ಪ್ರಶ್ನೆ 36. ಗುರುದೇವ, ಉತ್ಸಾಹಭರಿತ ಜನರನ್ನು ನೋಡಿದಾಗ, ಅವರು ತೋರ್ಪಡಿಕೆಯ ಪ್ರದರ್ಶನ ಮಾಡುತ್ತಿದ್ದಾರೆ ಎಂದು ನನ್ನ ಮನಸ್ಸಿಗೆ ಬರುವುದು. ಇದರ ಬಗ್ಗೆ ನಿಮ್ಮ ಯೋಚನೆ ಏನು?
ನೀವು ಏಕೆ ಅವರನ್ನು ನಿರ್ಣಯಿಸಲು ಬಯಸುತ್ತೀರಿ? ಅವರಿಗೆ ಏನು ಮಾಡಬೇಕೆನ್ನಿಸುತ್ತದೋ ಅವರು ಅದನ್ನು ಮಾಡಲಿ. ನಿಮ್ಮ ಬಳಿ ಹೆಚ್ಚು ಸಮಯವಿದೆ ಎಂದು ತೋರುತ್ತದೆ. ಅವರನ್ನು ನಿರ್ಣಯಿಸಲು ಹೋಗಬೇಡಿ. ಅವರು ತೋರ್ಪಡಿಕೆಯ ಪ್ರದರ್ಶನ ಮಾಡಿದರೆ, ಮಾಡಲಿ. ಅವರ ಬಳಿ ಪ್ರದರ್ಶಿಸಲು ಏನೋ ಇದೆ, ಆದ್ದರಿಂದ ಅವರು ಪ್ರದರ್ಶಿಸುತ್ತಿದ್ದಾರೆ. ನಿಮ್ಮ ಬಳಿ ತೋರ್ಪಡಿಸಿಕೊಳ್ಳಲು ಏನಾದರೂ ಇದ್ದರೆ, ನೀವು ಸಹ ಪ್ರದರ್ಶಿಸಿ (ನಗು). ನಿಮಗೆ ಇಷ್ಟವಿಲ್ಲದಿದ್ದರೆ, ಸುಮ್ಮನಿರಿ ಪ್ರದರ್ಶನ ಮಾಡಬೇಡಿ.
ಬೇರೆಯವರ ತೋರ್ಪಡಿಕೆ ನಿಮಗೆ ಏಕೆ ಕಿರಿಕಿರಿ ಉಂಟು ಮಾಡಬೇಕು? ನಾವು ಹೇಳುತ್ತಿರುವುದು ನಿಮಗೆ ಅರ್ಥವಾಗುತ್ತಿದೆಯೇ? ಇದನ್ನೆಲ್ಲ ಒಂದು ಆಟದಂತೆ ಭಾವಿಸಿ. ಯಾರಾದರೂ ತೋರ್ಪಡಿಕೆಯ ಪ್ರದರ್ಶನ ಮಾಡಲು ಬಯಸಿದರೆ, ಅವರು ಹಾಗೆಯೇ ಇರಲಿ. ಅವರು ಹೆಚ್ಚು ಪ್ರದರ್ಶಿಸಿದರೆ, ಆಗ ಅವರೇ ತಮ್ಮ ಸಹಜ ಸೊಬಗನ್ನು ಕಳೆದುಕೊಳ್ಳುತ್ತಾರೆ. ನೀವು ನಿಮ್ಮ ಬಗ್ಗೆ ಹೆಚ್ಚು ಯೋಚಿಸಬೇಕು ಮತ್ತು ನೀವು ಎಷ್ಟು ಹೆಚ್ಚು ಸಹಜವಾಗಿದ್ದಿರ ಎಂಬುದರ ಬಗ್ಗೆ ಪ್ರತಿಬಿಂಬಿಸಬೇಕು. ನೀವು ಹೆಚ್ಚು ವ್ಯವಹಾರಿಕ ಚತುರತೆ ಹೊಂದಿದ್ದೀರಾ? ಹೆಚ್ಚು ಬುದ್ಧಿವಂತರಾಗಿದ್ದೀರಾ? ಪ್ರದರ್ಶನದ ಬದಲಿಗೆ ಇದರ ಬಗ್ಗೆ ಪ್ರತಿಬಿಂಬಿಸಿ.
ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರ ಅಧಿಕೃತ ಬ್ಲಾಗ್ನಲ್ಲಿ ಅವರ ಈ ಲೇಖನಗಳನ್ನು ಸಹ ಓದಬಹುದು:
1. Are you problems real? - Mind blowing article by Gurudev: CLICK HERE TO READ
2. Take life with enthusiasm - Read before it's too late: CLICK HERE TO READ
ಸೋಷಿಯಲ್ ಮೀಡಿಯಾದಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರನ್ನು ಅನುಸರಿಸಿ:

ಕಾಮೆಂಟ್‌ಗಳು