1. ನಮಗೆ ಬಹಳ ಕಡಿಮೆ ತಿಳಿದಿದೆ ಎಂದು ಒಪ್ಪಿಕೊಳ್ಳುವುದು
ಅನೇಕರು, ವಾಸ್ತವದಲ್ಲಿ ಅವರಿಗೆ ತಿಳಿದಿರುವುದು ಸ್ವಲ್ಪ ಮಾತ್ರವೇ ಆದರೂ, ತಮಗೆ ಎಲ್ಲಾ ತಿಳಿದಿದೆ ಎಂದು ಭಾವಿಸುತ್ತಾರೆ ಇಲ್ಲವೇ ತಮ್ಮ ಸೀಮಿತ ಜ್ಞಾನದಲ್ಲಿ ಸಿಲುಕಿಕೊಳ್ಳುತ್ತಾರೆ. ಹೀಗಾಗಿ ಅವರು ಎಂದಿಗೂ ಹೊಸದನ್ನು ಕಲಿಯುವುದಿಲ್ಲ. ಆದ್ದರಿಂದ ಮೊದಲನೆಯ ಲಕ್ಷಣ ಒಬ್ಬರಿಗೆ ಬಹಳ ಕಡಿಮೆ ತಿಳಿದಿದೆ ಎಂದು ಒಪ್ಪಿಕೊಳ್ಳುವುದು.
2. ತಿಳಿಯುವ ಹಂಬಲ
ಅನೇಕ ಜನರು ತಮಗೆ ತಿಳಿದಿಲ್ಲವೆಂದು ಒಪ್ಪಿಕೊಳ್ಳುತ್ತಾರೆ, ಆದರೆ ಅವರು ಕಲಿಯಲು ಸಿದ್ಧವಿರುವುದಿಲ್ಲ.
3. ಮುಕ್ತ ಮನಸ್ಸಿನವರಾಗಿರುವುದು ಮತ್ತು ನಿರ್ಣಯಾತ್ಮಕವಾಗದೆ ಇರುವುದು
ಕೆಲವರು ಕಲಿಯಲು ಬಯಸುತ್ತಾರೆ ಆದರೆ ಅವರ ಸಂಕುಚಿತ ಮನೋಭಾವ ಮತ್ತು ಎಲ್ಲವನ್ನು ನಿರ್ಣಾಯಕ ದೃಷ್ಟಿಯಿಂದ ನೋಡುವ ಬುದ್ದಿ ಅವರನ್ನು ಕಲಿಯಲು ಬಿಡುವಿದಿಲ್ಲ.
4. ಆಯ್ಕೆ ಮಾಡಿದ ಹಾದಿಗೆ ಸಂಪೂರ್ಣ ಬದ್ಧತೆ ಮತ್ತು ನಿಶ್ಚಯತೆ
ಮತ್ತೆ ಕೆಲವರು ಮುಕ್ತ ಮನಸ್ಸಿನವರಾಗಿದ್ದರೂ, ಅವರಲ್ಲಿ ಬದ್ಧತೆ ಮತ್ತು ಏಕಮುಖತೆಯ ಕೊರತೆಯಿರುತ್ತದೆ. ಅವರು ಎಲ್ಲಾ ಕಡೆಯೂ ಶಾಪಿಂಗ್ ಮಾಡುತ್ತಿರುತ್ತಾರೆ ಮತ್ತು ಅದರಿಂದ ಎಂದಿಗೂ ಪ್ರಗತಿಯಾಗುವುದಿಲ್ಲ.
5. ಯಾವಾಗಲೂ ಸತ್ಯ ಮತ್ತು ಸೇವೆಗೆ, ಸುಖಕ್ಕಿಂತ ಹೆಚ್ಚಿನ ಪ್ರಾಧಾನ್ಯತೆ ನೀಡುವುದು
ಕೆಲವೊಮ್ಮೆ ಬದ್ಧತೆ ಮತ್ತು ಏಕಮುಖ ನಿಶ್ಚಯವಿರುವ ಜನರು ಸಹ ಕ್ಷಣಿಕ ಸುಖದ ಅನ್ವೇಷಣೆಯಲ್ಲಿ ಬಿದ್ದು ಮಾರ್ಗದಿಂದ ದೂರ ಉಳಿಯುತ್ತಾರೆ.
6. ತಾಳ್ಮೆ ಮತ್ತು ಪರಿಶ್ರಮ
ಮತ್ತೆ ಕೆಲವರು ಕ್ಷಣಿಕ ಸುಖಗಳಿಂದ ವಿಮುಖರಾಗುವುದಿಲ್ಲ ಮತ್ತು ಬದ್ಧರಾಗಿರುತ್ತಾರೆ. ಆದರೆ ಅವರಲ್ಲಿ ತಾಳ್ಮೆ ಮತ್ತು ಪರಿಶ್ರಮದ ಕೊರತೆಯಿದ್ದರೆ, ಅವರು ಪ್ರಕ್ಷುಬ್ಧರಾಗುತ್ತಾರೆ ಮತ್ತು ನಿರಾಶರಾಗುತ್ತಾರೆ.
ಗುರುದೇವರ ಅಧಿಕೃತ ಬ್ಲಾಗನಲ್ಲಿ ಈ ಲೇಖನಗಳನ್ನು ಓದಿ
1. 3 Modes of a Seeker | Explained by Gurudev : CLICK HERE TO READ
2. That which is convenient, you do not call commitment : CLICK HERE TO READ
3. Know that you are needed, you are useful : CLICK HERE TO READ
ಸೋಷಿಯಲ್ ಮೀಡಿಯಾದಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರನ್ನು ಅನುಸರಿಸಿ:
Instagram : https://www.instagram.com/srisriravishankar
Twitter : http://twitter.com/SriSriFacebook : https://www.facebook.com/SriSriRaviShankarK/
Website : http://srisri.org/
LinkedIn : https://in.linkedin.com/in/srisriravishankar

ಕಾಮೆಂಟ್‌ಗಳು