ಪ್ರಶ್ನೆ38. ಗುರುದೇವ, ವೈಯಕ್ತಿಕ ಮತ್ತು ಆಧ್ಯಾತ್ಮಿಕ ಪರಿವರ್ತನೆಯಲ್ಲಿ ನೋವಿನ ಪಾತ್ರವೇನು?

 

ಗುರುದೇವ್ ಶ್ರೀ ಶ್ರೀ ರವಿಶಂಕರ್:

ನೋವು ಅನಿವಾರ್ಯ; ಸಂಕಟದಿಂದ ಬಳಲುವುದು ನಿಮ್ಮ ಆಯ್ಕೆ. ನೀವು ಇದನ್ನು ಮುಂಚೆ ಕೇಳಿದ್ದೀರಿ, ಅಲ್ಲವೇ? ನೋವು ಕೇವಲ ಒಂದು ಆಳವಾದ ಸಂವೇದನೆ ಅಷ್ಟೇ. ಅದನ್ನು ಸಮರ್ಥಿಸಬೇಡಿ ಅಥವಾ ಪ್ರೋತ್ಸಾಹಿಸಬೇಡಿ. ಕೆಲವರು ನೋವನ್ನು ಸಮರ್ಥಿಸಲು ಅಥವಾ ಪ್ರೋತ್ಸಾಹಿಸಲು ಪ್ರಾರಂಭಿಸುತ್ತಾರೆ. ಆಗ ಆತ್ಮಪೀಡನೆ ಪ್ರಾರಂಭವಾಗುತ್ತದೆ. ನೀವು ಆತ್ಮಪೀಡನೆಯಿಂದ ದೂರವಿರಬೇಕು, ಹಾಗಾಗಿ ನಾವು ಹೇಳುವುದು ಏನೆಂದರೆ, ಜೀವನದಲ್ಲಿ ನೋವಿನ ಅನುಭವವಾಗುತ್ತಿದ್ದರೆ ಅದು ಕೆಲವು ಕರ್ಮಗಳ ಫಲ ಎಂದು ಭಾವಿಸಿ. ಅಷ್ಟೇ! ಹಾಗು ಅದನ್ನು ಅಲ್ಲೇ ಬಿಟ್ಟು ಮುಂದೆ ಸಾಗಿ.

ಕರ್ಮ-ಸಿದ್ಧಾಂತವು ಮನಸ್ಸನ್ನು ಕಾಪಾಡುವ ಆರೋಗ್ಯಕರ ವಿಷಯವಾಗಿದೆ. ಇದು ಮನಸ್ಸಿಗೆ ಒಳ್ಳೆಯ ಚುಚ್ಚುಮದ್ದು ಇದ್ದಂತೆ.  ನೋವನ್ನು ಕರ್ಮದ ಫಲ ಎಂದು ತಿಳಿದಾಗ, ಅದರ ಕುರಿತಾದ ಚಿಂತೆಯನ್ನು ಬಿಟ್ಟು ಮುಂದುವರಿಯಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಹಿಂದೆ ಏನಾಗಿದೆ ಎನ್ನುವ ಬಗ್ಗೆಯೇ ಯೋಚಿಸುತ್ತ ಅದಕ್ಕೆ ಕಾರಣಗಳನ್ನು ಹುಡುಕುತ್ತ ಅದರ ಸುತ್ತಲೂ ಸುತ್ತು ಹೊಡೆಯುತ್ತಿರುತ್ತೀರಿ.

