ಪ್ರಶ್ನೆ 55. ದುಃಖದಿಂದ ಹೊರಬರುವ ದಾರಿ ಯಾವುದು?

 



ನೀವು ಅತೃಪ್ತರಾಗಿದ್ದರೆ ಇಲ್ಲ ದುಃಖವಾಗಿದ್ದರೆ ಇವುಗಳಲ್ಲಿ ಯಾವುದರ (ಅಥವಾ ಎಲ್ಲದರ) ಕೊರತೆಯಿದೆಯೇ ಎಂದು ಗಮನಿಸಿ ನೋಡಿ - ತಪಸ್ಸು, ವೈರಾಗ್ಯ, ಶರಣಾಗತಿ.

ತಪಸ್ಸು ಎಂದರೆ ಈ ಕ್ಷಣವನ್ನು ಒಪ್ಪಿಕೊಳ್ಳುವುದು, ಅದು ಹಿತಕರವಾಗಿರಲಿ ಇಲ್ಲ ಅಹಿತಕರವಾಗಿರಲಿ, ಹೇಗಿದೆಯೋ ಹಾಗೆ ಸಂಪೂರ್ಣವಾಗಿ ಸ್ವೀಕಾರ ಮಾಡುವುದು.

ವೈರಾಗ್ಯ ಎಂದರೆ ನನಗೆ ಏನೂ ಬೇಡ ಮತ್ತು ನಾನು ಏನೂ ಅಲ್ಲ ಎಂಬುವುದನ್ನು ಮನದಟ್ಟುಮಾಡಿಕೊಳ್ಳುವುದು.

ಶರಣಾಗತಿ ಎಂದರೆ "ನಾನು ಇರುವುದು ನಿಮಗಾಗಿ, ನಿಮ್ಮ ಸಂತೋಷಕ್ಕಾಗಿ" ಎನ್ನುವ ಭಾವನೆ.

ನಿಮ್ಮಲ್ಲಿ ಗೊಣಗಾಟವಿದ್ದರೆ, ದೂರುಗಳಿದ್ದರೆ ಇವುಗಳ ಕೊರತೆಯಿದೆ ಎಂದರ್ಥ. ಏಕೆಂದರೆ ಪರಿಸ್ಥಿತಿಯನ್ನು ಒಪ್ಪಿಕೊಂಡಾಗ ನೀವು ಗೊಣಗಿಕೊಳ್ಳಲಾಗುವುದಿಲ್ಲ; ನೀವು ಅದನ್ನು ತಪಸ್ಸಿನಂತೆ ಸ್ವೀಕರಿಸಿದಾಗ ನಿಮ್ಮಲ್ಲಿ ದೂರುಗಳಿರುವುದಿಲ್ಲ. "ನನಗೆ ಏನೂ ಬೇಡ" ಎಂಬ ವೈರಾಗ್ಯ ನಿಮ್ಮಲ್ಲಿದ್ದಾಗ ನಿಮಗೆ ಅಸಮಾಧಾನವಾಗುವುದಿಲ್ಲ ಮತ್ತು ನೀವು ಶರಣಾದರೆ ನಿಮ್ಮಲ್ಲಿ ಯಾವುದೇ ದೂರುಗಳು ಉಳಿಯುವುದಿಲ್ಲ.

ಈ ಮೂರೂ (ತಪಸ್ಸು, ವೈರಾಗ್ಯ ಮತ್ತು ಶರಣಾಗತಿ) ನಿಮ್ಮ ಮನಸ್ಸನ್ನು ಶುದ್ಧೀಕರಿಸುತ್ತದೆ ಮತ್ತು ಉನ್ನತವಾದ ಸಂತೋಷವನ್ನು ನಿಮಗೆ ನೀಡುತ್ತದೆ.

ಗುರುದೇವರ ಅಧಿಕೃತ ಬ್ಲಾಗನಲ್ಲಿ ಈ ಲೇಖನಗಳನ್ನು ಓದಿ


1. What are you unhappy for? What is it that you are unhappy about? : CLICK HERE TO READ.
2. True love will not bring sadness, sorrow, misery or problems : CLICK HERE TO READ.
3. The Importance of Shraddha (Faith) : CLICK HERE TO READ.






ಸೋಷಿಯಲ್ ಮೀಡಿಯಾದಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರನ್ನು ಅನುಸರಿಸಿ:


ಕಾಮೆಂಟ್‌ಗಳು