ಈ ಸೃಷ್ಟಿಯು ಪಂಚಭೂತಗಳಿಂದ ಮಾಡಲ್ಪಟ್ಟಿದೆ - ಭೂಮಿ, ನೀರು, ಬೆಂಕಿ, ಗಾಳಿ ಮತ್ತು ಆಕಾಶ, ಮತ್ತು ಈ ಐದು ಭೂತಗಳನ್ನು ‘ಲಿಂಗಂ’ ಎಂದೂ ಕರೆಯುತ್ತಾರೆ ಏಕೆಂದರೆ ಅವುಗಳು ‘ಎಲ್ಲಕ್ಕೂ ಮೀರಿದ್ದು ಯಾವುದೋ ಇದೆ’ ಎಂಬುದರ ಸೂಚ್ಯವಾಗಿದೆ. ಪ್ರಕಟಗೊಳ್ಳದ ಪ್ರಜ್ಞೆಯನ್ನು ಭೂಮಿಯು ಪ್ರತಿನಿಧಿಸುತ್ತದೆ, ಆದ್ದರಿಂದ ಭೂಮಿಯು ಒಂದು ಲಿಂಗವಾಗಿದೆ - ಅಂದರೆ ಭೂಮಿಯು ಆ ಪ್ರಜ್ಞೆಯನ್ನು ಗುರುತಿಸುತ್ತದೆ ಮತ್ತು ಅದು ಅನಂತತೆಯ ಸಂಕೇತವಾಗಿದೆ. ನೀರು ಸಹ ಅನಂತತೆಯ ಸಂಕೇತವಾಗಿದೆ. ನೀವು ಪರ್ವತವನ್ನು ನೋಡಿದಾಗ, ಆ ಪರ್ವತದಲ್ಲಿ ಶಕ್ತಿ ಇದೆ ಎಂದು ಅನಿಸುತ್ತದೆಯಲ್ಲವೇ. ಹಾಗೆಯೇ, ಎಲ್ಲಾ ಐದು ಅಂಶಗಳು ಸಹ ಈ ಸೃಷ್ಟಿಯಲ್ಲಿ ಕ್ರಮಬದ್ಧತೆಯನ್ನು ಕಾಪಾಡುವ ಪ್ರಜ್ಞೆ ಇದೆ ಎಂದು ನಿಮಗೆ ನೆನಪಿಸುತ್ತದೆ.
ನೀವು ಯಾವುದೇ ಕಲ್ಲನ್ನು ನೋಡಿದರೆ ಅದರಲ್ಲಿರುವ ಮಾದರಿಗಳು ಮತ್ತು ಬಣ್ಣಗಳನ್ನು ಗಮನಿಸಬಹುದು. ಕಲ್ಲುಗಳು ತುಂಬಾ ಮೋಹಕವಾಗಿರುತ್ತದೆ. ಅದರಲ್ಲಿ ಸಹ ಕ್ರಮಬದ್ಧತೆ ಇದೆ ಮತ್ತು ಆದ್ದರಿಂದ ಪ್ರಜ್ಞೆಯು ಇದೆ ಎಂಬುದನ್ನು ಇದು ಸೂಚಿಸುತ್ತದೆ. ನೀರಿಗೆ ಸಹ ಜೀವವಿದೆ, ನೆನಪೂ ಕೂಡ ಇದೆ. ನೀರಿಗೆ ಸ್ಮರಣ ಶಕ್ತಿ ಇರುವುದರ ಬಗ್ಗೆ ನೀವು ಕೇಳಿದ್ದೀರಾ? ಇದರ ಬಗ್ಗೆ ಗೂಗಲ್ ಮಾಡಿ ನೋಡಿ, ನೀರಿಗೆ ನೆನಪಿನ ಶಕ್ತಿ ಇದೆ ಎಂದು ಬಹಿರಂಗಪಡಿಸುವ ಅನೇಕ ಪ್ರಯೋಗಗಳ ಬಗ್ಗೆ ನೀವು ತಿಳಿದುಕೊಳ್ಳಬಹುದು. ನೀರು ಜೀವಂತವಾಗಿದೆ. ಮಹಾ ಚೇತನವನ್ನು ನೀರು ಬಿಂಬಿಸುತ್ತದೆ.
ಅಂತೆಯೇ, ಪ್ರಜ್ಞೆ ಇದೆ ಎಂದು ಬೆಂಕಿಯು ಸಹ ಸೂಚಿಸುತ್ತದೆ. ಶಿವತತ್ವದ ದೈವತ್ವವನ್ನು ಗಾಳಿಯು ನಿಮಗೆ ನೆನಪಿಸುತ್ತದೆ. ಹಾಗೆಯೇ ಒಂದು ಸರ್ವೋಚ್ಚ ಶಕ್ತಿ ಇದೆ ಎಂದು ಆಕಾಶ ತತ್ವವು ನಿಮಗೆ ತಿಳಿಸುತ್ತದೆ. ಆದ್ದರಿಂದ ಸೃಷ್ಟಿಯಲ್ಲಿನ ಈ ಎಲ್ಲಾ ಐದು ಅಂಶಗಳು ನಿಮಗೆ ಪ್ರಕಟವಾಗದ ಯಾವುದೊ ಒಂದರ ಬಗ್ಗೆ ಸೂಚನೆ ನೀಡುತ್ತಿದೆ, ಏಕೆಂದರೆ ಈ ಐದು ಅಂಶಗಳು ಪ್ರಕಟವಾಗಿವೆ, ಅದಕ್ಕಾಗಿಯೇ ಅವುಗಳನ್ನು ‘ಲಿಂಗಂ’ ಎಂದು ಕರೆಯಲಾಗುತ್ತದೆ.
ಎಲ್ಲದಕ್ಕಿಂತಲೂ ದೊಡ್ಡದಾದ, ವಿವರಣೆಗೆ ನಿಲುಕದ, ಅಮೂರ್ತವಾದ, ಎಲ್ಲ ಅಭಿವ್ಯಕ್ತಿಗಳಿಗೆ ಮೀರಿದ ಸತ್ಯವನ್ನು ಐದು ಅಂಶಗಳಲ್ಲಿ ವ್ಯಕ್ತಪಡಿಸಲಾಗುತ್ತದೆ.
ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರ ಅಧಿಕೃತ ಬ್ಲಾಗ್ನಲ್ಲಿ ಅವರ ಈ ಲೇಖನಗಳನ್ನು ಸಹ ಓದಬಹುದು:
1. The meaning of the Rudrabhishekam is to convey that everything is Shiva: CLICK HERE TO READ
2. Two Powerful Shiva Sutras that can transform your life: CLICK HERE TO READ
3. How Did the Twelve Jyotirlingas (Sacred Divine Shrines of Lord Shiva) Come into Existence?: CLICK HERE TO READ
ಸೋಷಿಯಲ್ ಮೀಡಿಯಾದಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರನ್ನು ಅನುಸರಿಸಿ:

ಕಾಮೆಂಟ್‌ಗಳು