ಗುರುದೇವರ ಅಧಿಕೃತ ಬ್ಲಾಗನಲ್ಲಿ ಈ ಲೇಖನಗಳನ್ನು ಓದಿ

1. The 11 Most Common Relationship Questions - Complete Guide : CLICK HERE TO READ
2. There is no dearth of blessings. You get more blessings than necessary : CLICK HERE TO READ
3. The Secret of Love, Fear, Hatred & Surrender : CLICK HERE TO READ

ಸೋಷಿಯಲ್ ಮೀಡಿಯಾದಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರನ್ನು ಅನುಸರಿಸಿ:

ಕಾಮೆಂಟ್‌ಗಳು