ನೀವು ಹಿಂತಿರುಗಿ ನೋಡಿದರೆ, ಕಾರಣವೆಂದು ಯಾವುದನ್ನು ಯೋಚಿಸಿರುತ್ತೀರೋ ಅದು ಕರಣವಾಗಿರುವುದಿಲ್ಲ, ಅದುಕೂಡ ಯಾವುದರದೋ ಪರಿಣಾಮವಾಗಿರುತ್ತದೆ. ಪ್ರತಿ ಬಾರಿಯೂ ನೀವು ಏನನ್ನಾದರೂ ಮೂಲಕಾರಣವೆಂದು ತಿಳಿದು ಅದನ್ನು ಸರಿಪಡಿಸಿದಾಗ, ಅದರಿಂದ ತಪ್ಪಾಗಿರುತ್ತದೆ. ಆಮೇಲೆ ಅದು ನಿಜವಲ್ಲ ಎಂಬುದನ್ನು ನೀವು ಕಂಡುಕೊಂಡಿರುತ್ತೀರಿ; ಅದು ಸಮಯದ ಪರೀಕ್ಷೆಯ ಮುಂದೆ ಸೋತಿರುತ್ತದೆ. ಯಾವುದೇ ಕಾರಣವು ಸಮಯದ ಪರೀಕ್ಷೆಯ ಮುಂದೆ ನಿಲ್ಲುವುದಿಲ್ಲ; ಏಕೆಂದರೆ ಪ್ರತಿಯೊಂದು ಕಾರಣವೂ ಒಂದು ಪರಿಣಾಮವಾಗಿದೆ. ಇದು ಆಧ್ಯಾತ್ಮಿಕ ಮಾರ್ಗ. ನೀವು ಈ ದಿಕ್ಕಿನಲ್ಲಿ ಯೋಚಿಸಿದಾಗ ಮತ್ತು ಮೂಲಕಾರಣದೊಳಗೆ  ಆಳವಾಗಿ ಇಳಿದಾಗ, ಇಡೀ ಅಸ್ತಿತ್ವಕ್ಕೆ ಕಾರಣೀಭೂತವಾಗಿರುವ ಒಂದೇ ಒಂದು ವಿಷಯವಿದೆ ಎಂಬುದನ್ನು ಕಂಡುಕೊಳ್ಳುತ್ತೀರಿ. ಈ ಒಂದು ಸಾಕ್ಷಾತ್ಕಾರದಿಂದ, ನಿಮ್ಮ ಶಾಂತಿಯನ್ನು ಯಾರೊಬ್ಬರಿಂದಲೂ ಅಥವಾ ಈ ಗ್ರಹದಲ್ಲಿ ನಡೆಯುವ ಯಾವುದೇ ಘಟನೆಯಿಂದಲೂ ಕಸಿದುಕೊಳ್ಳಲು ಸಾಧ್ಯವಾಗುವುದಿಲ್ಲ. ನಿಮಗಿದು ತಿಳಿದಿದ್ದರೆ ನಿಮ್ಮನ್ನು ಯಾವುದೂ ಅಲುಗಾಡಿಸಲು ಸಾಧ್ಯವಿಲ್ಲ!

ಅದಕ್ಕಾಗಿಯೇ ಸಂಸ್ಕೃತದಲ್ಲಿ "ತಸ್ಮೈ ನಮಃ  ಪರಮ ಕಾರಣ ಕಾರಣಾಯ" ಎನ್ನುವ ಸುಂದರವಾದ ಶ್ಲೋಕವಿದೆ. ಈಶ್ವರ, ನೀನು ಎಲ್ಲ ಕಾರಣಗಳಿಗೂ ಕಾರಣೀಭೂತ, ಸಮಯವನ್ನು ಮೀರಿ ಕಾಲಾತೀತನಾಗಿರುವ ಮಹಾಕಾಲ, ನಿನಗೆ ನಮ್ಮ ನಮನಗಳು, ಎಂದು. ಇದನ್ನು ತಿಳಿಯದಿದ್ದರೆ ನಾವು ಈ ಕರ್ಮ ಚಕ್ರದಲ್ಲಿ ಸುತ್ತುತ್ತಲೇ ಇರುತ್ತೇವೆ.

ನಾವು ಹೇಳುತ್ತಿರುವ ವಿಷಯದ ಬಗ್ಗೆ ನೀವು ಹೆಚ್ಚು ಗಮನ ಹರಿಸದಿದ್ದರೆ, ಇದು ಇನ್ನಷ್ಟು ಗೊಂದಲ ನೀಡುತ್ತದೆ, ಹೌದು. ಎರಡು ವಿಷಯಗಳಿವೆ, ಮೊದಲನೆಯದು - ಕರ್ಮ. ಅಂದರೆ, ಕಾರಣ ಮತ್ತು ಪರಿಣಾಮ. ಇನ್ನೊಂದು ಕರ್ಮವನ್ನು ದಾಟಿ ಮುಂದೆ ಸಾಗುವುದು. ಈ  ಕರ್ಮ-ಚಕ್ರದಿಂದ ನೀವು ಹೇಗೆ ಹೊರಬರುತ್ತೀರಿ ಎಂಬುದು. ಇದನ್ನು ನೀವು ಅರ್ಥೈಸಿಕೊಳ್ಳುತ್ತಿದ್ದೀರಾ? ಇದನ್ನು ನೀವು ಮತ್ತೊಮ್ಮೆ ವಿಚಾರ ಮಾಡಬೇಕು. ಈ ಕರ್ಮ ಸಿದ್ಧಾಂತವು ನಿಮಗೆ ನೋವನ್ನು ತ್ಯಜಿಸಿ ಮುಂದೆ ಸಾಗಲು ಬಹು ದೊಡ್ಡ ವರದಾನವಾಗಿದೆ.

ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರ ಅಧಿಕೃತ ಬ್ಲಾಗ್ನಲ್ಲಿ ಅವರ ಈ ಲೇಖನಗಳನ್ನು ಸಹ ಓದಬಹುದು:

1. How to overcome suffering? by Gurudev: CLICK HERE TO READ

2. Pain is inevitable but suffering is option | Gurudev: CLICK HERE TO READ





ಸೋಷಿಯಲ್ ಮೀಡಿಯಾದಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರನ್ನು ಅನುಸರಿಸಿ:

ಕಾಮೆಂಟ್‌ಗಳು