ಪ್ರಶ್ನೆ 54. ನಿಂದನೆಯನ್ನು ಹೇಗೆ ಎದುರಿಸುವುದು?

 


ಗುರುದೇವ್ ಶ್ರೀ ಶ್ರೀ ರವಿಶಂಕರ್:

ಯಾರಾದರೂ ನಿಮ್ಮನ್ನು ದೂಷಿಸಿದಾಗ, ನೀವು ಸಾಮಾನ್ಯವಾಗಿ ಏನು ಮಾಡುತ್ತೀರಿ? ಅವರನ್ನು ತಿರುಗಿ ದೂಷಿಸಿತ್ತೀರಿ  ಅಥವಾ ನಿಮ್ಮಲ್ಲಿ ಅವರ ಬಗ್ಗೆ ಪ್ರತಿರೋಧವನ್ನು ಇರಿಸಿಕೊಳ್ಳುತ್ತ್ತೀರಿ. ಯಾರಾದರೂ ನಿಮ್ಮನ್ನು ದೂಷಿಸಿದಾಗ, ವಾಸ್ತವದಲ್ಲಿ ಅವರು ನಿಮ್ಮಿಂದ ಕೆಲವು ನಕಾರಾತ್ಮಕ ಕರ್ಮಗಳನ್ನು ತೆಗೆದುಕೊಳ್ಳುತ್ತಾರೆ. ನೀವು ಇದನ್ನು ಅರ್ಥಮಾಡಿಕೊಂಡರೆ, ಮನಸ್ಸಿನಲ್ಲಿ ಇದರ ಬಗ್ಗೆ ಪ್ರತಿರೋಧವನ್ನು ಬೆಳೆಸಿಕೊಳ್ಳದಿದ್ದರೆ, "ಓಹ್, ಆ ವ್ಯಕ್ತಿಯು ನನ್ನನ್ನು ದೂಷಿಸುತ್ತಿದ್ದಾರೆ. ಒಳ್ಳೆಯದು. ನನ್ನಿಂದ ನಕಾರಾತ್ಮಕತೆ ಹೋಗುತ್ತಿದೆ" ಎಂದು ಭಾವಿಸಲು ಸಾಧ್ಯವಾಗುತ್ತದೆ. ಯಾವಾಗ ನೀವು ಪ್ರತಿರೋಧವನ್ನು ಕೈಬಿಡುತ್ತಿರೋ, ಆಗ ನಿಮ್ಮ ಕರ್ಮವು ಕಳೆಯುತ್ತದೆ. ನಾವು ಹೇಳುತ್ತಿರುವುದು ನಿಮಗೆ ತಿಳಿಯುತ್ತಿದೆಯಲ್ಲವೇ? 

ಆದ್ದರಿಂದ ಯಾರಾದರೂ ನಿಮ್ಮನ್ನು ದೂಷಿಸಿದಾಗ, ನಿಮ್ಮ ಮನಸ್ಸಿನಲ್ಲಿ ಪ್ರತಿರೋಧವನ್ನು ಉಳಿಸಿಕೊಂಡು ನಿಮ್ಮ ಪ್ರತಿಕ್ರಿಯೆಯನ್ನು ತಡೆದುಕೊಂಡಿದ್ದರೆ, ನಿಮ್ಮ ನಕಾರಾತ್ಮಕ ಕರ್ಮಗಳನ್ನು ತೆಗೆಯುವುದಕ್ಕೆ ನೀವು ಅವರಿಗೆ ಅವಕಾಶ ನೀಡುತ್ತಿಲ್ಲವೆಂದೇ. ಹೊರನೋಟಕ್ಕೆ ನೀವು ವಿರೋಧಿಸಬಹುದು, ಆದರೆ ಅಂತರಾಳದಲ್ಲಿ ನೀವು ಪ್ರತಿರೋಧಿಸದೆ, "ಓಹ್, ಒಳ್ಳೆಯದು, ನನ್ನನ್ನು ದೂಷಿಸಲು ಮತ್ತು ನನ್ನಿಂದ ಕೆಲವು ನಕಾರಾತ್ಮಕ ಕರ್ಮಗಳನ್ನು ತೆಗೆದುಹಾಕಲು ಯಾರೋ ಇದ್ದಾರೆ" ಎಂದು ನೀವು ಭಾವಿಸಿದರೆ, ತಕ್ಷಣ ಹಗುರವಾಗಿರುತ್ತೀರಿ.

