ಪ್ರಾರ್ಥನೆ ಎಂದರೆ ಅದು ನಿಮ್ಮ ಮೇಲೆ ಅಥವಾ ಬೇರೆಯವರ ಮೇಲೆ ಹೇರಿಕೊಳ್ಳುವ ವಿಷಯವಲ್ಲ. ಸಹಾಯಕ್ಕಾಗಿ ಮಾಡುವ ಸ್ವಾಭಾವಿಕ ಕರೆ ಪ್ರಾರ್ಥನೆ, ಕೃತಜ್ಞತೆಯ ಸಹಜವಾದ ಅಭಿವ್ಯಕ್ತಿ ಪ್ರಾರ್ಥನೆ. ಪ್ರಾರ್ಥನೆಯು ಎರಡು ಸಂದರ್ಭಗಳಲ್ಲಿ ಮಾತ್ರ ಸಂಭವಿಸಬಹುದು:
1. ನಿಮಗೆ ಯಾವುದಾದರು ಅಗತ್ಯ ಬಂದಾಗ ನೀವು ಪ್ರಾರ್ಥಿಸುತ್ತೀರಿ. ನೀವು ದುರ್ಬಲರಾಗಿದ್ದೀರಿ ಮತ್ತು ಏನನ್ನಾದರೂ ನಿಭಾಯಿಸಲು ನಿಮ್ಮಿಂದ ಸಾಧ್ಯವಿಲ್ಲ ಎಂದು ನೀವು ತಿಳಿದುಕೊಂಡಾಗ, ಸಹಾಯವನ್ನು ಕೇಳುತ್ತೀರಿ ಮತ್ತು ಅದೇ ಪ್ರಾರ್ಥನೆಯಾಗುತ್ತದೆ.
2. ನಿಮ್ಮ ಅರ್ಹತೆಗಿಂತ ಹೆಚ್ಚಿನದ್ದನ್ನು ನೀವು ಸ್ವೀಕರಿಸಿದ್ದೀರಿ ಮತ್ತು ಅದು ನಿಮಗೆ ಆಶೀರ್ವಾದದ ರೀತಿಯಲ್ಲಿ, ಒಂದು ಉಡುಗೊರೆಯಾಗಿ ಸಿಕ್ಕಿದೆ ಎಂದು ನೀವು ಅರಿತುಕೊಂಡಾಗ, ನೀವು ವ್ಯಕ್ತಪಡಿಸುವ ಕೃತಜ್ಞತೆಯೇ ಪ್ರಾರ್ಥನೆಯಾಗುತ್ತದೆ. ಇನ್ನೂ ಮುಂದುವರಿದು ಇದನ್ನು ನೋಡಿದರೆ, ನೀವು ಈ ಇಡೀ ಸೃಷ್ಟಿಯ ಸೃಷ್ಟಿಕರ್ತ ಅಥವಾ ದೈವತ್ವದ ಬಗ್ಗೆ, ಯಾವುದೇ ರೂಪದಲ್ಲಿ ಅಥವಾ ನಿರಾಕಾರ ರೀತಿಯಲ್ಲಿ ಅದನ್ನು ನೀವು ಗ್ರಹಿಸಿರಬಹುದು, ಇದನ್ನು ನೀವು ಆಳವಾಗಿ ಪ್ರೀತಿಸುತ್ತಿರುವಾಗ, ನಿಮ್ಮಲ್ಲಿ ಪ್ರಾರ್ಥನೆಯು ಮೂಡುತ್ತದೆ ಮತ್ತು ಅದೇ ಭಕ್ತಿ.
ಆದ್ದರಿಂದ ಪ್ರಾರ್ಥನೆಯು ಸ್ವಯಂಪ್ರೇರಿತವಾಗಿ ನಡೆಯುವ ಸಂಗತಿಯಾಗಿದೆ, ಮತ್ತು ಪ್ರಾರ್ಥನೆಗೆ ಸಂಬಂಧಿಸಿದಂತೆ ಕೆಲವು ಆಚರಣೆಗಳನ್ನು ರೂಢಿಸಿಕೊಳ್ಳುವುದು ಒಳ್ಳೆಯದು, ಏಕೆಂದರೆ ಅದು ಜೀವನಕ್ಕೆ ಬಣ್ಣವನ್ನು ಸೇರಿಸುತ್ತದೆ. ಮೇಣದಬತ್ತಿ ಅಥವಾ ದೀಪವನ್ನು ಬೆಳಗಿಸಿ ಒಂದು ನಿರ್ದಿಷ್ಟ ರೀತಿಯಲ್ಲಿ ಪ್ರಾರ್ಥಿಸಿದಾಗ ನಿಮ್ಮಲ್ಲಿ ಸುಪ್ತವಾಗಿರುವ ಭಾವನೆಗಳು ಮೇಲೇರುತ್ತದೆ.
