ಎರಡೂ ಕಡೆಯಿಂದ ಬದಲಾವಣೆಯನ್ನು ಪುಷ್ಟಿಕರಿಸಬೇಕಿದೆ ಎಂದು ನಾವು ಭಾವಿಸುತ್ತೇವೆ - ನಮಗೆ ಮೇಲಿನ ಮಟ್ಟದಿಂದ ಹಾಗೂ ಕೆಳಗಿನ ಮಟ್ಟದಿಂದ ಬದಲಾವಣೆಯನ್ನು ತರುವ ಎರಡೂ ವಿಧಾನದ ಅಗತ್ಯವಿದೆ. ಹಿರಿಯ ಮಟ್ಟದಲ್ಲಿನವರನ್ನು ಕೇಳಿದರೆ, ಅವರು "ನಾವು ಏನೇ ಬದಲಾವಣೆಯನ್ನು ಮಾಡಲು ಪ್ರಯತ್ನಿಸಿದರೂ ಜನರು ವಿರೋಧಿಸುತ್ತಾರೆ. ಏನು ಮಾಡುವುದು?" ಎಂದು ಕೇಳುತ್ತಾರೆ.
ಈಗ, ಒಂದು ಧರ್ಮದ ಮುಖ್ಯಸ್ಥರು ಬದಲಾವಣೆಯನ್ನು ತರಲು ಬಯಸುತ್ತಾರೆ ಎಂದು ಭಾವಿಸೋಣ, ಆದರೆ ಅವರು ಜನರಿಂದ ಅಗಾಧವಾದ ಪ್ರತಿರೋಧವನ್ನು ಎದುರಿಸುತ್ತಾರೆ ಎಂದಿಟ್ಟುಕೊಳ್ಳಿ, ಆಗ ನಾವು ಎರಡೂ ಹಂತದಲ್ಲೂ ಕೆಲಸ ಮಾಡಬೇಕಾಗುತ್ತದೆ.
ನಾವು ಧರ್ಮವನ್ನು ಜಾತ್ಯತೀತಗೊಳಿಸಬೇಕು, ವ್ಯವಹಾರವನ್ನು ಸಾಮಾಜೀಕರಿಸಬೇಕು ಮತ್ತು ರಾಜಕೀಯವನ್ನು ಆಧ್ಯಾತ್ಮಿಕಗೊಳಿಸಬೇಕು. ರಾಜಕೀಯವನ್ನು ಆಧ್ಯಾತ್ಮಿಕಗೊಳಿಸುವುದು ಎಂದರೆ, ಪ್ರತಿಯೊಬ್ಬ ರಾಜಕಾರಣಿಯು ತನ್ನ ಕೆಲಸವನ್ನು ಕೇವಲ ಒಂದು ಕೆಲಸವಾಗಿ ನೋಡುವುದನ್ನು ಬಿಟ್ಟು ಅದನ್ನು ಸೇವಾ ಚಟುವಟಿಕೆಯಾಗಿ ನೋಡಬೇಕು. ಉದಾಹರಣೆಗೆ, ಮಹಾತ್ಮ ಗಾಂಧಿಯವರ ಕಾಲದಲ್ಲಿ ಅವರು ಮತ್ತು ಇತರರು ಸಮಾಜಕ್ಕೆ ಸೇವೆಯನ್ನು ಮಾಡುವ ಉದ್ದೇಶದಿಂದ ರಾಜಕೀಯಕ್ಕೆ ಬಂದವರು.
ಧರ್ಮವನ್ನು ಜಾತ್ಯತೀತಗೊಳಿಸುವುದು ಎಂದರೆ, ಪ್ರತಿಯೊಬ್ಬ ಧಾರ್ಮಿಕ ಮುಖ್ಯಸ್ಥರು ಇಡೀ ಜನಾಂಗಕ್ಕಾಗಿ ಪ್ರಾರ್ಥಿಸಬೇಕು, ಕೇವಲ ಅವರ ಧರ್ಮದ ಇಲ್ಲ ಸಮುದಾಯದ ಜನರಿಗಾಗಿ ಅಲ್ಲ. ಅಂದರೆ ಅವರು ಇತರ ಎಲ್ಲ ಧರ್ಮಗಳನ್ನು ಗೌರವಿಸಬೇಕು. ವ್ಯವಹಾರವನ್ನು ಸಾಮಾಜೀಕರಿಸಬೇಕು ಎಂದರೆ ಸಮಾಜವನ್ನು ಅಭಿವೃದ್ಧಿಪಡಿಸುವಲ್ಲಿ ಪ್ರತಿಯೊಂದು ವ್ಯಾಪಾರ ಘಟಕವೂ ಸಹ ಒಂದು ಪಾತ್ರವನ್ನು ವಹಿಸಬೇಕು.
ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರ ಅಧಿಕೃತ ಬ್ಲಾಗ್ನಲ್ಲಿ ಅವರ ಈ ಲೇಖನಗಳನ್ನು ಸಹ ಓದಬಹುದು:
1. Everyone has a role to play when the world is in turmoil - CLICK HERE TO READ
2. 10 attributes of a great leader - CLICK HERE TO READ
3. Purpose of Religion and Politics - CLICK HERE TO READ
ಸೋಷಿಯಲ್ ಮೀಡಿಯಾದಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರನ್ನು ಅನುಸರಿಸಿ:

ಕಾಮೆಂಟ್‌ಗಳು