ಯಾರಾದರೂ ನಿಮ್ಮನ್ನು ದೂಷಿಸಿದಾಗ ನಿಮಗೆ ಹೇಗೆ ಅನಿಸುತ್ತದೆ? ಮನಸ್ಸು ಭಾರವಾದಂತೆ ಅನಿಸುತ್ತದೆ ಅಲ್ಲವೇ? ಸಾಮಾನ್ಯವಾಗಿ, ಯಾರಾದರೂ ನಿಮ್ಮನ್ನು ದೂಷಿಸಿದಾಗ, ನಿಮಗೆ ನೋವುಂಟಾಗುತ್ತದೆ ಮತ್ತು ಅತೃಪ್ತಿ ಉಂಟಾಗುತ್ತದೆ, ನಿಮಗೆ ದುಃಖವಾಗುತ್ತದೆ. ಏಕೆಂದರೆ ನಿಮ್ಮೊಳಗೆ ದೂಷಣೆಯ ಬಗ್ಗೆ ಪ್ರತಿರೋಧವಿರುವುದರಿಂದ. ಅಷ್ಟೇ. ನೀವು ಯಾವುದನ್ನು ವಿರೋಧಿಸುತ್ತಿರೋ ಅದು ದೃಢವಾಗಿ ನಿಲ್ಲುತ್ತದೆ. ಕೇವಲ ಒಬ್ಬ ಅಜ್ಞಾನಿ ಮಾತ್ರ ಯಾರಿಗಾದರೂ "ನನ್ನನ್ನು ದೂಷಿಸಬೇಡಿ, ಏಕೆಂದರೆ ಅದು ನನಗೆ ನೋವುಂಟು ಮಾಡುತ್ತದೆ" ಎಂದು ಹೇಳಬಲ್ಲ. 

ಒಬ್ಬ ಪ್ರಬುದ್ಧ ವ್ಯಕ್ತಿಯು ಮಾತ್ರ "ನನ್ನನ್ನು ದೂಷಿಸಬೇಡಿ, ಏಕೆಂದರೆ ಅದು ನಿಮಗೆ ನೋವುಂಟು ಮಾಡಬಹುದು" ಎಂದು ಹೇಳಬಲ್ಲ. ಇದು ಒಂದು ಸುಂದರವಾದ ಅಂಶ. ನಾವು ಗಮನಿಸಬೇಕಾದ ವಿಷಯಗಳೆಂದರೆ, ನೀವು ಆಪಾದನೆಯನ್ನು ಪ್ರತಿರೋಧಿಸುವುದರಿಂದ ನಿಮಗೆ ನೋವುಂಟಾಗುತ್ತದೆ. ಯಾರಾದರೂ ನಿಮ್ಮನ್ನು ದೂಷಿಸಿದಾಗ, ಹೊರನೋಟಕ್ಕೆ ನೀವು ವಿರೋಧಿಸದಿರಬಹುದು, ಆದರೆ ಅಂತರಾಳದಲ್ಲಿ ನೀವು ಅದನ್ನು ವಿರೋಧಿಸಿದಾಗ, ಅದು ನಿಮಗೆ ನೋವುಂಟು ಮಾಡುತ್ತದೆ.

ಅಜ್ಞಾನಿಯು ಮಾತ್ರ, "ನೀವು ನನ್ನನ್ನು ನೋಯಿಸಬೇಡಿ, ನೀವು ನನ್ನನ್ನು ದೂಷಿಸದಿರುವುದು ಉತ್ತಮ, ಏಕೆಂದರೆ ಅದರಿಂದ ನನಗೆ ನೋವುಂಟಾಗುತ್ತದೆ" ಎಂದು ಎಚ್ಚರಿಸಬಹುದು. ಯಾರಾದರು ದೂಷಿಸಬೇಡಿ ಎಂದು ಏಕೆ ಎಚ್ಚರಿಸುತ್ತಾರೆಂದರೆ, ಅದು ಅವರಿಗೆ ನೋವುಂಟು ಮಾಡುತ್ತದೆ ಮತ್ತು ಅವರು ಆ ಪ್ರತೀಕಾರದಿಂದ ನಿಮಗೆ ಹಾನಿ ಮಾಡಬಹುದು ಎಂದು.

ಗುರುದೇವರ ಅಧಿಕೃತ ಬ್ಲಾಗನಲ್ಲಿ ಈ ಲೇಖನಗಳನ್ನು ಓದಿಒಬ್ಬ ಪ್ರಬುದ್ಧ ವ್ಯಕ್ತಿಯು ಮಾತ್ರ "ನನ್ನನ್ನು ದೂಷಿಸಬೇಡಿ ಏಕೆಂದರೆ ಅದರಿಂದ ನಿಮಗೆ ನೋವಾಗುತ್ತದೆ" ಎಂದು ಹೇಳಬಲ್ಲ. ಇಲ್ಲಿ ದೂಷಿಸಬೇಡಿ ಎಂದು ಹೇಳುತ್ತಿರುವುದು ಸಹಾನುಭೂತಿಯಿಂದ. ಹಾಗಾಗಿ ನೀವು ಯಾರಿಗಾದರೂ, “ದೂಷಿಸಬೇಡಿ” ಎಂದು ಸಹಾನುಭೂತಿಯಿಂದ ಹೇಳಬಹುದದು, ಇಲ್ಲ ಕೋಪದಿಂದಲೂ ಹೇಳಬಹುದು. 

ಗುರುದೇವರ ಅಧಿಕೃತ ಬ್ಲಾಗನಲ್ಲಿ ಈ ಲೇಖನಗಳನ್ನು ಓದಿ

1. What to do when someone blames you? : CLICK HERE TO READ
2. How to deal with blame? : CLICK HERE TO READ
3. 5 Tips to Get Past the Blame Game : CLICK HERE TO READ





ಸೋಷಿಯಲ್ ಮೀಡಿಯಾದಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರನ್ನು ಅನುಸರಿಸಿ:


ಕಾಮೆಂಟ್‌ಗಳು