ಪ್ರಾರ್ಥನೆಯ ಪ್ರಯೋಜನಗಳು ಹೀಗಿವೆ:
1. ಇದು ನಿಮ್ಮೊಳಗೆ ಸುಪ್ತವಾಗಿರುವ ಭಾವನೆಗಳನ್ನು ಪ್ರೇರೇಪಿಸುತ್ತದೆ.
2. ಇದು ನಿಮ್ಮ ತಲೆಯಲ್ಲಿರುವ ಚಿಂತೆ ಮತ್ತು ಹೊರೆಯನ್ನು ದೂರ ಮಾಡುತ್ತದೆ.
3. ಇದು ನಿಮ್ಮಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ದೈವತ್ವದ ಕುರಿತಾಗಿ ನಿಮ್ಮ ಕಡೆಯಿಂದ ಸಂಪರ್ಕವನ್ನು ಅನುಭವಿಸುತ್ತೀರಿ. ದೈವದೊಂದಿಗೆ ಸದಾ ನಿಮ್ಮ ಸಂಪರ್ಕವಿರುತ್ತದೆ, ಆದರೆ ನಿಮ್ಮ ಕಡೆಯಿಂದ ಹೆಚ್ಚಿನ ಶಕ್ತಿಯೊಂದಿಗೆ ಈ ಸಂಪರ್ಕವನ್ನು ಅರಿತುಕೊಳ್ಳಲು ಪ್ರಾರಂಭಿಸುತ್ತೀರಿ.
4. ಇದು ನಿಮ್ಮನ್ನು ದಿನಚರಿಯಲ್ಲಿ ಇರಿಸುತ್ತದೆ. ಈಗ ನೀವು ಪ್ರತಿದಿನ ಪ್ರಾರ್ಥಿಸುವ ಅಭ್ಯಾಸವನ್ನು ಮಾಡಿಕೊಂಡಿದ್ದೀರಿ ಎಂದು ಭಾವಿಸೋಣ, ಬಹುಶಃ ಮೊದಲ ನಾಲ್ಕು ದಿನಗಳು ನಿಮಗೆ ಯಾವುದೇ ಮಹತ್ವದ ಅನುಭವವಾಗದೆ ಹೋಗಬಹುದು, ಆದರೆ ಐದನೇ ದಿನ, ನಿಮಗೆ ಒಂದು ದಿವ್ಯವಾದ ಅನುಭವ ಸಿಗಬಹುದು. ಇದು ಬಹುತೇಕ ಯಾವುದೇ ರೀತಿಯ ಸಾಧನೆಯಂತೆ. ಆದ್ದರಿಂದ ಪ್ರಾರ್ಥಿಸಿವುದನ್ನು ನಿಮ್ಮ ಜೀವನದಲ್ಲಿ ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಅಲೌಕಿಕವಾದದ್ದು ಏನಾದರೂ ಜೀವನದಲ್ಲಿ ಮಾಡಬಹುದೆಂದು ನಿಮಗೆ ತಿಳಿದಿರುತ್ತದೆ.
ಪ್ರಾರ್ಥನೆಯು, ಅಷ್ಟು ಸ್ಪಷ್ಟವಿಲ್ಲದ ಆದರೆ ಅಸ್ತಿತ್ವದಲ್ಲಿರುವ ಯಾವುದೋ ಶಕ್ತಿಯನ್ನು ಸಂಪರ್ಕಿಸುವ ಮಾರ್ಗವಾಗಿದೆ. ಅಜ್ಞಾತವಾದ ಮತ್ತು ಕಣ್ಣಿಗೆ ಕಾಣದಂತಹ ಶಕ್ತಿಯನ್ನು ಕಾಣಲು ಪ್ರಾರ್ಥನೆ ಒಂದು ಕೊಂಡಿಯಾಗಿರಬಹುದು. ಅಪರಿಚಿತವಾದದ್ದನ್ನು ಪ್ರೀತಿಸುವುದೇ ನಂಬಿಕೆ.
ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರ ಅಧಿಕೃತ ಬ್ಲಾಗ್ನಲ್ಲಿ ಅವರ ಈ ಲೇಖನಗಳನ್ನು ಸಹ ಓದಬಹುದು:
1. The Story of Radha & Parrot Shared By Gurudev | MUST READ : CLICK HERE TO READ.
2. The Story of Garuda & Lord Rama Shared by Gurudev : CLICK HERE TO READ.
3. Anxious About The Future? Read This Now: CLICK HERE TO READ.
ಸೋಷಿಯಲ್ ಮೀಡಿಯಾದಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರನ್ನು ಅನುಸರಿಸಿ:
Instagram : https://www.instagram.com/srisriravishankar
Twitter : http://twitter.com/SriSriFacebook : https://www.facebook.com/SriSriRaviShankarK/
Website : http://srisri.org/
LinkedIn : https://in.linkedin.com/in/srisriravishankar

ಕಾಮೆಂಟ್ಗಳು